News Karnataka Kannada
Thursday, May 16 2024
ಪ್ರವಾಸ

ನೀವು ಒಮ್ಮೆಯಾದರೂ ಭೇಟಿ ನೀಡಲೇಬೇಕಾದ ನಿಗೂಢ ದೇವಾಲಯಗಳಿವು

temples
Photo Credit : By Author

ಅನೇಕ ದೇವಾಲಯಗಳು ಅದ್ಭುತ ಕೆತ್ತನೆಗಳು ಮತ್ತು ನಿಗೂಢತೆಗೆ ಪ್ರಪಂಚದಾದ್ಯಂತ ಪ್ರಸಿದ್ಧವಾಗಿದೆ. ಅವುಗಳನ್ನು ಹಿಂದೂ ಧರ್ಮಗ್ರಂಥಗಳಲ್ಲಿಯೂ ವಿವರಿಸಲಾಗಿದೆ. ಪ್ರತಿಯೊಂದು ದೇವಾಲಯದ ಹಿಂದೆಯೂ ಒಂದೊಂದು ಕಥೆಯಿದೆ.ವಿಶೇಷ ರೀತಿಯ ಶಕ್ತಿಗಳನ್ನು ಹೊಂದಿರುವ ಅನೇಕ ದೇವಾಲಯಗಳು ಜಗತ್ತಿನಲ್ಲಿವೆ. ಆದಾಗ್ಯೂ, ಈ ಶಕ್ತಿಗಳ ರಹಸ್ಯವನ್ನು ಇಲ್ಲಿಯವರೆಗೆ ಯಾರೂ ಅರ್ಥಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ದೊಡ್ಡ ವಿಜ್ಞಾನಿಗಳು ದೇವಾಲಯಗಳ ರಹಸ್ಯವನ್ನು ಕಂಡುಹಿಡಿಯುವಲ್ಲಿ ವಿಫಲರಾಗಿದ್ದಾರೆ.

ಕರ್ಣಿ ಮಾತಾ ದೇವಾಲಯ
ಬಿಕಾನೇರ್‌ನಲ್ಲಿ ಕರ್ಣಿ ಮಾತೆಯ ದೇವಾಲಯವಿದೆ. ಈ ದೇವಾಲಯವನ್ನು ಸಾಕಷ್ಟು ವಿಶಿಷ್ಟವಾಗಿ ಮಾಡಲಾಗಿದೆ. ಸುಮಾರು 20,000 ಕಪ್ಪು ಇಲಿಗಳು ಅದರಲ್ಲಿ ವಾಸಿಸುತ್ತಿವೆ. ಪ್ರತಿ ವರ್ಷ ಲಕ್ಷಾಂತರ ಭಕ್ತರು ತಮ್ಮ ಇಷ್ಟಾರ್ಥಗಳನ್ನು ಪೂರೈಸಲು ಇಲ್ಲಿಗೆ ಬರುತ್ತಾರೆ. ಕರ್ಣಿದೇವಿಯನ್ನು ದುರ್ಗಾ ಮಾತೆಯ ಅವತಾರವೆಂದು ಹೇಳಲಾಗುತ್ತದೆ. ಇವರ ಮಂದಿರದಲ್ಲಿ ಇಲಿಗಳು ಹೆಚ್ಚಿರುವುದರಿಂದ ಕೆಲವರು ಇದನ್ನು ಇಲಿಗಳ ಮಂದಿರ ಎಂದು ಕರೆಯುತ್ತಾರೆ. ಇಲ್ಲಿ ಇಲಿಗಳನ್ನು ಕಾಬಾ ಎಂದು ಕರೆಯಲಾಗುತ್ತದೆ.

ಕನ್ಯಾಕುಮಾರಿ ದೇವಿ ದೇವಸ್ಥಾನ
ಕನ್ಯಾಕುಮಾರಿ ಪಾಯಿಂಟ್ ಅನ್ನು ಪ್ರಪಂಚದ ಅತ್ಯಂತ ಕೆಳ ಭಾಗವೆಂದು ಪರಿಗಣಿಸಲಾಗಿದೆ. ಕಡಲತೀರದಲ್ಲಿ ಕುಮಾರಿ ದೇವಿಯ ದೇವಸ್ಥಾನವಿದೆ. ಈ ದೇವಾಲಯದಲ್ಲಿ ಪಾರ್ವತಿ ದೇವಿಯ ರೂಪವನ್ನು ಪೂಜಿಸಲಾಗುತ್ತದೆ ಎಂದು ಹೇಳಲಾಗುತ್ತದೆ. ಪುರುಷರು ಪ್ರವೇಶದ ಮೊದಲು ಸೊಂಟದಿಂದ ಮೇಲಿನವರೆಗೆ ಬಟ್ಟೆಗಳನ್ನು ತೆಗೆಯಬೇಕಾದ ಏಕೈಕ ದೇವಾಲಯ ಇದಾಗಿದೆ.

ಶನಿ ಶಿಗ್ನಾಪುರ ದೇವಸ್ಥಾನ
ಭಾರತದಲ್ಲಿ ಸೂರ್ಯನ ಮಗನಾದ ಶನಿದೇವನಿಗೆ ಅನೇಕ ದೇವಾಲಯಗಳಿವೆ. ಅವುಗಳಲ್ಲಿ, ಮಹಾರಾಷ್ಟ್ರದ ಅಹಮದಾಬಾದ್‌ನಲ್ಲಿರುವ ಶನಿ ಶಿಗ್ನಾಪುರ ದೇವಸ್ಥಾನವು ಹಿಂದೂ ಧರ್ಮದಲ್ಲಿ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ. ಈ ವಿಶ್ವಪ್ರಸಿದ್ಧ ಶನಿ ದೇವಾಲಯದ ವಿಶೇಷತೆಯೆಂದರೆ ಇಲ್ಲಿ ಶನಿದೇವನ ವಿಗ್ರಹವು ಯಾವುದೇ ಛಾವಣಿ ಅಥವಾ ಗುಮ್ಮಟವಿಲ್ಲದೆ ತೆರೆದ ಆಕಾಶದ ಕೆಳಗೆ ಅಮೃತಶಿಲೆಯ ವೇದಿಕೆಯ ಮೇಲೆ ನಿರ್ಮಿಸಲಾಗಿದೆ.

ಕಾಮಾಖ್ಯ ದೇವಿ ದೇವಸ್ಥಾನ
ಕಾಮಾಖ್ಯ ದೇವಸ್ಥಾನವನ್ನು ತಾಂತ್ರಿಕರ ಭದ್ರಕೋಟೆ ಎಂದು ಕರೆಯಲಾಗುತ್ತದೆ. ಮಾತೆಯ 51 ಶಕ್ತಿಪೀಠಗಳಲ್ಲಿ ಒಂದಾದ ಈ ಪೀಠವು ಅತ್ಯಂತ ಪ್ರಮುಖವಾದುದು ಎಂದು ಪರಿಗಣಿಸಲಾಗಿದೆ. ಇದು ಅಸ್ಸಾಂನ ಗುವಾಹಟಿಯಲ್ಲಿದೆ. ಇಲ್ಲಿ ಮುಖ್ಯವಾಗಿ ತ್ರಿಪುರಸುಂದರಿ, ಮಾತಂಗಿ ಮತ್ತು ಕಮಲಾ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗಿದೆ. ಮತ್ತೊಂದೆಡೆ, ಮುಖ್ಯ ದೇವಾಲಯವನ್ನು ಸುತ್ತುವರೆದಿರುವ ವಿವಿಧ ದೇವಾಲಯಗಳಲ್ಲಿ 7 ಇತರ ರೂಪಗಳ ವಿಗ್ರಹಗಳನ್ನು ಸ್ಥಾಪಿಸಲಾಗಿದೆ. ಕಾಮಕ್ಯ ದೇವಾಲಯದಲ್ಲಿ ಸತಿ ದೇವಿಯ ಯೋನಿ ಭಾಗ ಬಿದ್ದಿದೆ ಎಂದು ಹೇಳಲಾಗುವುದು. ದೇವಿಯ ಯೋನಿ ಭಾಗ ಇಲ್ಲಿರುವುದರಿಂದ ಈ ದೇವಿ ಮುಟ್ಟಾಗುತ್ತಾಳೆ ಎಂಬ ನಂಬಿಕೆ ಇದೆ. ದೇವಿಯ ಋತುಸ್ರಾವದ ಸಮಯದಲ್ಲಿ ಬ್ರಹ್ಮಪುತ್ರ ನದಿಯೂ ಕೆಂಪಾಗುವುದು ಎಂಬ ನಂಬಿಕೆ ಇದೆ.

​ಮಾಯವಾಗುವ ಸ್ತಂಭೇಶ್ವರ ಮಹಾದೇವ ದೇವಾಲಯ
ಇದು ಗುಜರಾತ್‌ನ ಸ್ತಂಭೇಶ್ವರ ಮಹಾದೇವ ದೇವಾಲಯ. ಈ ದೇವಾಲಯವನ್ನು ಕಣ್ಮರೆಯಾಗುತ್ತಿರುವ ಗುಜರಾತ್‌ ದೇವಾಲಯವೆಂದೂ ಕೂಡ ಕರೆಯಲಾಗುತ್ತದೆ. 150 ವರ್ಷಗಳಷ್ಟು ಐತೀಹ್ಯವನ್ನು ಹೊಂದಿರುವ ಈ ದೇವಾಲಯವು ಜಂಬೂಸರ್‌ ನಗರದ ಕಾಂಬೇಯ ಕಡಲ ತೀರದಲ್ಲಿದೆ. ಈ ದೇವಾಲಯವು ಕಡಲ ನೀರು ತುಂಬಿದಂತೆ ಕಡಲಿನಲ್ಲಿ ಮುಳುಗುತ್ತದೆ ಹಾಗೂ ಕಡಲ ನೀರು ಇಳಿದಂತೆ ಜನರ ಕಣ್ಣಿಗೆ ಕಣುತ್ತದೆ. ಇಲ್ಲಿನ ಜನರು ನೀರು ಇಳಿಯುವ ಸಮಯವನ್ನು ನೋಡಿಕೊಂಡು ದೇವರ ದರ್ಶನಕ್ಕೆ ಹೋಗುತ್ತಾರೆ. ಇಂದಿಗೂ ಕೂಡ ನೀರು ತುಂಬಿದಾಗ ಈ ದೇವಾಲಯ ಎಲ್ಲಿ ಇರುತ್ತದೆ ಎನ್ನುವುದು ಯಾರಿಗೂ ತಿಳಿದಿಲ್ಲ. ನೀರು ತುಂಬಿದಾಗ ಈ ದೇವಾಲಯ ನೋಡಲು ಕೂಡ ಸಿಗುವುದಿಲ್ಲ.

​ಗಾಳಿಯಲ್ಲಿ ನೇತಾಡುವ ಕಂಬ ಲೇಪಾಕ್ಷಿ ದೇವಾಲಯ
ಇದು ಆಂದ್ರಪ್ರದೇಶದ ಲೇಪಾಕ್ಷಿ ಜಿಲ್ಲೆಯಲ್ಲಿನ ಲೇಪಾಕ್ಷಿ ದೇವಾಲಯ. ಈ ದೇವಾಲಯದಲ್ಲಿ ವೀರಭದ್ರ ದೇವರನ್ನು ಪೂಜಿಸಲಾಗುತ್ತದೆ. ಇದನ್ನು ವೀರಭದ್ರ ದೇವಾಲಯ ಲೇಪಾಕ್ಷಿ ಎಂದೂ ಕೂಡ ಕರೆಯಲಾಗುತ್ತದೆ. ಈ ದೇವಾಲಯದ ವಾಸ್ತುಶಿಲ್ಪ ಕೂಡ ಅಷ್ಟೇ ಅಕರ್ಷಣೀಯವಾಗಿದೆ. ಲೇಪಾಕ್ಷಿ ದೇವಾಲಯದ ನಿಗೂಢ ರಹಸ್ಯವೆಂದರೆ ಈ ದೇವಾಲಯದಲ್ಲಿನ ಕಂಬವು ಗಾಳಿಯಲ್ಲಿ ನೇತಾಡುತ್ತದೆ. ಈ ದೇವಾಲಯದಲ್ಲಿ ಸುಮಾರು 70 ಕಂಬಗಳಿವೆ ಆದರೆ ಇದರಲ್ಲಿ ಕೇವಲ ಒಂದೇ ಒಂದು ಕಂಬ ಮಾತ್ರ ಗಾಳಿಯಲ್ಲಿ ನೇತಾಡುತ್ತದೆ. ಇಲ್ಲಿಗೆ ಭೇಟಿ ನೀಡುವ ಭಕ್ತರು ಇದು ಗಾಳಿಯಲ್ಲಿ ನೇತಾಡುತ್ತದೆಯೋ ಇಲ್ಲವೋ ಎಂದು ಪರೀಕ್ಷಿಸಲು ಬಟ್ಟೆಯನ್ನು ಈ ಕಂಬದ ಕೆಳಗೆ ಹಾಕಿ ತೆಗೆಯುತ್ತಾರೆ. ಯಾವುದೇ ಆಧಾರವಿಲ್ಲದೆ ಈ ಕಂಬ ಹೇಗೆ ನಿಂತಿದೆ ಎನ್ನುವುದೇ ಇಲ್ಲಿಯವರೆಗೂ ಅರಿಯಲಾಗದ ಕಗ್ಗಂಟಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು