ಬೆಂಗಳೂರು: ನಟಿ ಅಮೃತಾ ಅಯ್ಯಂಗಾರ್ ಈ ವರ್ಷ ಗುರುದೇವ್ ಹೊಯ್ಸಳ ಸಿನೆಮಾ ಮೂಲಕ ಪ್ರೇಕ್ಷಕರ ಮುಂದೆ ಬರುವ ತಯಾರಿಯಲ್ಲಿ ಇದ್ದಾರೆ. ನಟ ಡಾಲಿ ಧನಂಜಯ್ ಜತೆ ಮೂರನೆ ಬಾರಿಗೆ ಅಮೃತಾ ಹಂಚಿಕೊಂಡಿದ್ದಾರೆ.
ಸಿನೆಮಾದ ಬಗ್ಗೆ ಅಮೃತಾ ಸಾಕಷ್ಟು ನಿರೀಕ್ಷೆಯಲ್ಲಿದ್ದಾರೆ. ಈ ಚಿತ್ರದಲ್ಲಿ ನಾನು ಗಂಗಾ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಗಂಗಾ ಪೊಲೀಸ್ ಆಫೀಸರ್ ಗುರುದೇವ್ ಹೊಯ್ಸಳನ ಹೆಂಡತಿ ಪಾತ್ರವಾಗಿದೆ. ಅದರೊಂದಿಗೆ ಗಂಗಾ ಭರತನಾಟ್ಯ ಹೇಳಿಕೊಡುವ ಟೀಚರ್ ಆಗಿಯೂ ಕಾಣಿಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.