News Karnataka Kannada
Monday, April 29 2024
ಅಂಕಣ

ಕಲೆರಹಿತ ಮತ್ತು ಸುಂದರ ತ್ವಚೆಗಾಗಿ ಬಳಸಿ ಬೀಟ್ ರೂಟ್ ಫೇಸ್ ಪ್ಯಾಕ್

Beetroot face pack used for blemish-free and beautiful skin
Photo Credit : Freepik

ತ್ವಚೆ ಸುಂದರವಾಗಿ ಕಾಣಬೇಕು ಎಂದು ಸಾಮಾನ್ಯವಾಗಿ ಎಲ್ಲರು ಇಚ್ಛೆ ಪಡುವಂತಹ ವಿಚಾರ. ಅದಕ್ಕಾಗಿ ಕೆಲವು ಯುವತಿಯರು ಮಾರುಕಟ್ಟೆಯಲ್ಲಿ ಸಿಗುವ ಬಗೆ ಬಗೆಯ ಕ್ರೀಂಗಳನ್ನು ಬಳಕೆ ಮಾಡುತ್ತಾರೆ. ಇದು ಕೆಲವೊಮ್ಮೆ ಉತ್ತಮ ರಿಸಲ್ಟ್ ಕೊಡಬಹುದು. ಇನ್ನೂ ಕೆಲವೊಮ್ಮೆ ಅಡ್ಡ ಪರಿಣಾಮಗಳನ್ನು ಬೀರಬಹುದು. ಏಕೆಂದರೆ ಕೆಲವೊಂದು ಸ್ಕಿನ್ ಕ್ರೀಮ್ ಗಳು ಎಲ್ಲರ ತ್ವಚೆಗೆ ಧನಾತ್ಮಕ ಫಲಿತಾಂಶ ಕೊಡುವುದಿಲ್ಲ. ಆದ್ದರಿಂದ ಇಂತಹ ಸಮಸ್ಯೆಗಳಿಂದ ದೂರ ಉಳಿಯಲು ಇಲ್ಲಿದೆ ಕೆಲವೊಂದು ಬ್ಯೂಟಿ ಟಿಪ್ಸ್. ತ್ವಚೆಯ ಅಂದ ಹೆಚ್ಚಿಸಿಕೊಳ್ಳಲು ಮತ್ತು ಕಾಂತಿಯುತವಾಗಿ ತ್ವಚೆ ಹೊಳೆಯಲು ಬೀಟ್ ರೂಟ್ ಸಹಾಯ ಮಾಡುತ್ತದೆ.

ಬೀಟ್ ರೂಟ್ ಮತ್ತು ಲಿಂಬೆರಸದ ಫೇಸ್ ಪ್ಯಾಕ್ ತಯಾರಿಸಲು ಬೀಟ್ ರೂಟ್ ರಸ ಮತ್ತು ಲಿಂಬೆರಸ ಇವೆರಡನ್ನು ಮಿಶ್ರಣ ಮಾಡಿ ಹತ್ತಿ ಉಂಡೆ ಅದ್ದಿಡಿ ನಂತರ ಮುಖಕ್ಕೆ ಹಚ್ಚಿಕೊಂಡು ಸ್ವಲ್ಪ ಸಮಯ ಹಾಗೆ ಬಿಟ್ಟು ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ.

ಬೀಟ್ ರೂಟ್ ರಸ, ಅರಿಶಿನ, ಕಡಲೆ ಹಿಟ್ಟು ಮತ್ತು ಹಾಲಿನ ಕೆನೆ ಇವುಗಳನ್ನು ಬಳಸಿಕೊಂಡು ಫೇಸ್ ಪ್ಯಾಕ್ ತಯಾರಿಸಲು ಮೊದಲಿಗೆ ಬೀಟ್ ರೂಟ್ ರಸವನ್ನು ತಯಾರು ಮಾಡಿಕೊಂಡು ನಂತರ ಇದಕ್ಕೆ ಹಾಲಿನ ಕೆನೆಯನ್ನು ಮಿಶ್ರಣ ಮಾಡಿ ಜೊತೆಗೆ ಅರಿಶಿನ ಪುಡಿ ಮತ್ತು ಕಡಲೆ ಹಿಟ್ಟನ್ನು ಸೇರಿಸಿ ಪ್ಯಾಕ್ ತಯಾರಿಸಿಕೊಳ್ಳಿ. ನಂತರ ತಯಾರಿಸಿದ ಪ್ಯಾಕ್ ಅನ್ನು ಮುಖ ಮತ್ತು ಕುತ್ತಿಗೆ ಭಾಗಕ್ಕೆ ಹಚ್ಚಿಕೊಂಡು ಸ್ವಲ್ಪ ಸಮಯ ಹಾಗೆ ಒಣಗಲು ಬಿಡಿ ನಂತರ ತನ್ನೀರಿನಿಂದ ಮುಖ ತೊಳೆದುಕೊಳ್ಳಿ ಹೀಗೆ ಮಾಡುವುದರಿಂದ ಉತ್ತಮ ರಿಸಲ್ಟ್ ಪಡೆಯಬಹುದು.

ಬೀಟ್ ರೂಟ್ ಮತ್ತು ಅಕ್ಕಿ ಹಿಟ್ಟಿನ ಪ್ಯಾಕ್ ತಯಾರಿಸಲು ಮೊದಲಿಗೆ ಬೀಟ್ ರೂಟ್ ರಸಕ್ಕೆ ಅಕ್ಕಿ ಹಿಟ್ಟು ಹಾಕಿ, ಮುಖ ಮತ್ತು ಕುತ್ತಿಗೆಗೆ ಹಚ್ಚಿ ಸ್ವಲ್ಪ ಸಮಯ ಒಣಗಲು ಬಿಡಿ ನಂತರ ಸ್ವಚ್ಛ ನೀರಿನಿಂದ ತೊಳೆದುಕೊಳ್ಳಿ ಇದರಿಂದ ಮುಖದ ಕಾಂತಿ ಹೆಚ್ಚಾಗುತ್ತದೆ.

ಬೀಟ್ ರೂಟ್, ಕಾಫಿ ಪುಡಿ ಮತ್ತು ಕಡಲೆ ಹಿಟ್ಟಿನ ಫೇಸ್ ಪ್ಯಾಕ್ ಮಾಡಲು ಬೀಟ್ ರೂಟ್ ರಸಕ್ಕೆ ಕಾಫಿ ಪುಡಿ ಮತ್ತು ಕಡಲೆ ಹಿಟ್ಟು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಇದರಿಂದ ತಯಾರಾದ ಪೇಸ್ಟ್ ಅನ್ನು ಮುಖ ಮತ್ತು ಕುತ್ತಿಗೆಗೆ ಅನ್ವಯಿಸಿ ಸ್ವಲ್ಪ ಹೊತ್ತು ಹಾಗೆಯೇ ಬಿಡಿ ನಂತರ ಮುಖವನ್ನು ಶುದ್ಧ ನೀರಿನಿಂದ ತೊಳೆದುಕೊಳ್ಳಿ ಹೀಗೆ ಮಾಡುವುದರಿಂದ ಮುಖದ ಸೌಂದರ್ಯ ವೃದ್ಧಿಯಾಗುತ್ತದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
11034
Gayathri Gowda

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು