ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಅಭಿಷೇಕ್ ಅಂಬರೀಷ್ ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಶುಭಾಶಯ ಕೋರುತ್ತಿದ್ದಾರೆ.
ಅದ್ದೂರಿಯಾಗಿ ಬರ್ತ್ಡೇ ಆಚರಿಸಿಕೊಳ್ಳೋದಿಲ್ಲ ಎಂದಿದ್ದ ಅಭಿಷೇಕ್ ಸಿಂಪಲ್ ಆಗಿ ಹುಟ್ಟುಹಬ್ಬ ಮಾಡಿಕೊಂಡಿದ್ದಾರೆ. ಇದರ ಫೋಟೋ ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ತಂದೆ ಅಂಬರೀಷ್ ಫೋಟೋಗೆ ಪೂಜೆ ಮಾಡುತ್ತಾ ಅವರು ಭಾವುಕರಾದ ಘಟನೆಯು ನಡೆದಿದೆ.
ಬರಗಾಲದ ಪರಿಸ್ಥಿತಿ ನಿರ್ಮಾಣವಾದ ಕಾರಣದಿಂದಲೇ ಅವರು ಅದ್ದೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದರು. ಈ ಕುರಿತು ಪೋಸ್ಟ್ ಕೂಡ ಹಾಕಿದ್ದರು. ಅಲ್ಲದೆ, ಮನೆ ಬಾಗಿಲಿಗೆ ಅಭಿಮಾನಿಗಳು ಬಂದರೆ ಅವರನ್ನು ಹಾಗೆಯೇ ಕಳುಹಿಸುವುದಿಲ್ಲ ಎಂದು ಕೂಡ ಅವರು ಹೇಳಿದ್ದರು. ಈಗ ಹಾಗೆಯೇ ಮಾಡಿದ್ದಾರೆ. ಎಲ್ಲರ ಜೊತೆ ಫೋಟೋಗೆ ಪೋಸ್ ಕೊಟ್ಟ ಬಳಿಕವೇ ಅಭಿಮಾನಿಗಳನ್ನು ಕಳುಹಿಸಿಕೊಟ್ಟಿದ್ದಾರೆ.