ಮಾಪುಟೊ: ಮೊಜಾಂಬಿಕ್ನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಮಕ್ಕಳು ಸೇರಿದಂತೆ ಕನಿಷ್ಠ 17 ಜನರು ಸಾವನ್ನಪ್ಪಿದ್ದಾರೆ ಎಂದು ಮೊಜಾಂಬಿಕ್ ರಾಜ್ಯ ರೇಡಿಯೊ ಚಾನೆಲ್ ರೇಡಿಯೊ ವರದಿ ಮಾಡಿದೆ.
ಸೋಫಾಲಾದ ಕೇಂದ್ರ ಪ್ರಾಂತ್ಯದ ನ್ಮತಾಂಡಾ ಜಿಲ್ಲೆಯಲ್ಲಿ ಪ್ರಯಾಣಿಕರ ಮಿನಿಬಸ್ ಮತ್ತು ಟ್ರಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಮೂವರು ಗಂಭೀರವಾಗಿ ಗಾಯಗೊಂಡು, 17 ಮಂದಿ ಸಾವನ್ನಪ್ಪಿದ್ದಾರೆ ಎಂದು ಸೋಫಾಲಾದ ರಾಜ್ಯ ಕಾರ್ಯದರ್ಶಿ ಸ್ಟೆಲ್ಲಾ ತಿಳಿಸಿದ್ದಾರೆ.
ಗಾಯಗೊಂಡವರನ್ನು ನ್ಮತಾಂಡಾ ಗ್ರಾಮೀಣ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ನಂತರ ಪ್ರಾಂತೀಯ ರಾಜಧಾನಿ ಬೈರಾದಲ್ಲಿರುವ ಬೈರಾ ಸೆಂಟ್ರಲ್ ಆಸ್ಪತ್ರೆಗೆ ವರ್ಗಾಯಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದೆ. “ಪ್ರಾಥಮಿಕ ವರದಿಗಳ ಪ್ರಕಾರ, ಸಿಮೆಂಟ್ ಸಾಗಿಸುತ್ತಿದ್ದ ಕಾರ್ಗೋ ಟ್ರಕ್ಗೆ ಮಿನಿಬಸ್ ಡಿಕ್ಕಿ ಹೊಡೆದಿದೆ ಎಂಬ ಮಾಹಿತಿಯಿದೆ.