News Karnataka Kannada
Friday, May 10 2024
ಬೆಂಗಳೂರು ನಗರ

ಬೆಂಗಳೂರಿನ ಆಗ್ನೇಯ ವಿಭಾಗ ಪೊಲೀಸರಿಂದ ಡಿಜಿಟಲೀಕರಣ ವ್ಯವಸ್ಥೆ

Digitization system by South East Division Police, Bengaluru
Photo Credit : News Kannada

ಬೆಂಗಳೂರು: ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಪೊಲೀಸ್ ಇಲಾಖೆಯಲ್ಲಿ ಹೊಸ ವ್ಯವಸ್ಥೆಯೊಂದು ಜಾರಿಗೆ ಬರುತ್ತಿದೆ. ಬೆಂಗಳೂರಿನ ಆಗ್ನೇಯ ವಿಭಾಗ ಪೊಲೀಸರಿಂದ ಡಿಜಿಟಲೀಕರಣ ವ್ಯವಸ್ಥೆ ಮಾಡಲಾಗಿದೆ. 14 ಸ್ಟೇಷನ್, ಮೂರು ಎಸಿಪಿ ಕಚೇರಿ, ಡಿಸಿಪಿ ಕಚೇರಿಯಲ್ಲಿ ಡಿಸಿಪಿ ಸಿ.ಕೆ.ಬಾಬ ಅವರು ಆಡಳಿತ ವ್ಯವಸ್ಥೆ ಸಂಪೂರ್ಣ ಡಿಜಿಟಲೀಕರಣ ಮಾಡಿದ್ದಾರೆ. ರಾಜ್ಯ ಸರ್ಕಾರದ ಇ-ಆಫೀಸ್ ವೆಬ್​ಸೈಟ್ ಬಳಸಿ ಪ್ರಾಯೋಗಿಕ ಯಶಸ್ವಿ. ಇ-ಮೇಲ್ ಮಾಡಿದ 1 ಗಂಟೆಯಲ್ಲೇ ಪೊಲೀಸ್ ಸಿಬ್ಬಂದಿ ಕೆಲಸ ಪೂರ್ಣ ಆಗಲಿದೆ.

ಸಿಬ್ಬಂದಿಗೆ ರಜೆ, ಪ್ರಮೋಷನ್ , ಹೆಲ್ತ್ ಸಮಸ್ಯೆ , ಸ್ಯಾಲರಿ, ರಿಟೈನ್ಮೆಂಟ್ ಸೆಟ್ಮಲೆಂಟ್ , ಟಪಾಲು ಡ್ಯೂಟಿ ಏನೇ ಇದ್ದರೂ ಸಹ ಇನ್ಮುಂದೆ ಡಿಸಿಪಿ ಕಚೇರಿಗೆ ಬರುವಂತಿಲ್ಲ. ಸ್ಥಳದಲ್ಲೇ ಆನ್​ಲೈನ್ ಮೂಲಕ ಬೇಡಿಕೆ ಸಲ್ಲಿಸಬಹುದಾಗಿದೆ.

ಡಿಸಿಪಿ ಸಹಿ ಕೂಡಾ ಆನ್ ಲೈನ್ ಮೂಲಕವೇ ವ್ಯವಸ್ಥೆ ಮಾಡಲಾಗಿದ್ದು, ಇನ್ಮುಂದೆ ಡಿಸಿಪಿ ಕಚೇರಿಗೆ ದಾಖಲೆಗಳನ್ನ ಹಿಡಿದುಕೊಂಡು ಹೋಗುವಂತಿಲ್ಲ. ಇನ್ಸ್ ಪೆಕ್ಟರ್ ಸೇರಿದಂತೆ ಎಸಿಪಿ ಕೂಡಾ ಕಚೇರಿಯಲ್ಲಿ ಕುಳಿತಕೊಂಡೇ ಕೆಲಸ ಮಾಡಬಹುದು. ಬೇರೆ ಬಂದೋಬಸ್ತ್ ಅಥವಾ ಹೊರಗೆ ಡ್ಯೂಟಿ ಇದ್ದರೂ ಲ್ಯಾಟ್ ಟಾಪ್ ಮೂಲಕ ಸಂವಹನ ಮಾಡಬಹುದು. ಇದರೊಂದಿಗೆ ಡಿಜಿಟಲ್ ಮಾಡುವ ಮೂಲಕ ಸಮಯ ಉಳಿತಾಯ, ಇಲಾಖೆಯ ಹಣ ವ್ಯಯಕ್ಕೆ ಬ್ರೇಕ್ ಹಾಕಿದ್ದಾರೆ. ಇದೇ ಮೊದಲ ಬಾರಿಗೆ ಬೆಂಗಳೂರು ನಗರ ಪೊಲೀಸ್ ಇಲಾಖೆಯಲ್ಲಿ ಈ ಹೊಸ ವ್ಯವಸ್ಥೆ ಮಾಡಲಾಗಿದ್ದು, ಇದಕ್ಕೆ ಕಮಿಷನರ್ ದಯಾನಂದ್ ಪ್ರಶಂಸೆ ವ್ಯಕ್ತ ಪಡಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು