News Karnataka Kannada
Sunday, May 12 2024
ವಿಶೇಷ

ಅಕ್ಟೋಬರ್ 1 ಅಂತರ್ರಾಷ್ಟ್ರೀಯ ಕಾಫಿ ದಿನ

October 1 is International Coffee Day
Photo Credit : By Author

ಜಗತ್ತಿನ ಜನಪ್ರಿಯ ಪೇಯಗಳಲ್ಲಿ ಒಂದಾಗಿರುವ ಕಾಫಿಯು ನಿತ್ಯ ಕೋಟ್ಯಾಂತರ ಜನರ ಸ್ಪೂರ್ತಿಯ ಪಾನೀಯವಾಗಿದ್ದು ಅವರಿಗೆ ಬೆಳಗಿನ ಕಾಫಿಯು ಜೀವನ ಅವಿಭಾಜ್ಯ ಅಂಗವೇ ಆಗಿದೆ. ಜಗತ್ತಿನಲ್ಲಿ ಅತ್ಯಂತ ಹೆಚ್ಚು ಬಳಕೆಯಲ್ಲಿರುವ ಪಾನೀಯ ಟೀ ಆಗಿದ್ದರೂ ಕಾಫಿಯು ದಿನೇ ದಿನೇ ಜನಪ್ರಿಯವಾಗುವತ್ತ ಮುನ್ನಡೆಯುತ್ತಿದೆ.

ಪ್ರತೀ ವರ್ಷ ಅಕ್ಟೋಬರ್ 1 ನ್ನು ಅಂತರ್ರಾಷ್ಟ್ರೀಯ ಕಾಫಿ ದಿನವನ್ನಾಗಿ ಆಚರಿಸಲು ಅಂತರ್ರಾಷ್ಟ್ರೀಯ ಕಾಫಿ ಸಂಘಟನೆ ಅಧಿಕೃತವಾಗಿ ನಿರ್ಧರಿಸಿದ್ದು ಇದನ್ನು 2015 ರಿಂದ ಆಚರಿಸಲಾಗುತ್ತಿದೆ. ಈ ಆಚರಣೆಯ ಮೂಲಕ ಪ್ರಪಂಚದಾದ್ಯಂತ ಈ ದಿನವನ್ನು ಕಾಫಿಯ ವ್ಯಾಪಾರ ಮತ್ತು ಬಳಕೆಯನ್ನು ಉತ್ತೇಜಿಸಲು ಮತ್ತು ಕಾಫಿ ಬೆಳೆಗಾರರ ಸಂಕಷ್ಟದ ಬಗ್ಗೆ ಜಾಗೃತಿ ಮೂಡಿಸಲು ಬಳಸಲಾಗುತ್ತದೆ ಈ ದಿನದಂದು, ಅನೇಕ ವ್ಯಾಪಾರಿ ಸಂಸ್ಥೆಗಳು ಉಚಿತ ಅಥವಾ ರಿಯಾಯಿತಿ ದರದಲ್ಲಿ ಕಾಫಿಯನ್ನು ವಿತರಿಸುತ್ತವೆ.

ಕಾಫಿ ಮಾರಾಟ ಸಂಸ್ಥೆಗಳು ಸಾಮಾಜಿಕ ಜಾಲತಾಣದ ಮೂಲಕ ರಿಯಾಯ್ತಿ ಕೂಪನ್ಗಳು ಹಂಚಿ , ಡಿಸ್ಕೌಂಟ್ ಘೋಷಿಸಿ ಮಾರಾಟ ಉತ್ತೇಜಿಸುತ್ತವೆ. ಕೆಲವು ಗ್ರೀಟಿಂಗ್ ಕಾರ್ಡ್ ಕಂಪನಿಗಳು ಅಂತರಾಷ್ಟ್ರೀಯ ಕಾಫಿ ಡೇ ಗ್ರೀಟಿಂಗ್ ಕಾರ್ಡ್ಗಳು ಹಾಗೂ ಉಚಿತ ಇ-ಕಾರ್ಡ್ಗಳನ್ನು ಮಾರಾಟ ಮಾಡುತ್ತವೆ. ಕೆಲವು ದೇಶಗಳಲ್ಲಿ ಕಾಫಿ ಉತ್ಸವವನ್ನೂ ಏರ್ಪಡಿಸಲಾಗುತ್ತದೆ.

ಅಂತರರಾಷ್ಟ್ರೀಯ ಕಾಫಿ ದಿನದ ನಿಖರವಾದ ಮೂಲ ಯಾರಿಗೂ ತಿಳಿದಿಲ್ಲ. ಆದರೆ ಈ ದಿನವನ್ನು ಮೊದಲ ಬಾರಿಗೆ ಜಪಾನ್ನಲ್ಲಿ 1983 ರಲ್ಲಿ ಆಲ್ ಜಪಾನ್ ಕಾಫಿ ಅಸೋಸಿಯೇಷನ್ ಪ್ರಚಾರ ಮಾಡಿತು. ಅಮೇರಿಕಾದಲ್ಲಿ “ನ್ಯಾಷನಲ್ ಕಾಫಿ ಡೇ” ಅನ್ನು 2005 ರಲ್ಲಿ ಸಾರ್ವಜನಿಕವಾಗಿ ಉಲ್ಲೇಖಿಸಲಾಗಿದೆ. ಇದನ್ನು ಆಚರಿಸಲು ಮತ್ತು ಮೊದಲ ನ್ಯೂ ಓರ್ಲಿಯನ್ಸ್ ಕಾಫಿ ಉತ್ಸವವನ್ನು ಘೋಷಿಸಲು 3 ಅಕ್ಟೋಬರ್ 2009 ರಂದು ಪತ್ರಿಕಾಗೋಷ್ಠಿಯನ್ನು ಕರೆಯಲಾಗಿತ್ತು.

1997 ರಲ್ಲಿ ಇದನ್ನು ಚೀನಾದಲ್ಲಿ ಇಂಟರ್ನ್ಯಾಷನಲ್ ಕಾಫಿ ಆರ್ಗನೈಸೇಶನ್ನಿಂದ ಪ್ರಚಾರ ಮಾಡಿ ಆಚರಿಸಲಾಯಿತು ಮತ್ತು ಏಪ್ರಿಲ್ 2001 ರ ಆರಂಭದಲ್ಲಿ ವಾರ್ಷಿಕ ಆಚರಣೆಯಾಗಿ ಮಾಡಲಾಯಿತು. ತೈವಾನ್ ಮೊದಲ ಬಾರಿಗೆ 2009ರಲ್ಲಿ ಅಂತಾರಾಷ್ಟ್ರೀಯ ಕಾಫಿ ದಿನವನ್ನು ಆಚರಿಸಿತು. ನೇಪಾಳವು ಮೊದಲ ಬಾರಿಗೆ ನವೆಂಬರ್ 17, 2005 ರಂದು ರಾಷ್ಟ್ರೀಯ ಕಾಫಿ ದಿನವನ್ನು ಆಚರಿಸಿತು.

ಇಂಡೋನೇಷ್ಯಾವು 17 ಆಗಸ್ಟ್ 17, 2006 ರಂದು ಮೊದಲ ಬಾರಿಗೆ ರಾಷ್ಟ್ರೀಯ ಕಾಫಿ ದಿನವನ್ನು ಆಚರಿಸಿತಲ್ಲದೆ ಇಂದು ತನ್ನ ಸ್ವಾತಂತ್ರ್ಯ ದಿನದಂದು ಕಾಫಿ ದಿನವನ್ನು ಆಚರಿಸುತ್ತಿದೆ. ವಿಶ್ವದ ಕಾಫಿ ಉತ್ಪಾದನೆಯಲ್ಲಿ ಒಟ್ಟು ಶೇಕಡಾ 37 ರಷ್ಟು ಪಾಲು ಹೊಂದಿರುವ ಬ್ರೆಜಿಲ್ ಮೊದಲ ಸ್ಥಾನದಲ್ಲಿದ್ದರೆ , ವಿಯಟ್ನಾಮ್ ಎರಡನೇ ಸ್ಥಾನದಲ್ಲಿದ್ದು ಶೇಕಡಾ 17 ಪಾಲು ಹೊಂದಿದೆ. ಭಾರತವು 6 ನೇ ಸ್ತಾನದಲ್ಲಿದ್ದು ಜಾಗತಿಕ ಉತ್ಪಾದನೆಯ ಶೇಕಡಾ 3.5 ರಷ್ಟು ಪಾಲು ಹೊಂದಿದೆ.

ಕಾಫಿಯ ತವರೂರು ಎಂದೇ ಖ್ಯಾತಿ ಹೊಂದಿರುವ ಪುಟ್ಟ ಜಿಲ್ಲೆ ಕೊಡಗು ದೇಶದ ಒಟ್ಟು ಕಾಫಿ ಉತ್ಪಾದನೆಯ ಶೇಕಡಾ 40 ರಷ್ಟು ಪಾಲು ಹೊಂದಿದ್ದು ಜಿಲ್ಲೆಯ ಹೆಗ್ಗಳಿಕೆ ಆಗಿದೆ. ನಮ್ಮ ದೇಶದ ಕಾಫಿ ಒಟ್ಟು ಉತ್ಪಾದನೆ 3.6 ಲಕ್ಷ ಟನ್ ಗಳಾಗಿದ್ದು ಇದರಲ್ಲಿ ಶೇಕಡಾ 70 ಕ್ಕೂ ಹೆಚ್ಚು ಪಾಲನ್ನು ರಾಜ್ಯ ಹೊಂದಿದ್ದರೆ ರಾಜ್ಯದಲ್ಲಿ ಉತ್ಪಾದನೆಯಾಗುವ ಕಾಫಿಯ ಶೇಕಡಾ 50 ಕ್ಕೂ ಹೆಚ್ಚು ಪಾಲು ಕೊಡಗಿನದ್ದಾಗಿರುವುದು ಜಿಲ್ಲೆಗೆ ಹೆಮ್ಮೆಯ ಸಂಗತಿಯೇ ಆಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1620
Coovercolly Indresh

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು