News Karnataka Kannada
Saturday, April 13 2024
Cricket
ಉತ್ತರ ಪ್ರದೇಶ

ದಲಿತ ಬಾಲಕನಿಗೆ ಮಲ ಎತ್ತುವಂತೆ ಒತ್ತಾಯಿಸಿ ಭೀಕರ ಹಲ್ಲೆ

Dalit boy assaulted in Uttar Pradesh's Saifai, forced to remove stools
Photo Credit : News Kannada

ಇಟಾವಾ, ಜು.19: ಆಘಾತಕಾರಿ ಘಟನೆಯೊಂದರಲ್ಲಿ, ದಲಿತ ಅಪ್ರಾಪ್ತ ಬಾಲಕನನ್ನು ಥಳಿಸಿ,  ಮಲವನ್ನು ಕೈಯಿಂದ ತೆಗೆಯುವಂತೆ ಒತ್ತಾಯಿಸಿದ ಘಟನೆ ಉತ್ತರ ಪ್ರದೇಶದ ಇಟಾವಾ ಜಿಲ್ಲೆಯ ಸೈಫೈನಲ್ಲಿ ನಡೆದಿದೆ.

ಅಪ್ರಾಪ್ತ ಬಾಲಕ ಜಾಗ್ರಾಮ್, ಯಾದವ್ ಅವರ ಹೊಲದಲ್ಲಿ ದೇಶಹಬಾಧೆ ತೀರಿಸಿಕೊಳ್ಳಲು ಹೋಗಿದ್ದನು. ಈ ವೇಳೆ ಇದನ್ನು ಕಂಡ ಯಾದವ್‌  ತನ್ನ ಹೊಲದಿಂದ ಮಲಮೂತ್ರ ತೆಗೆಯುವಂತೆ ಒತ್ತಾಯಿಸಿದ್ದಾರೆ ಎನ್ನಲಾಗಿದೆ.  ಪರ್ಸಾನ ಪಂಚಾಯಿತಿಯಲ್ಲಿ ಜುಲೈ 13ರಂದು ಈ ಘಟನೆ ನಡೆದಿದೆ. ಎಸ್‌ಸಿ, ಎಸ್‌ಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಸೈಫೈ ವೃತ್ತದ ಪೊಲೀಸ್‌ ಅಧಿಕಾರಿ ನಾಗೇಂದ್ರ ಚೌಬೆ ತನಿಖೆ ನಡೆಸುತ್ತಿದ್ದಾರೆ ಎಂದು ಹೆಚ್ಚುವರಿ ಎಸ್‌ಪಿ ಗ್ರಾಮಾಂತರ ಎಸ್‌ಪಿ ಸತ್ಯಪಾಲ್ ಸಿಂಗ್ ತಿಳಿಸಿದ್ದಾರೆ.

ಆರೋಪಿ ಜಗ್ರಾಮ್ ಯಾದವ್ ತಲೆಮರೆಸಿಕೊಂಡಿದ್ದಾನೆ. ಆತನ ಬಂಧನಕ್ಕೆ ಪೊಲೀಸರು ಕಾರ್ಯಪ್ರವೃತ್ತರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.  ಏತನ್ಮಧ್ಯೆ, ಯಾದವ್ ನ್ಯಾಯಾಲಯದಲ್ಲಿ ಶರಣಾಗತಿ ಅರ್ಜಿ  ಸಲ್ಲಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು