News Karnataka Kannada
Monday, April 29 2024
ಸಾಂಡಲ್ ವುಡ್

ದಾವಣಗೆರೆ: ಶುಕ್ರವಾರ ತೆರೆಕಾಣಲಿದೆ ಭೂಗತ ಲೋಕದ ಕಥೆ ಹೇಳುವ “ಹೆಡ್ ಬುಷ್”

Bengaluru: #ವಿ stand with Dhananjay is trending on social media
Photo Credit : By Author

ದಾವಣಗೆರೆ: ರಾಜ್ಯದಾದ್ಯಂತ ಇದೇ ಶುಕ್ರವಾರ ತೆರೆಕಾಣಲಿರುವ ಡಾಲಿ ಧನಂಜಯ ನಟನೆಯ ಹೆಡ್ ಬುಷ್ ಚಿತ್ರ ಭೂಗತ ಲೋಕದ ಕಥೆಯನ್ನು ತೆರೆದಿಡಲಿದೆ. ಭೂಗತ ಲೋಕದ ದೊರೆ ಎಂ.ಪಿ.ಜಯರಾಜ್ ಪಾತ್ರದಲ್ಲಿ ಧನಂಜಯ್ ನಟಿಸಿದ್ದು ಬಹುನಿರೀಕ್ಷಿತ ಚಿತ್ರವಾಗಿದೆ.

ಒಂದು ಕಾಲದಲ್ಲಿ ಇಡೀ ಭೂಗತ ಲೋಕವನ್ನು ಆಳಿದ ದೊರೆಗಳ ಕಥೆ ಇದಾಗಿದ್ದು,ಅಗ್ನಿ ಶ್ರೀಧರ್ ಅವರುಕಥೆ, ಚಿತ್ರಕಥೆ ರಚಿಸಿರುವ ಈ ಚಿತ್ರಕ್ಕೆ  ಶೂನ್ಯ ಆ್ಯಕ್ಷನ್ ಕಟ್ ಹೇಳಿದ್ದಾರೆ. ಈ ಚಿತ್ರದ ಪ್ರಚಾರ ಕಾರ್ಯ ಕಳೆದ ತಿಂಗಳಿನಿಂದ ಭರ್ಜರಿಯಾಗಿ ನಡೆದಿದ್ದು, ಶುಕ್ರವಾರ ತೆರೆ ಕಾಣುತ್ತಿದೆ.

ಇದರ ಅಂಗವಾಗಿ ಚಿತ್ರದ ಪ್ರೀರಿಲೀಸ್ ಕಾರ್ಯಕ್ರಮ ದಾವಣಗೆರೆಯಲ್ಲಿ ಅದ್ದೂರಿಯಾಗಿ ನೆರವೇರಿದ್ದು ದಾವಣಗೆರೆಯ ಬಾಪೂಜಿ ಎಂಬಿಎ ಕಾಲೇಜು ಆವರಣದಲ್ಲಿ ಕಿಕ್ಕಿರಿದು ಸೇರಿದ್ದ ಜನಸಾಗರದ ನಡುವೆ ನಡೆದ “ಹೆಡ್ ಬುಷ್” ಚಿತ್ರದ ವರ್ಣರಂಜಿತ ಕಾರ್ಯಕ್ರಮ ಅಭಿಮಾನಿಗಳ ಕಣ್ಣಿಗೆ ಹಬ್ಬವನ್ನುಂಟು ಮಾಡಿತು. ಮಳೆಯ ನಡುವೆಯೂ ಚಂದನವನದ ತಾರೆಗಳನ್ನು ದಾವಣಗೆರೆ ಜನತೆ ಕಣ್ತುಂಬಿಕೊಂಡರು.

ಅಪ್ಪು ಸ್ಮರಣೆಯಲ್ಲೇ ಶುರುವಾದ ಸಮಾರಂಭದಲ್ಲಿ ಮೋಹಕತಾರೆ ರಮ್ಯ,ರಚಿತಾ ರಾಮ್, ಲೂಸ್ ಮಾದಯೋಗಿ, ನೀನಾಸಂ ಸತೀಶ್, ಅಮೃತಾ  ಅಯ್ಯಂಗಾರ್, ಸಪ್ತಮಿಗೌಡ, ಸಂಜನಾ, ಕಾರ್ತೀಕ್ ಗೌಡ, ಯೋಗಿ ಜಿ.ರಾಜ್ ಸೇರಿದಂತೆ ಚಿತ್ರರಂಗದ ಹಲವಾರು ಗಣ್ಯರು ಪಾಲ್ಗೊಂಡಿದ್ದರು.

ನಾಯಕಿ ಪಾಯಲ್ ರಜಪೂತ್ ಮಾತನಾಡಿ ಕನ್ನಡ ನೆಲ ಇಲ್ಲಿನ ಸಂಸ್ಕ್ರತಿ ನನಗಿಷ್ಟ. ಈ ಸಿನಿಮಾ ನನಗೆ ತುಂಬಾನೇ ಪ್ರಮುಖ. ನನ್ನ ಪಾತ್ರಕ್ಕೆ  ನಾನೇ ಡಬ್ ಮಾಡಿದ್ದೇನೆ ಎಂದಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು