News Karnataka Kannada
Monday, April 29 2024
ಅಂಕಣ

ಕಾಂತಿಯುತ ತ್ವಚೆಗಾಗಿ ನಿಂಬೆ ಹಣ್ಣಿನ ಫೇಸ್ ಪ್ಯಾಕ್

Lemon face pack for glowing skin
Photo Credit : Freepik

ನಿಂಬೆ ಹಣ್ಣು ಸಾಮಾನ್ಯವಾಗಿ ಪಾನೀಯ ಮಾಡಲು ಬಳಸಲಾಗುತ್ತದೆ. ಆದರೆ ಇದು ಕೇವಲ ಪಾನೀಯಕ್ಕೆ ಮಾತ್ರ ಬಳಕೆ ಮಾಡುವುದಲ್ಲದೆ ಸೌಂದರ್ಯ ವೃದ್ಧಿಗೂ ಸಹಾಯ ಮಾಡುತ್ತದೆ. ಮುಖದ ಕಾಂತಿ ಹೆಚ್ಚಿಸಲು, ಮೊಡವೆ ಸಮಸ್ಯೆ ದೂರ ಮಾಡಲು, ಬ್ಲ್ಯಾಕ್‌ಹೆಡ್ ಸಮಸ್ಯೆಯಿಂದ ಪಾರಾಗಲು ಹೀಗೆ ಹಲವಾರು ರೀತಿಯಲ್ಲಿ ಸಹಕಾರಿಯಾಗುತ್ತದೆ.

ಮುಖದ ಕಾಂತಿ ಹೆಚ್ಚಿಸಲು ಈ ನಿಂಬೆ ಹಣ್ಣು ಹೇಗೆ ಸಹಕಾರಿ ಎಂಬುದನ್ನು ತಿಳಿಯೋಣ. ಮೊದಲಿಗೆ, ಒಂದು ಚಮಚ ಜೇನು ತುಪ್ಪ, ಅರ್ಧ ನಿಂಬೆಯ ರಸ ಹಾಕಿ, ಚೆನ್ನಾಗಿ ಮಿಕ್ಸ್ ಮಾಡಿ. ಈ ಮಿಶ್ರಣಕ್ಕೆ ಅರಿಶಿನ ಹುಡಿ ಬೆರೆಸಿ, ದಪ್ಪಗೆ ಪೇಸ್ಟ್ ರೀತಿ ಮಾಡಿ ಮುಖಕ್ಕೆ ಹಚ್ಚಿ ಸ್ವಲ್ಪ ಸಮಯ ಹಾಗೆ ಬಿಟ್ಟು ಚೆನ್ನಾಗಿ ತೊಳೆದುಕೊಳ್ಳಿ. ಈ ತರ ಮಾಡುವುದರಿಂದ ಕ್ರಮೇಣ ಮುಖದ ಕಾಂತಿ ಹೆಚ್ಚಾಗುತ್ತದೆ.

ಒಂದು ಟೀ ಚಮಚ ಸಕ್ಕರೆ, ಅರ್ಧ ನಿಂಬೆಯ ರಸ, ಸ್ವಲ್ಪ ರೋಸ್ ವಾಟರ್ ಅಥವಾ ನೀರು ಚೆನ್ನಾಗಿ ಮಿಶ್ರಣ ಮಾಡಿ, ಮುಖದ ಮೇಲೆ ಹಚ್ಚಿ ಸ್ವಲ್ಪ ಸಮಯ ಹಾಗೆ ಮಸಾಜ್ ಮಾಡಿ. ಹೀಗೆ ಮಾಡುವುದರಿಂದ ಬ್ಲ್ಯಾಕ್‌ಹೆಡ್ ಸಮಸ್ಯೆ ನಿವಾರಣೆಯಾಗುತ್ತದೆ.

ನಿಂಬೆ ಹಣ್ಣಿನ ಸ್ಕ್ರಬ್ ಮಾಡಲು ಮೊದಲಿಗೆ ಅರ್ಧ ನಿಂಬೆಯ ರಸ ತೆಗೆದುಕೊಳ್ಳಿ ಇದಕ್ಕೆ ಒಂದು ಚಮಚದಷ್ಟು ಸಕ್ಕರೆ, ಎರಡು ಚಮಚ ಕಾಫಿ ಹುಡಿ ಈ ಮೂರನ್ನು ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ ಸ್ಕ್ರಬ್ ಮಾಡಿ. ಹೀಗೆ ಮಾಡುವುದರಿಂದ ಮುಖದ ಕಾಂತಿ ಹೆಚ್ಚಾಗುತ್ತದೆ.

ನಿಂಬೆ ಹಣ್ಣಿನ ಸಿಪ್ಪೆಯಿಂದ ಸ್ಮಬ್ ಮಾಡಲು, ಮೊದಲಿಗೆ ಲಿಂಬೆಯನ್ನು ತುರಿದುಕೊಂಡು ಅದಕ್ಕೆ ಸ್ವಲ್ಪ ತೆಂಗಿನ ಎಣ್ಣೆ, ಸ್ವಲ್ಪ ಉಪ್ಪು ಹಾಕಿ ಮಿಶ್ರಣ ಮಾಡಿಕೊಂಡ ಬಳಿಕ ಕೈಗಳು, ಕಾಲಿಗೆ ಸರಿಯಾಗಿ ಸ್ಕ್ರಬ್ ಮಾಡಿ ಇದರಿಂದ ಉತ್ತಮ ರಿಸಲ್ಟ್ ಪಡೆಯಬಹುದು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
11034
Gayathri Gowda

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು