News Karnataka Kannada
Friday, May 03 2024
ಸಾಂಡಲ್ ವುಡ್

ಬೆಂಗಳೂರು: ಏ. 7 ರಂದು ತೆರೆಗೆ ಬರಲಿದೆ ಪೆಂಟಗನ್ ಚಿತ್ರ

Pentagon to hit the screens on April 7
Photo Credit : Facebook

ಬೆಂಗಳೂರು: ಗುರು ದೇಶಪಾಂಡೆ ನಿರ್ಮಿಸಿ ನಿರ್ದೇಶಿಸಿರುವ ಪೆಂಟಗನ್ ಚಿತ್ರ ಈ ಚಿತ್ರ ಏಪ್ರಿಲ್ 7 ರಂದು ಬಿಡುಗಡೆಯಾಗಲಿದೆ. ಚಿತ್ರತಂಡವೇ ಅಧಿಕೃತವಾಗಿ ಘೋಷಿಸಿದ್ದು ಐದು ಕಥೆಗಳನ್ನು ಏಕಕಾಲದಲ್ಲಿ ತೆರೆಯ ಮೇಲೆ ಹೇಳಲಾಗುತ್ತಿದೆ.

ಇತ್ತೀಚೆಗಷ್ಟೇ ಚಿತ್ರದ ಹಾಡುಗಳು ಬಿಡುಗಡೆಯಾಗಿ ಮೆಚ್ಚುಗೆ ಗಳಿಸುತ್ತಿರುವುದಕ್ಕೆ ಚಿತ್ರತಂಡ ಖುಷಿಯಾಗಿದೆ. ‘ಪೆಂಟಗನ್’ ಚಿತ್ರದ ಮೂರನೇ ಕಥೆಯ ಕಾಮನಬಿಲ್ಲು ಮೂಡುತಿದೆ ಎಂಬ ರೋಮ್ಯಾಂಟಿಕ್ ಲಿರಿಕಲ್ ವಿಡಿಯೋ ಸಾಂಗ್ ಬಿಡುಗಡೆಯಾಗಿದೆ. ನಾಗಾರ್ಜುನ ಶರ್ಮಾ ಅವರ ಸಾಹಿತ್ಯವಿರುವ ಈ ಹಾಡಿಗೆ ಮಣಿಕಾಂತ್ ಕದ್ರಿ ಸಂಗೀತ ನೀಡಿದ್ದಾರೆ. ಸಂತೋಷ್ ವೆಂಕಿ ಮತ್ತು ಇಂಚರ ರಾವ್ ಹಾಡನ್ನು ಹಾಡಿದ್ದಾರೆ.

ರಘು ಶಿವಮೊಗ್ಗ ನಿರ್ದೇಶನದ “ಪೆಂಟಗನ್” ಮೂರನೇ ಅಧ್ಯಾಯದಲ್ಲಿ ಪ್ರಕಾಶ್ ಬೆಳವಾಡಿ, ತನಿಶಾ ಕುಪ್ಪಂಡ, ಪ್ರೇರಣಾ, ಸಾಗರ್ ಮತ್ತು ರಾಕೇಶ್ ಮುಂತಾದ ಕಲಾವಿದರು ಪ್ರಮುಖ ಪಾತ್ರಗಳಲ್ಲಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು