News Karnataka Kannada
Monday, April 29 2024
ಅಂಕಣ

ಮುಖದ ಅಂದ ಹೆಚ್ಚಿಸುತ್ತದೆ ಬೇವಿನ ಎಲೆಗಳ ಫೇಸ್ ಪ್ಯಾಕ್

Neem leaf face pack enhances the look of the face
Photo Credit : Freepik

ತ್ವಚೆಯ ಬಗ್ಗೆ ಸಾಮಾನ್ಯವಾಗಿ ಎಲ್ಲಾ ಯುವತಿಯರು ಕಾಳಜಿ ವಹಿಸುತ್ತಾರೆ. ತ್ವಚೆ ಕಲೆ ರಹಿತವಾಗಿರಬೇಕು, ಮುಖ ಹೊಳೆಯುತ್ತಿರಬೇಕು ಎಂದು ಎಲ್ಲರ ಇಚ್ಛೆಯಾಗಿರುತ್ತದೆ. ಇದಕ್ಕಾಗಿ ಮಾರ್ಕೆಟ್ ನಲ್ಲಿ ಸಿಗುವ ಪ್ರಾಡಕ್ಟ್ ಬಳಸುವ ಬದಲು ಮನೆಯಲ್ಲೇ ಫೇಸ್ ಪ್ಯಾಕ್, ಫೇಸ್ ಮಾಸ್ಕ್ ತಯಾರು ಮಾಡಿಕೊಂಡು ಬಳಕೆ ಮಾಡಿದರೆ ಉತ್ತಮ. ಬೇವಿನ ಎಲೆಗಳ ಫೇಸ್ ಪ್ಯಾಕ್ ಬಳಸಿ ಇದು ಮುಖದ ಕಾಂತಿ ಹೆಚ್ಚಿಸುದರ ಜೊತೆಗೆ ತ್ವಚೆಯ ಸಮಸ್ಯೆಗಳನ್ನು ಪರಿಹರಿಸಲು ಸಹಕಾರಿಯಾಗಿದೆ

ಬೇವಿನ ಎಲೆಯ ಫೇಸ್ ಪ್ಯಾಕ್ ತಯಾರಿಸಲು, ಮೊದಲಿಗೆ ಬೇವು, ಜೇನುತುಪ್ಪ, ತುಳಸಿ ಎಲೆ, ಮುಲ್ತಾನಿ ಮಿಟ್ಟಿ ಈ ಸಾಮಗ್ರಿಗಳನ್ನು ಬಳಸಿಕೊಂಡು ಪೇಸ್ಟ್ ಮಾಡಿಕೊಳ್ಳಿ, ನಂತರ ಈ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿ ಸ್ಪಲ್ಪ ಸಮಯ ಹಾಗೆ ಬಿಡಿ. ನಂತರ ಸ್ವಚ್ಛ ನೀರಿನಿಂದ ತೊಳೆದುಕೊಳ್ಳಿ. ಹೀಗೆ ಕ್ರಮೇಣ ಮಾಡಿದರೆ ಮುಖದ ಕಾಂತಿ ಹೆಚ್ಚಾಗುತ್ತದೆ.

ಮೊಡವೆ ಸಮಸ್ಯೆಯಿಂದ ಪಾರಾಗಲು ಪ್ರತಿದಿನ ಬೇವು ಮತ್ತು ಅರಿಶಿನದ ಪೇಸ್ಟ್ ಹಚ್ಚಿ. ಹೀಗೆ ಮಾಡುವುದರಿಂದ ಉತ್ತಮ ರಿಸಲ್ಟ್ ಪಡೆಯಬಹುದು.

ಮುಖದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು, ಬೇವು ಮತ್ತು ಮುಲ್ತಾನಿ ಮಿಟ್ಟಿಯ ಫೇಸ್ ಪ್ಯಾಕ್ ಬಳಸಿ. ಈ ಫೇಸ್ ಪ್ಯಾಕ್ ಮಾಡಲು ಮೊದಲಿಗೆ ಬೇವಿನ ಎಲೆ(ಅಂದಾಜು), ಸ್ವಲ್ಪ ರೋಸ್ ವಾಟರ್, ಮುಲ್ತಾನಿ ಮಿಟ್ಟಿಯನ್ನು ತೆಗೆದುಕೊಳ್ಳಿ. ಬೇವಿನ ಎಲೆಗಳನ್ನು ರುಬ್ಬಿ ಪೇಸ್ಟ್ ಮಾಡಿ, ಅದಕ್ಕೆ ಸ್ವಲ್ಪರೋಸ್ ವಾಟರ್ ಮುಲ್ತಾನಿ ಮಿಟ್ಟಿ ಹಾಕಿ, ಚೆನ್ನಾಗಿ ಮಿಕ್ಸ್ ಮಾಡಿ. ಮುಖಕ್ಕೆ ಹಚ್ಚಿ ಸ್ಪಲ್ಪ ಸಮಯ ಹಾಗೆ ಒಣಗಲು ಬಿಡಿ ನಂತರ ಚೆನ್ನಾಗಿ ಸ್ವಚ್ಛ ನೀರಿನಿಂದ ತೊಳೆದುಕೊಳ್ಳಿ.

ತ್ವಚೆ ಕಾಂತಿಯುತವಾಗಿ ಹೊಳೆಯುವಂತೆ ಮಾಡಲು ಈ ಫೇಸ್ ಪ್ಯಾಕ್ ಟ್ರೈ ಮಾಡಿ ಉತ್ತಮ ರಿಸಲ್ಟ್ ಪಡೆಯುತ್ತೀರ. ಈ ಫೇಸ್ ಪ್ಯಾಕ್ ಮಾಡಲು ಮೊದಲಿಗೆ ಪಪ್ಪಾಯಿಯೊಂದಿಗೆ ಬೇವಿನ ಎಲೆಯ ಹುಡಿ ಸೇರಿಸಿ ಪೇಸ್ಟ್ ಮಾಡಿಕೊಂಡು ಚರ್ಮದ ಮೇಲೆ ಹಚ್ಚಿ . ಸ್ವಲ್ಪ ಹೊತ್ತು ಬಿಟ್ಟು ನಂತರ ತೊಳೆಯಿರಿ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು