News Karnataka Kannada
Thursday, May 02 2024
ಸಾಂಡಲ್ ವುಡ್

ಸ್ಯಾಂಡಲ್ ವುಡ್: ಇಂದು 36ನೇ ವರ್ಷಕ್ಕೆ ಕಾಲಿಟ್ಟ ಡಾಲಿ ಧನಂಜಯ್!

Sandalwood: Dolly Dhananjay turns 36 today!
Photo Credit :

ಸ್ಯಾಂಡಲ್ ವುಡ್: ಡಾಲಿ ಧನಂಜಯ್ ಅವರು ಇಂದು 36ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಅವರು ಈ ಬಾರಿ ಸಾರ್ವಜನಿಕವಾಗಿ ಬರ್ತ್​​ಡೇ ಆಚರಿಸಿಕೊಳ್ಳುತ್ತಿಲ್ಲ.

ಧನಂಜಯ್ ಫ್ಯಾನ್ಸ್ ಸೋಶಿಯಲ್ ಮೀಡಿಯಾದಲ್ಲಿ ನೆಚ್ಚಿನ ನಟನಿಗೆ ಶುಭಾಶಯ ತಿಳಿಸುತ್ತಿದ್ದಾರೆ. ಹಲವು ಸೆಲೆಬ್ರಿಟಿಗಳು ಡಾಲಿಗೆ ಬರ್ತ್​ಡೇ ಶುಭಾಶಯ ತಿಳಿಸುತ್ತಿದ್ದಾರೆ.

ಸದ್ಯ ಧನಂಜಯ್ ಕೈಯಲ್ಲಿ ಏಳಕ್ಕೂ ಹೆಚ್ಚು ಸಿನಿಮಾಗಳು ಇವೆ. ಸ್ಯಾಂಡಲ್​ವುಡ್​ನ ಬ್ಯುಸಿ ಹೀರೋಗಳ ಪೈಕಿ ಧನಂಜಯ್ ಮುಂಚೂಣಿಯಲ್ಲಿ ಇದ್ದಾರೆ.

ಪುನೀತ್ ರಾಜ್​ಕುಮಾರ್ ನಿಧನ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಇನ್ನೂ ಸೂತಕದ ಛಾಯೆ ಇದೆ. ಈ ಕಾರಣಕ್ಕೆ ಧನಂಜಯ್ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ.

‘ಬರ್ತ್​ಡೇಗೂ ಮೊದಲೇ ಸೆಲೆಬ್ರೇಷನ್ ಆರಂಭಿಸುತ್ತೀರಿ. ಬೇರೆಬೇರೆ ಕಡೆ ನನ್ನ ಹೆಸರಲ್ಲಿ ಸಾಮಾಜಿಕ ಕೆಲಸ ಮಾಡುತ್ತಿದ್ದೀರಿ. ಕಳೆದ ಎರಡು ವರ್ಷಗಳಿಂದ ಕೊವಿಡ್ ಕಾರಣಕ್ಕೆ ಬರ್ತ್​​ಡೇ ಆಚರಣೆ ಸಾಧ್ಯವಾಗಿಲ್ಲ. ಈ ವರ್ಷವೂ ಬರ್ತ್​​ಡೇ ಆಚರಿಸಿಕೊಳ್ಳುವ ಸ್ಥಿತಿಯಲ್ಲಿ ನಾನು ಇಲ್ಲ. ಅಪ್ಪು ಅಗಲಿ ಒಂದು ವರ್ಷವೂ ಆಗಿಲ್ಲ. ಶಿವಣ್ಣ ಕೂಡ ಹುಟ್ಟುಹಬ್ಬ ಆಚರಿಸಿಕೊಂಡಿಲ್ಲ. ಈ ವರ್ಷವೂ ಆಚರಿಸಲು ಆಗುತ್ತಿಲ್ಲ, ದಯವಿಟ್ಟು ಕ್ಷಮಿಸಿಬಿಡಿ. ಒಳ್ಳೆಯ ಕೆಲಸಗಳ ಮೂಲಕ ನನ್ನ ಹುಟ್ಟುಹಬ್ಬ ಆಚರಿಸಿ. ಎಲ್ಲಿ ಇದ್ದೀರೋ ಅಲ್ಲಿಂದಲೇ ಹರಿಸಿ. ನನ್ನ ಹುಟ್ಟುಹಬ್ಬಕ್ಕೆ ಖರ್ಚು ಮಾಡುವ ದುಡ್ಡನ್ನು ಒಳ್ಳೆಯ ಕೆಲಸಕ್ಕೆ ಬಳಸಿ’ ಎಂದು ಕೋರಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು