ಮುಲ್ತಾನಿ ಮಿಟ್ಟಿ ಅದೆಷ್ಟೋ ತ್ವಚೆಯ ಸಮಸ್ಯೆಗಳಿಗೆ ರಾಮಬಾಣವಾಗಿ ಕಾರ್ಯ ನಿರ್ವಹಿಸುತ್ತದೆ. ಮೊಡವೆಗಳ ವಿರುದ್ಧ ಹೋರಾಡಲು, ಚರ್ಮದಲ್ಲಿನ ಹೆಚ್ಚುವರಿ ಮೇದೋಗ್ರಂಥಿ ಮತ್ತು ಎಣ್ಣೆಯನ್ನು ತೆಗೆದುಹಾಕಲು, ಚರ್ಮದ ಕೊಳಕು, ಬೆವರು ಮತ್ತು ಕಲ್ಮಶಗಳನ್ನು ತೆಗೆದುಹಾಕಿ ಸ್ವಚ್ಛಗೊಳಿಸಲು ಹೀಗೆ ನಾನಾ ರೀತಿಯಲ್ಲಿ ಸಹಕಾರಿಯಾಗುತ್ತದೆ.
ಜೊತೆಗೆ ಚರ್ಮದ ಟೋನ್ ಅನ್ನು ಸಮಗೊಳಿಸುತ್ತದೆ ಮತ್ತು ಮೈಬಣ್ಣವನ್ನು ಹೆಚ್ಚು ಮಾಡುತ್ತದೆ. ಟ್ಯಾನಿಂಗ್ ಮತ್ತು ಪಿಗ್ಮೆಂಟೇಶನ್ ವಿರುದ್ಧ ಹೋರಾಡಲು ಸಹಕಾರಿಯಾಗಿದೆ. ಇದು ರಕ್ತ ಪರಿಚಲನೆಯನ್ನು ಸುಗಮಗೊಳಿಸುತ್ತದೆ, ಕಾಂತಿಯುತ, ಹೊಳೆಯುವ ಚರ್ಮಕ್ಕೆ ಕಾರಣವಾಗುತ್ತದೆ. ಬ್ಲ್ಯಾಕ್ ಹೆಡ್ಸ್, ವೈಟ್ ಹೆಡ್ಸ್, ಕಲೆಗಳು, ಮೊಡವೆ ಕಲೆಗಳಿಂದ ದೂರವಿರಲು ಸಹಾಯ ಮಾಡುತ್ತದೆ.
ಅಲರ್ಜಿಯನ್ನು ತೊಡೆದುಹಾಕಲು, ಮುಲ್ತಾನಿ ಮಿಟ್ಟಿಗೆ ರೋಸ್ ವಾಟರ್ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚುದರಿಂದ ಸುಂದರ ತ್ವಚೆಯನ್ನು ಪಡೆಯಬಹುದು.
ಎಣ್ಣೆಯುಕ್ತ ಚರ್ಮ ಹೊಂದಿರುವವರು ಮುಲ್ತಾನಿ ಮಿಟ್ಟಿ ಮತ್ತು ರೋಸ್ ವಾಟರ್ ಫೇಸ್ ಪ್ಯಾಕ್ ಬಳಸಿದರೆ ಉತ್ತಮ ರಿಸಲ್ಟ್ ಪಡೆಯುತ್ತೀರ. ಈ ಫೇಸ್ ಪ್ಯಾಕ್ ತಯಾರಿಸಲು ಸ್ವಲ್ಪ ಪ್ರಮಾಣದ ಮುಲ್ತಾನಿ ಮಿಟ್ಟಿಗೆ ಎರಡರಿಂದ ಮೂರು ಚಮಚ ರೋಸ್ ವಾಟರ್ ಹಾಕಿ ಪೇಸ್ಟ್ ತಯಾರು ಮಾಡಿ. ನಂತರ ಮುಖಕ್ಕೆ ಹಚ್ಚಿ. ಸಂಪೂರ್ಣ ಒಣಗಿದ ನಂತರ ತಣ್ಣೀರಿನಲ್ಲಿ ತೊಳೆಯಿರಿ.
ಪುದಿನ ಎಲೆಗಳನ್ನು ಮೊಸರಿನೊಂದಿಗೆ ಅರೆದು ಆ ಮಿಶ್ರಣವನ್ನು ಮಿಲ್ತಾನಿ ಮಿಟ್ಟಿಗೆ ಹಾಕಿ ಫೇಸ್ ಪ್ಯಾಕ್ ಮಾಡಿಕೊಂಡು ಮುಖಕ್ಕೆ ಹಚ್ಚಿಕೊಳ್ಳಿ. ಇದರಿಂದ ಮುಖದ ಮೇಲಿನ ಕಪ್ಪು ಕಲೆಗಳು ಮಾಯವಾಗುತ್ತದೆ.