News Karnataka Kannada
Saturday, May 11 2024
ದೇಶ

‘ವಿಶ್ವದ ಮೊದಲ ಸಮುದ್ರದಾಳದ ಹೊಟೇಲ್’ ವೀಡಿಯೋ ಹಂಚಿಕೊಂಡ ಆನಂದ್ ಮಹೀಂದ್ರಾ

Anand Mahindra
Photo Credit : Twitter

ನವದೆಹಲಿ: ಮಹೀಂದ್ರಾ ಗ್ರೂಪ್‌ನ ಮುಖ್ಯಸ್ಥ ಆನಂದ್ ಮಹೀಂದ್ರಾ ಅವರು ಸಾಮಾಜಿಕ ಜಾಲತಾಣಗಳಲ್ಲಿ ಸದಾ ಆಕ್ಟಿವ್ ಆಗಿದ್ದು, ಯಾವುದಾದರು ವಿಭಿನ್ನವೆನಿಸಿದ ವಿಚಾರಗಳನ್ನು, ವೀಡಿಯೋಗಳನ್ನು ಆಗಾಗ ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಅದೇ ರೀತಿ ಈಗ ಅವರು ನೀರೊಳಗಿರುವ ಜಗತ್ತಿನ ಮೊದಲ ಹೊಟೇಲೊಂದರ ವೀಡಿಯೋವನ್ನು ಹಂಚಿಕೊಂಡಿದ್ದು ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ ಹೊಟೇಲ್ ಹೆಸರು ಮುರುಕ(The Muraka). ವಿಶ್ವದ ಮೊದಲ ನೀರಿನಾಳದ ಹೊಟೇಲ್ ಎನಿಸಿರುವ ಇದರಲ್ಲಿ ತಾನು ಒಂದು ರಾತ್ರಿಯನ್ನು ಕಳೆಯಲು ಇಷ್ಟಪಡಲಾರೆ ಎಂದು ಅವರು ಹೇಳಿಕೊಂಡಿದ್ದಾರೆ. ಹೊಟೇಲ್ ಮುರಾಕಾ ಮಾಲ್ಡೀವ್ಸ್‌ನ ಹಾಗೂ ವಿಶ್ವದ ಮೊದಲ ನೀರೊಳಗಿನ ಹೋಟೆಲ್ ಆಗಿದೆ.

ಇಲ್ಲಿ ಅತ್ಯಂತ ಶಾಂತವಾಗಿ ವಾರಾಂತ್ಯದಲ್ಲಿ ವಿಶ್ರಾಂತಿ ಮಾಡಬಹುದು ಎಂಬ ಸಲಹೆಯೊಂದಿಗೆ ಈ ವೀಡಿಯೋವನ್ನು ನನಗೆ ಕಳುಹಿಸಲಾಗಿದೆ. ಆದರೆ ನಿಜ ಹೇಳಬೇಕೆಂದರೆ ನನಗೆ ಇಲ್ಲಿ ಒಂದು ರಾತ್ರಿಯನ್ನು ಕೂಡ ಕಳೆಯಲಾಗದು ಈ ಗಾಜಿನ ಸೀಲಿಂಗ್‌ ಮಧ್ಯೆ ಇರುವ ಬಿರುಕುಗಳನ್ನು ನೋಡುತ್ತಾ ನಾನು ಎಚ್ಚರವಾಗಿಯೇ ಕಾಲ ಕಳೆಯಬಹುದು ಎಂದು ಆನಂದ್ ಮಹೀಂದ್ರಾ ಬರೆದುಕೊಂಡಿದ್ದಾರೆ.

ಇಲ್ಲಿ ಉಳಿಯುವುದಕ್ಕೆ ಬರೀ ಒಂದು ರಾತ್ರಿ ಕಳೆಯುವುದಕ್ಕೆ ನೀವು 50 ಸಾವಿರ ಡಾಲರ್ ಅಂದರೆ ಸುಮಾರು 41 ಲಕ್ಷ ರೂಪಾಯಿಗಳನ್ನು ವ್ಯಯಿಸಬೇಕಾಗುತ್ತದೆ.

ಈ ಮುರಾಕಾ ಹೊಟೇಲ್ 2018ರ ನವಂಬರ್‌ನಲ್ಲಿ ಆರಂಭವಾಗಿದ್ದು, ಸಮುದ್ರ ಮಟ್ಟಕ್ಕಿಂತ 16 ಅಡಿ ಆಳದಲ್ಲಿದೆ. ಈ ಹೊಟೇಲ್ ಇರುವ ಜಾಗ ಹಿಲ್ಟನ್‌ನ ಕಾನ್ರಾಡ್ ಮಾಲ್ಡೀವ್ಸ್ ರಂಗಾಲಿ ಐಲ್ಯಾಂಡ್ ರೆಸಾರ್ಟ್‌ನ ಒಂದು ಭಾಗವಾಗಿದೆ ಎಂದು ವರದಿಯೊಂದು ಹೇಳಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು