News Karnataka Kannada
Sunday, May 05 2024
ವಿಶೇಷ

ಕಣಿವೆಯ ಒಳಗಿನಿಂದ ಇಣುಕುವ ಜಲಪಾತ ಸಂಧನ್ ಸುಂದರಿ

Sandhan Sundari, a waterfall that peeps from within the valley
Photo Credit : By Author

ಪಶ್ಚಿಮ ಘಟ್ಟಗಳ ಸಹ್ಯಾದ್ರಿ ಪರ್ವತ ಶ್ರೇಣಿಯ ನಯನ ಮನೋಹರ ಕಣಿವೆಗಳಲ್ಲೊಂದು ಸಂಧನ್, ಈ ಕಣಿವೆ ಮಹಾರಾಷ್ಟ್ರದ ಇಗತ್‌ಪುರಿಯ ಬಳಿಯ ಭಂಡಾ‌ಧಾರಾದ ಸನಿಹದಲ್ಲಿದೆ. ವರ್ಷಪೂರ್ತಿ ಈ ಕಂದರದೊಳಗೆ ಸೂರ್ಯಕಿರಣಗಳು ತಲುಪುವುದಿಲ್ಲವಾದ್ದರಿಂದ ಇದು ನೆರಳುಗಳ ಕಣಿವೆ” ಎಂದೇ ಪ್ರಸಿದ್ಧಿ.

ಸಹ್ಯಾದ್ರಿ ಶ್ರೇಣಿಯಲ್ಲಿ ಅತ್ಯಂತ ಕ್ಲಿಷ್ಟಕರ, ಆದರೆ ಅಷ್ಟೇ ರೋಮಾಂಚಕ ಟ್ರೆಕ್ಕಿಂಗ್‌ಗಾಗಿ ಸಂಧನ್ ಹೆಸರುವಾಸಿ ನೇರ ಇಳಿಜಾರಿನ ಪ್ರಪಾತದಲ್ಲಿ 200 ಅಡಿ ಆಳದೊಂದಿಗೆ 2 ಕಿ.ಮೀ. ಉದ್ದಕ್ಕೆ ಇದು ಚಾಚಿಕೊಂಡಿದೆ. ಸಹಸ್ರಾರು ವರ್ಷಗಳಿಂದ ಮಳೆಗಾಲದಲ್ಲಿ ಆಸುಪಾಸಿನ ಪರ್ವತಶೃಂಗಗಳಿಂದಿಳಿದು ಉಗ್ರರೂಪದಲ್ಲಿ ಸಾಗಿಬರುವ ಕಾಡಿನ ನೀರ ತೊರೆಗಳಿಂದ ಈ ಕೊರಕಲು ಕಣಿವೆ ರೂಪುಗೊಂಡಿದೆ. ಕಣಿವೆಯೊಳಗಡೆ ಅಲ್ಲಲ್ಲಿ 2ರಿಂದ 4ಆಡಿ ಆಳದ ನೀರಿನ ಕೊಳಗಳು, ಜಾರುವ ಮತ್ತು ಕೊರಕಲು ಬಂಡೆಗಳಿದ್ದು, ಕೆಲವೆಡೆ ಹಗ್ಗದ ಏಣಿ ಹಾಗೂ ಇನ್ನು ಕೆಲವೆಡೆ ತೆವಳಿ, ಈಜಿಕೊಂಡು ಹೋಗುತ್ತಾ ನಾಲ್ಕು ಗಂಟೆಗಳಲ್ಲಿ ಕ್ಯಾಂಪಿಂಗ್ ಸ್ಪಾಟ್ ತಲುಪಬಹುದು, ಅಲ್ಲಿಂದ ಕಾಣುವ ಬನ್ ಪಿನಾಕಲ್ ಮತ್ತು ಆಜೋಬಾ ಎನ್ನುವ ಬೆಟ್ಟದ ದೃಶ್ಯ ಬಹುಮೋಹಕ.

ಕಣಿವೆಯೊಳಗಿನ ಸುಂದರಿ
ಮಳೆಗಾಲದಲ್ಲಿ ಇಲ್ಲಿನ ಹಲವಾರು ಜಲಪಾತಗಳು ಮೈದುಂಬಿಕೊಂಡು ಜೀವಂತಿಕೆ ಪಡೆದು ತಮ್ಮ ವೈಭವ ಮೆರೆಯುತ್ತವೆ. ಅವುಗಳಲ್ಲೊಂದಾದ ಸಂಧನ್ ಜಲಪಾತವು ‘ರಿವರ್ಸ್ ಜಲಪಾತ’ವೆಂದು ಹೆಸರುವಾಸಿಯಾಗಿದೆ. ಈ ಜಲಪಾತದಿಂದ ಧುಮ್ಮಿಕ್ಕುವ ಜಲಧಾರೆಯಲ್ಲಿ, ಕೆಲವೊಮ್ಮೆ ಕಣಿವೆಯೊಳಗಿಂದ ಹಾಗೂ ಎದುರಿಂದ ಬೀಸುವ ಗಾಳಿಯ ರಭಸಕ್ಕೆ ಭೂಮಿಯ ಕಾಂತೀಯ ಶಕ್ತಿ ಸೋತು, ಹರಿಯುವ ನೀರಿನ ಓಘ ತಡೆಯಲ್ಪಟ್ಟು, ವಿರುದ್ಧ ದಿಕ್ಕಿನಲ್ಲಿ ತುಂತುರು ತುಂತುರಾಗಿ ಮೇಲಕ್ಕೆ ಸರಿಯುವ ದೃಶ್ಯ ನೋಡುವುದೇ ಒಂದು ಅದ್ಭುತ ಅನುಭವ.

ವರ್ಷಋತುವಿನಲ್ಲಿ ಪ್ರವಾಹೋಪಾದಿಯಲ್ಲಿ ಸಂಧನ್ ಕಣಿವೆಯೊಳಗಿಂದ ನೀರು ಹರಿದುಹೋಗುವುದರಿಂದ ಮಳೆಗಾಲದಲ್ಲಿ ನವೆಂಬರ್ ತಿಂಗಳ ತನಕ ಟ್ರೆಕ್ಕಿಂಗ್ ಅಲ್ಲಿ ನಿಷಿದ್ಧ, ನವೆಂಬರ್ ನಂತರ ಮೇ ತಿಂಗಳವರೆಗೆ ಟ್ರೆಕ್ಕಿಗರ ದಂಡೇ ಇಲ್ಲಿ ಮೇಳ್ಳಿಸುತ್ತದೆ. ಟ್ರೆಕ್ಕಿಂಗ್ ಹೊರತಾಗಿ ಜಲಪಾತಗಳನ್ನು ವೀಕ್ಷಿಸಲು ಮಳೆಗಾಲ ಸೂಕ್ತ.

– ಮಣಿಕಂಠ ತ್ರಿಶಂಕರ್, ಮೈಸೂರು

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
34905
ಮಣಿಕಂಠ ತ್ರಿಶಂಕರ್

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು