News Karnataka Kannada
Monday, May 06 2024
ವಿಶೇಷ

ನವರಾತ್ರಿಯ ಏಳನೇ ದಿನ: ದೇವಿ ಕಾಲರಾತ್ರಿ ಆರಾಧನೆಯ ಮಹತ್ವ ತಿಳಿಯಿರಿ

Day 7 of Navratri: Know the importance of Goddess Kaalratri worship
Photo Credit : News Kannada

ನವರಾತ್ರಿಯ ಏಳನೇ ದಿನದಂದು ತಾಯಿ ಕಾಲರಾತ್ರಿಯನ್ನು ಪೂಜಿಸುವ ಕ್ರಮವಿದೆ. ಅದಕ್ಕೆ ವ್ಯಾಪಕವಾದ ಪೌರಾಣಿಕ ಹಿನ್ನಲೆಯಿದೆ. ಕಾಲರಾತ್ರಿ ಹೆಸರೇ ಹೇಳುವಂತೆ ಈ ದೇವಿಯು ಅಂಧಕಾರವನ್ನು ಹೋಗಲಾಡಿಸಿ ಬೆಳಕೆಂಬ ಶಕ್ತಿಯನ್ನು ನೀಡುತ್ತಾಳೆ.

ಆಕೆಯು ತನ್ನ ಶಕ್ತಿಯಿಂದ ಅಂಧಕಾರವನ್ನು ಹೇಗೆ ದೂರ ಮಾಡುತ್ತಾಳೋ, ಅದೇ ರೀತಿ ಮನುಷ್ಯನ ಬದುಕಿನಲ್ಲಿಯೂ ಕಷ್ಟಗಳನ್ನು ದೂರಮಾಡಿ ಧೈರ್ಯ ತುಂಬುತ್ತಾಳೆ. ಜೊತೆಗೆ ಧನಾತ್ಮಕ ಶಕ್ತಿಯನ್ನು ಪ್ರಾಪ್ತಿ ಮಾಡುತ್ತಾಳೆ ಎಂದು ನಂಬಲಾಗುತ್ತದೆ. ರೌದ್ರಾವತಾರ ಮತ್ತು ತುಂಬಾ ಉಗ್ರ ರೂಪದಲ್ಲಿರುವ ದುರ್ಗೆಯು ಎಲ್ಲಾ ರೀತಿಯ ದುಷ್ಟಶಕ್ತಿ, ದುಷ್ಟತೆ ಮತ್ತು ನಕಾರಾತ್ಮಕ ಶಕ್ತಿ ಹಾಗೂ ಭೀತಿಯನ್ನು ದೂರ ಮಾಡುತ್ತಾಳೆ.

ಜೊತೆಗೆ ಭಕ್ತರಿಗೆ ಹೆಚ್ಚಿನ ಸಂತೋಷ ಕರುಣಿಸುವುದರಿಂದಾಗಿ ಆಕೆಯನ್ನು ಶುಭಾಂಕರಿ ಎಂದು ಕರೆಯಲಾಗುತ್ತದೆ.
ಮಾತೆ ಕಾಲರಾತ್ರಿಯು ಕಪ್ಪು ಮೈ ಬಣ್ಣವನ್ನು ಹೊಂದಿರುತ್ತಾಳೆ. ಕತ್ತೆಯ ಮೇಲೆ ಕುಳಿತಿರುವ ಇವಳು ಬಿಚ್ಚು ಮುಡಿಯ ಕೇಶರಾಶಿಯನ್ನು ತನ್ನ ಸುತ್ತಲೂ ಹರಡಿಕೊಂಡಿದ್ದಾಳೆ.

ಆಕೆಗೆ ನಾಲ್ಕು ಕೈಗಳಿವೆ. ಎಡ ಬದಿಯ ಎರಡು ಕೈಗಳ ಪೈಕಿ ಒಂದರಲ್ಲಿ ಕುಡುಗೋಲು ಹಾಗೂ ಮತ್ತೊಂದರಲ್ಲಿ ಕಬ್ಬಿಣದ ಮುಳ್ಳು ಹಿಡಿದಿರುತ್ತಾಳೆ. ಬಲಗಡೆಯ ಎರಡು ಕೈಗಳಲ್ಲಿ ವರ ಮುದ್ರೆ ಹಾಗೂ ಅಭಯ ಮುದ್ರೆಯನ್ನು ಹೊಂದಿದ್ದಾಳೆ. ನವರಾತ್ರಿಯ ಏಳನೇ ದಿನವು ವ್ಯಕ್ತಿಯು ತಾಯಿ ಕಾಲರಾತ್ರಿಯ ಪೂಜೆ ನೆರವೇರಿಸಿದರೆ ಬದುಕಿನಲ್ಲಿ ಯಶಸ್ಸು ಗೌರವ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ.

ದೇವಿ ಕಾಲ ರಾತ್ರಿಯನ್ನು ಪೂಜಿಸುವಾಗ ಯಾವ ಮಂತ್ರವನ್ನು ಪಠಿಸಬೇಕು?

– ಓಂ ದೇವಿ ಕಾಲರಾತ್ರಿಯೇ ನಮಃ

-ಓಂ ದೇವಿ ಕಾಲರಾತ್ರೈ ನಮಃ

-ಓಂ ದೇವಿ ಕಾಲರಾತ್ರೈ ನಮಃ ಎಕ್ವೇಣಿ ಜಪಕಾರ್ಣಪೂರ ನಗ್ನಾ ಖರಾಸ್ಥಿತಾ ಲಂಬೋಸ್ಥಿತಿ ಕಾರ್ಣಿಕಾ ಕರ್ಣಿ ತೈಲಾಭಯಕ್ತ ಶರೀರಿಣೀ ವಂ

-ಪಾದೋಲ್ಲಸಲ್ಲೋಹ್ಲತಾ ಕಂಟಕ್ಬುಷಾನಾ ಭರ್ಧನ್‌ ಮೂರ್ಧಂ ಧ್ವಜಾ ಕೃಷ್ಣ ಕಾಲರಾತ್ರಿ ಭಯಂಕರಿ

-ಯಾ ದೇವಿ ಸರ್ವಭೂತೇಷು ಮಾ ಕಾಲರಾತ್ರಿ ರೂಪೇಣ ಸಂಸ್ಥಿತಾ ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ

– ಹಿಂ ಕಾಲರಾತ್ರಿ ಶ್ರಿಂ ಕರಾಲಿ ಚ ಕ್ಲಿಂ ಕಲ್ಯಾಣಿ ಕಲಾವತಿ ಕಲಾಮಾತಾ ಕಾಳಿದರ್ಪದ್ನಿ ಕಾಮದಿಶಾ ಕುಪನ್ವಿತಾ ಕಾಮಬಿಜಪಂದ ಕಮಬಿಜಸ್ವರೂಪಿಣಿ

-ಕುಮತಿಘ್ನಿ ಕುಲಿನಾರ್ತಿನಾಶಿನಿ ಕುಲಾ ಕಾಮಿನಿ ಕ್ಲಿಂ ಹ್ರಿಂ ಶ್ರೀಂ ಮಾಂತ್ರ್ವರ್ನೆನಾ ಕಾಲಾಕಂತಕಘಾತಿನಿ ಕೃಪಾಮಯಿ ಕೃಪಾಧಾರ ಕೃಪಾಪರ ಕೃಪಾಗಮಾ

-ವರ್ಜಿತಾನಿ ತು ಸ್ತಾನಾಭಿ ಯಾನಿ ಚ ಕವಚೇನಾ ಹೇ ತನಿ ಸರ್ವಾಣಿ ಮೀ ದೇವಿಸತತಾಪಂತು ಸ್ಥಾಂಭಿನಿ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು