News Karnataka Kannada
Friday, May 03 2024
ವಿಡಿಯೊ

ಪಂಚೆ ಧರಿಸಿ ಬಂದಿದ್ದಕ್ಕೆ ʼಕಿಂಗ್ ಕೊಹ್ಲಿʼ ರೆಸ್ಟೋರೆಂಟ್‌‌ಗೆ ನೋ ಎಂಟ್ರಿ: ವಿಡಿಯೋ ವೈರಲ್

ವಿರಾಟ್ ಕೊಹ್ಲಿ ಅವರಿಗೆ ಸೇರಿದ ರೆಸ್ಟೋರೆಂಟ್‌ನಲ್ಲಿ ನಡೆದ ಒಂದು ಘಟನೆ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ. ವ್ಯಕ್ತಿಯೊಬ್ಬ ಪಂಚೆ ಧರಿಸಿ ಬಂದಿದ್ದಕ್ಕೆ ಒಳಗೆ ಬಿಡಲು ರೆಸ್ಟೋರೆಂಟ್ ಸಿಬ್ಬಂದಿ ನಿರಾಕರಿಸಿದ್ದಾರೆ.
Photo Credit : News Kannada

ಮುಂಬೈ: ವಿರಾಟ್ ಕೊಹ್ಲಿ ಅವರಿಗೆ ಸೇರಿದ ರೆಸ್ಟೋರೆಂಟ್‌ನಲ್ಲಿ ನಡೆದ ಒಂದು ಘಟನೆ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ. ವ್ಯಕ್ತಿಯೊಬ್ಬ ಪಂಚೆ ಧರಿಸಿ ಬಂದಿದ್ದಕ್ಕೆ ಒಳಗೆ ಬಿಡಲು ರೆಸ್ಟೋರೆಂಟ್ ಸಿಬ್ಬಂದಿ ನಿರಾಕರಿಸಿದ್ದಾರಂತೆ.

ಹೌದು. . . ಇತ್ತೀಚೆಗಷ್ಟೇ ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರಿಗೆ ಸೇರಿದ ರೆಸ್ಟೋರೆಂಟ್‌ನಲ್ಲಿ ನಡೆದ ಒಂದು ಘಟನೆ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ. ವ್ಯಕ್ತಿಯೊಬ್ಬ ಪಂಚೆ ಧರಿಸಿ ಬಂದಿದ್ದಕ್ಕೆ ಒಳಗೆ ಬಿಡಲು ರೆಸ್ಟೋರೆಂಟ್ ಸಿಬ್ಬಂದಿ ನಿರಾಕರಿಸಿದ್ದಾರೆ.

ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸುತ್ತಿದೆ. ಸಾಂಪ್ರದಾಯಿಕ ಧೋತಿ ಮತ್ತು ಕುರ್ತಾ ಧರಿಸಿದ ತಮಿಳು ವ್ಯಕ್ತಿಯೊಬ್ಬರು ತಮ್ಮ ಉಡುಪಿನ ಕಾರಣದಿಂದ ಮುಂಬೈನ ಜುಹು ಪ್ರದೇಶದ ಒನ್8 ಕಮ್ಯೂನ್‌ಗೆ ಪ್ರವೇಶಿಸಲು ಅನುಮತಿಸಲಿಲ್ಲ ಎಂದು ಹೇಳಿದ್ದಾರೆ.

ತಮಿಳುನಾಡಿನ ಈ ವ್ಯಕ್ತಿ ಘಟನೆಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ನಾನು ಕೊಹ್ಲಿಯ ದೊಡ್ಡ ಅಭಿಮಾನಿ ಎಂದು ಹೇಳಿದ ಅವರು, ರೆಸ್ಟೊರೆಂಟ್ ತನ್ನನ್ನು ನಡೆಸಿಕೊಂಡ ರೀತಿಗೆ ಕೊಹ್ಲಿ ಏನಾದರೂ ಕ್ರಮ ಕೈಗೊಳ್ಳುತ್ತಾರಾ ಅಂತ ಕೇಳಿದ್ದಾರೆ.  ರೆಸ್ಟೋರೆಂಟ್ ಆಡಳಿತ ಮಂಡಳಿ ತಾರತಮ್ಯದಿಂದ ವರ್ತಿಸಿದೆ ಎಂದು ಕೆಲ ನೆಟ್ಟಿಗರು ಕಿಡಿಕಾರಿದ್ದಾರೆ. ಭಾರತದಲ್ಲಿನ ಸಾಂಸ್ಕೃತಿಕ ವೈವಿಧ್ಯತೆಯ ಬಗ್ಗೆ ಕಟುವಾಗಿ ಟೀಕಿಸಲಾಗಿದೆ.

ರೆಸ್ಟೋರೆಂಟ್ ಮಾಲೀಕರು ಮತ್ತು ಕೊಹ್ಲಿ ಕ್ಷಮೆಯಾಚಿಸಬೇಕು ಎಂದು ಇನ್ನೂ ಕೆಲವರು ಒತ್ತಾಯಿಸಿದರು. ಆದರೆ ಇತರರು ರೆಸ್ಟೋರೆಂಟ್‌ಗೆ ಡ್ರೆಸ್ ಕೋಡ್ ಇದೆ ಮತ್ತು ಅದನ್ನು ಅವರು ಅರ್ಥಮಾಡಿಕೊಳ್ಳಬೇಕು ಎಂದು ವಾದಿಸಿದ್ದಾರೆ.

ಈ ವ್ಯಕ್ತಿ ಪ್ರಚಾರಕ್ಕಾಗಿ ಕೊಹ್ಲಿ ಹೆಸರನ್ನು ಎಳೆದು ತಂದಿದ್ದಾನೆ ಎನ್ನಲಾಗಿದೆ. ಇನ್ನು ಕೆಲವರು ರೆಸ್ಟೊರೆಂಟ್‌ನ ನಿಯಮಗಳನ್ನು ಗೌರವಿಸಿದರೆ ಚೆನ್ನಾಗಿತ್ತು ಎಂದಿದ್ದಾರೆ.

@DealsDhamaka ಎಂಬ ಎಕ್ಸ್‌ ಪುಟವು ರೆಸ್ಟೋರೆಂಟ್ ವಿರುದ್ಧ ತಮಿಳುನಾಡಿನ ವ್ಯಕ್ತಿಯ ಆರೋಪದ ವೀಡಿಯೊವನ್ನು ಹಂಚಿಕೊಂಡಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು