News Karnataka Kannada
Thursday, May 02 2024
ವಿಶೇಷ

ರಫೇಲ್‌ ಯುದ್ದ ವಿಮಾನದ ಬಗ್ಗೆ ನಿಮಗೆಷ್ಟು ಗೊತ್ತು ?

How much do you know about the Rafale fighter jet?
Photo Credit : Wikimedia

ಇಪ್ಪತೊಂದನೇ ಶತಮಾನ ಜಗತ್ತಿನ ಪಾಲಿಗೆ ಅತ್ಯಂತ ಮಹತ್ವದ್ದು. ಮಾನವ ಇತಿಹಾಸದಲ್ಲೇ ಅತ್ಯಂತ ವೇಗದ ಹಾಗೂ ಆವಿಷ್ಕಾರಿ ಘಟನೆಗಳಿಗೆಲ್ಲಾ ಸಾಕ್ಷಿಯಾದ ಶತಮಾನವಿದು. ಎಲ್ಲಾ ಕ್ಷೇತ್ರಗಳಲ್ಲೂ ಈ ಬದಲಾವಣೆ ಸಾಧ್ಯವಾಗುತ್ತಾ ಬಂದಿದೆ. ರಕ್ಷಣಾ ಕ್ಷೇತ್ರವೂ ಇದಕ್ಕೆ ಹೊರತಾಗಿಲ್ಲ.ಆಧುನಿಕ ಸಮರ ಕಣದಲ್ಲಿ ಯುದ್ದ ಕಲಿಗಳಷ್ಟೇ ಮಹತ್ವವನ್ನು ಪಡೆದುಕೊಂಡವು ಯುದ್ದ ವಿಮಾನಗಳು, ಶತ್ರು ರಾಷ್ಟ್ರದ ವಾಯು ನೆಲೆ ದಾಟಿ, ವಿರೋಧಿಪಾಳಯದ ರಕ್ಷಾಣಾ ಕೇಂದದ್ರಗಳು ಹಾಗೂ ಕಾರ್ಯಕ್ಷೇತ್ರಗಳನ್ನು ದ್ವಂಸ ಮಾಡುವಲ್ಲಿ ಯುದ್ದ ನೌಕೆಗಳ ಪಾತ್ರ ಮಹತ್ವವಾದದ್ದು. ಒಂದೊಂದು ಕೆಲಸಕ್ಕೆ ಸೀಮಿತವಾಗಿದ್ದ ಒಂದೊಂದು ವಿಮಾನಕ್ಕೆ ಬದಲಾಗಿ ಹತ್ತಾರು ಕೆಲಸ ಮಾಡುವ ಒಂದೇ ವಿಮಾನ ಈ ಜಾಗದಲ್ಲಿ ಬಳಕೆಯಾಗಲಿದೆ. ಅಂತಹ ಯುದ್ದ ವಿಮಾನದ ಹೆಸರೇ ರಫೆಲ್.ಫ್ರೆಂಚರ ಹೆಮ್ಮೆಯ ಸಾಧನೆಯ ಪ್ರತೀಕ ರಫೆಲ್.

21ನೇ ಶತಮಾನದಲ್ಲಿ ಫ್ರೆಂಚ್‌ರು ನಿರ್ಮಿಸಿದ ಹೊಸ ತಲೆಮಾರಿನ ಯುದ್ದನೌಕೆಯ ಹೆಸರು ರಫೇಲ್. ತನ್ನ ಓರಗೆಯ ಎಲ್ಲಾ ಯುದ್ದ ವಿಮಾನಗಳನ್ನೂ ಮೀರಿಸುವ ಸಾಮರ್ಥ್ಯ ಹೊಂದಿರುವ ಸಮರ ನೌಕೆ ಇದು. ಹೊಸ ತಂತ್ರಜ್ಞಾನದ ಹೆಮ್ಮೆಯ ಸೇನಾನಿ.‌ ನಾಲ್ಕನೇ ತಲೆಮಾರಿನ ಯುದ್ದವಿಮಾನಗಳ ಪೈಕಿ ಆಧುನಿಕ ತಂತ್ರಜ್ಞಾನ ಹೊಂದಿರುವ ಮೊದಲ ಯುದ್ದ ವಿಮಾನ ರಫೇಲ್.‌ ಏಕಕಾಲಕ್ಕೆ ನ್ಯೂಕ್ಲಿಯರ್‌ ಬಾಂಬ್‌ , ಲೇಸರ್‌ ಗೈಡೆಡ್‌ ವಿಸೈಲ್‌ ಮತ್ತು ಬಾಂಬ್‌ ಸಹಿತ ಎಂಟು ಬಗೆಯ ಶಶ್ತ್ರಾಸ್ತ್ರಗಳನ್ನು ಸಾಗಿಸುವ ಸಾಮರ್ಥ್ಯ ಹೊಂದಿರುವ ವಿಮಾನ, ಏಕಕಾಲಕ್ಕೆ ನೆಲ,ಜಲಮತ್ತು ಆಗಸದಲ್ಲಿ ಕೆಲಸ ಮಾಡಬಲ್ಲ ಹೊಸ ತಲೆ ಮಾರಿನ ಮೊದಲ ಯುದ್ದವಿಮಾನ ರಫೇಲ್.‌

ಶಸ್ತ್ರಾಸ್ತ್ರ ಸಹಿತ ಇಪ್ಪತ್ತೊಂದು ಟನ್‌ ತೂಗುವ ರಫೇಲ್‌, ಈದರ ಹೊರತಾಗಿ ಹದಿನೈದು ಟನ್‌ ಭಾರವಿದೆ. ಒಂದು ಟೆನಿಸ್‌ ಕೋರ್ಟ್‌ ಅನ್ನು ಆಕ್ರಮಿಸಿಕೊಳ್ಳುವಷ್ಟು ರಫೇಲ್‌ ದೊಡ್ಡದಾಗಿದೆ. ಅಂದರೆ 15ಮೀಟರ್‌ ಉದ್ದವನ್ನು ರೆಕ್ಕೆ ಸಹಿತ 11 ಮೀಟರ್‌ ಅಗಲವನ್ನು ಇದು ಹೊಂದಿಕೊಂಡಿದೆ. ಟೇಕಾಫ್‌ ಸಲುವಾಗಿ ಇದು ಕ್ರಮಿಸಬೇಕಾಗಿರುವುದು ಕೇವಲ 400ಮೀಟರ್‌ ದೂರ ಮಾತ್ರ. ಹಾಗೇ ಹತ್ತು ಸಾವಿರ ಮೀಟರ್‌ ದೂರವನ್ನು ಕೇವಲ ಎರಡೇ ನಿಮಿಷದಲ್ಲಿ ಕ್ರಮಿಸುವ ಶ್ರೇಯ ಇದರದ್ದು. 60 ಡಿಗ್ರಿ ಕೋನದಲ್ಲಿ ಸುಲಲಿತವಾಗಿ ಸಾಗುವ ತಾಕತ್ತು ಇದಕ್ಕಿದೆ.ಜೊತೆಗೆ ಶಬ್ಬದ ಎರಡುಪಟ್ಟು ವೇಗವಾಗಿ ಸಾಗುವ ಇದು ಗಂಟೆಗೆ 2130 ಕಿಲೋ ಮೀಟರ್‌ ವೇಗದಲ್ಲಿ ಸಾಗುತ್ತದೆ. ರಫೆಲ್‌ ಲ್ಯಾಂಡಿಗ್‌ ವೇಳೆ ಬಳಸುವ ವೇಗ 200ಕಿಲೋ ಮೀಟರ್‌ ಪ್ರತಿ ಗಂಟೆಗೆ.ರಫೇಲ್‌ ಒಂದರ ತಯಾರಿಕೆಗೆ ಖರ್ಚಾಗುವ ಮೊತ್ತ 120 ಕೋಟಿ ಡಾಲರ್‌ ( ವರ್ಷದಿಂದ ವರ್ಷಕ್ಕೆ ಬೆಲೆಯಲ್ಲಿ ಬದಲಾವಣೆಯಾಗುತ್ತದೆ) ಫ್ರಾನ್ಸ್‌ ಒಂದರಲ್ಲೇ 50ಕ್ಕೂ ಹೆಚ್ಚು ರಫೆಲ್‌ ಗಳು ಕಾರ್ಯಾಚರಣೆ ಮಾಡುತ್ತಿವೆ. ಜಗತ್ತಿನಾಧ್ಯಂತ ಬೇಡಿಕೆಯನ್ನೂ ಒಳಗೊಂಡು ತಯಾರಾಗುತ್ತಿರುವ ರಫೇಲ್‌ ಗಳ ಒಟ್ಟು ಸಂಖ್ಯೆ 300. ಅಂದರೆ ಈ ವಿಮಾನಗಳ ಕಾರ್ಯದ್ಕ್ಷತೆ ಹೇಗಿರಬೇಕು ಎನ್ನುವುದಕ್ಕೆ ಇದು ನೇರ ಉದಾಹರಣೆ.

ಹೀಗೆ ಜಗತ್ತಿನಾದ್ಯಂತ ಸಂಚಲನ ಮೂಡಿಸುವುದರ ಜೊತೆಗೆ ಅಮೇರಿಕಾದ ಐದನೇ ತಲೆಮಾರಿನ ಯುದ್ದ ನೌಕೆಗಳಿಗೂ ಪೈಪೋಟಿ ಕೊಡುವ ಹಂತಕ್ಕೆ ನಿಂತಿರುವ ರಫೇಲ್‌ ನಿಜಕ್ಕೂ ಆಗಸದಲ್ಲಿನ ಅರ್ಜುನ ಇದ್ದಂತೆ.
-ವೈಶಾಕ್ ಬಿ ಆರ್

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
34915
ವೈಶಾಕ್ ಬಿ ಆರ್

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು