News Karnataka Kannada
Saturday, April 27 2024
ಆರೋಗ್ಯ

ಫ್ಲೋರೋಸಿಸ್ ಕಾಡಬಹುದು ಎಚ್ಚರವಾಗಿರಿ!

Photo Credit :

ಫ್ಲೋರೋಸಿಸ್ ಕಾಡಬಹುದು ಎಚ್ಚರವಾಗಿರಿ!

ಬೇಸಿಗೆಯಲ್ಲಿ ಕಾಯಿಲೆಗಳು ಹೆಚ್ಚಾಗಿ ಕಂಡು ಬರುತ್ತಿದ್ದು, ಅದರಲ್ಲೂ ನೀರಿನಿಂದಲೇ  ಕಾಯಿಲೆಗಳು ಹರಡುತ್ತಿರುವುದು ಸಾಮಾನ್ಯವಾಗಿದೆ. ಇಂತಹ ಕಾಯಿಲೆಗಳ ಪೈಕಿ  ಫ್ಲೋರೊಸಿಸ್ ಒಂದಾಗಿದ್ದು ಇದು ಕುಡಿಯುವ ನೀರಿನಿಂದ ಹರಡುತ್ತದೆ ಎನ್ನುವುದೇ ಆತಂಕಕಾರಿ ವಿಷಯವಾಗಿದೆ.

ಈ ರೋಗವು ನೀರಿನಿಂದ ಮಾತ್ರವಲ್ಲದೆ, ನಾವು ಸೇವಿಸುವ ವಿವಿಧ ಬಗೆಯ ಆಹಾರ ಹಾಗೂ ಕಾರ್ಖಾನೆಗಳು ಉಗುಳುವ ತ್ಯಾಜ್ಯಗಳಿಂದ ಹೆಚ್ಚಾಗಿ ಹರಡುತ್ತಿದೆ. ಇಷ್ಟಕ್ಕೂ ಈ ರೋಗ ಏಕೆ ಮತ್ತು ಹೇಗೆ ಹರಡುತ್ತದೆ ಎಂಬುದನ್ನು ನೋಡಿದರೆ ಒಂದಷ್ಟು ಮಾಹಿತಿಗಳು ಲಭ್ಯವಾಗುತ್ತದೆ. ವೈದ್ಯರು ಹೇಳುವಂತೆ ಇದೊಂದು ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿದ್ದು ಕುಡಿಯುವ ನೀರಿನಲ್ಲಿ ಫ್ಲೋರೈಡ್ ಅಂಶ ಜಾಸ್ತಿ ಇರುವ ಕಡೆ ಹೆಚ್ಚಾಗಿ ಕಂಡು ಬರುತ್ತದೆ. ಇದರಿಂದ ಮೂರು ಬಗೆಯ ಕಾಯಿಲೆ ಹರಡುವ ಲಕ್ಷಣ ಗೋಚರವಾಗುತ್ತದೆ. ಹಲ್ಲುಗಳು ಕಂದು ಬಣ್ಣಕ್ಕೆ ತಿರುಗಿ ಸಣ್ಣಸಣ್ಣರಂಧ್ರಗಳು ನಿರ್ಮಾಣವಾಗಬಹುದು. ಮೂಳೆ, ಕೀಲು ನೋವು ಹಾಗೂ ಜಡತ್ವ ಹೆಚ್ಚುವುದು. ಕೈಕಾಲುಗಳ ಊನತೆ ಕಾಣುವುದು ಪ್ರಮುಖ ಲಕ್ಷಣಗಳಾಗಿವೆ.
ಈ ಕಾಯಿಲೆ ವಾಸಿಮಾಡಲು ಸಾಧ್ಯವಾಗದ ಶಾಶ್ವತ ಕಾಯಿಲೆಯಾಗಿರುವುದರಿಂದ ಪ್ರತಿಯೊಬ್ಬರೂ ಇದರತ್ತ ಎಚ್ಚರ ವಹಿಸುವುದು ಅಗತ್ಯ. ಕೆಲವರಿಗೆ ಕೆಟ್ಟ ಅಭ್ಯಾಸವಿರುತ್ತದೆ. ಎಲ್ಲೆಂದರಲ್ಲಿ ತಿನ್ನುವುದು, ಇವರಿಗೆ ತಾವು ತಿನ್ನುವ ಆಹಾರ, ಕುಡಿಯುವ ನೀರು ಶುದ್ಧವೋ ಎಂದು ಪರಿಶೀಲಿಸಿ ನೋಡುವ ತಾಳ್ಮೆಯೂ ಇರುವುದಿಲ್ಲ. ಇಂತಹವರು ಖಂಡಿತಾ ಈ ಕಾಯಿಲೆಯ ಬಗ್ಗೆ ಎಚ್ಚರ ವಹಿಸಬೇಕಲ್ಲದೆ, ಆಹಾರ ಮತ್ತು ನೀರನ್ನು ಸೇವಿಸುವಾಗ ಜಾಗ್ರತೆ ವಹಿಸುವುದು ಅತಿ ಮುಖ್ಯ.

ಈಗಾಗಲೇ ಈ ಫ್ಲೋರೋಸಿಸ್ ಎಂಬ ಕಾಯಿಲೆ ಹಾಸನದ ಅರಸೀಕೆರೆ ತಾಲೂಕಿನಲ್ಲಿ ಕಂಡು ಬಂದಿದ್ದು, ಹಲವರು ಈ ಕಾಯಿಲೆಯಿಂದ ಬಳಲುತ್ತಿದ್ದಾರೆ. ಇಲ್ಲಿ ಕಾಯಿಲೆ ಹರಡಲು ಮುಖ್ಯ ಕಾರಣ ಕುಡಿಯುವ ನೀರು ಎಂದು ಹೇಳಲಾಗಿದೆ. ಕಾಯಿಲೆ ನೀರಿನಲ್ಲಿ ಹರಡುತ್ತಿದ್ದು ಅಲ್ಲಿನ ಜನ ಬೆಚ್ಚಿ ಬೀಳುವಂತಾಗಿದೆ. ಇವತ್ತು ಅರಸೀಕೆರೆಯಲ್ಲಿ ಕಾಣಿಸಿಕೊಂಡಿರುವ ಫ್ಲೋರೋಸಿಸ್ ನಾಳೆ ನಮ್ಮೂರಿಗೂ ಬರಬಹುದು ಆದ್ದರಿಂದ ತುಂಬಾ ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ. ಕಾರ್ಖಾನೆಗಳಿಂದ ಹೊರಬರುವ ತ್ಯಾಜ್ಯಗಳು, ಮಲ ಮೂತ್ರಗಳು ಕೆಲವೊಮ್ಮೆ ನೀರಿನಲ್ಲಿ ಮಿಶ್ರವಾಗಿ ಸಾಂಕ್ರಾಮಿಕ ರೋಗದ ಕೀಟಾಣುಗಳು ನಮ್ಮ ದೇಹವನ್ನು ಸೇರಬಹುದು. ಅಥವಾ ಮೇಲ್ನೋಟಕ್ಕೆ ನೀರು ತಿಳಿಯಾಗಿರುವಂತೆ ಕಂಡುಬಂದರೂ ಅದರಲ್ಲಿರುವ ವೈರಸ್ಗಳು ನಮ್ಮ ದೇಹ ಸೇರಿ ಬಾಧಿಸಬಹುದು.

ಇಲ್ಲಿ ಕಾಯಿಲೆ ಬಂದ ಬಳಿಕ ಅದು ನಮಗೆ ಫ್ಲೋರೋಸಿಸ್ ಎಂಬುದು ಗೊತ್ತಾಗುವ ಹೊತ್ತಿಗೆ ಕೆಲವು ಸಮಯ ಹಿಡಿಯಬಹುದು. ಏಕೆಂದರೆ ನಮ್ಮಲ್ಲಿ ಹೆಚ್ಚಿನವರು ಕಾಯಿಲೆ ಕಾಣಿಸಿಕೊಂಡ ತಕ್ಷಣ ವೈದ್ಯರ ಬಳಿಗೆ ಹೋಗದೆ ತಾವೇ ಸ್ವಯಂ ವೈದ್ಯೋಪಚಾರ ಮಾಡುತ್ತಾರೆ. ಇನ್ನೇನು ಕಾಯಿಲೆ ಉಲ್ಭಣಗೊಂಡು ಸಾಧ್ಯವಾಗಲ್ಲ ಎಂಬುದು ಗೊತ್ತಾದ ಬಳಿಕ ವೈದ್ಯರ ಬಳಿ ತೆರಳುತ್ತಾರೆ. ಈ ವೇಳೆಗೆ ಪರಿಸ್ಥಿತಿ ಹದಗೆಟ್ಟಿರುತ್ತದೆ. ವೈದ್ಯರಿಗೂ ರೋಗಿಯನ್ನು ಉಳಿಸಿಕೊಳ್ಳುವುದು ಕಷ್ಟದ ಕೆಲಸವಾಗಿರುತ್ತದೆ. ಆದ್ದರಿಂದ ಯಾವುದೇ ಕಾಯಿಲೆಯಿರಲಿ ಅದು ಕಾಣಿಸಿಕೊಂಡ ತಕ್ಷಣವೇ ವೈದ್ಯರ ಬಳಿಗೆ ತೆರಳಿ ಪರೀಕ್ಷೆ ಮಾಡಿ ತನಗೆ ಬಂದಿರುವ ಕಾಯಿಲೆ ಯಾವುದು ಎಂಬುದನ್ನು ಅರಿತುಕೊಳ್ಳುವುದು ಮುಖ್ಯ. ಫ್ಲೋರೋಸಿಸ್ ಕಾಯಿಲೆ ವಾಸಿಯಾಗದ ಕಾಯಿಲೆಯಾಗಿದ್ದು ನಿಯಂತ್ರಣ ಮಾಡಲಷ್ಟೆ ಸಾಧ್ಯವಿರುವುದರಿಂದ ಪ್ರತಿಯೊಬ್ಬರೂ ಇದರತ್ತ ಎಚ್ಚರ ವಹಿಸುವುದು ಅಗತ್ಯ. ಸಾರ್ವಜನಿಕರು ತಾವೇ ಸ್ವತಃ ತಮ್ಮ ಆರೋಗ್ಯ, ಆಹಾರ ಸೇವೆನೆ ವಿಧ, ಪರಿಸರ ರಕ್ಷಣೆ ಮಾಡಿಕೊಳ್ಳಬೇಕಾಗುತ್ತದೆ. ಕುಡಿಯುವ ನೀರು ಶುದ್ಧವಾಗಿದೆಯೋ? ಆಹಾರವೂ ಶುಚಿಯಾಗಿದೆಯೋ ಎಂಬುದನ್ನು ಮನದಟ್ಟು ಮಾಡಿಕೊಂಡು ಸೇವಿಸಬೇಕು. ರಸ್ತೆಬದಿಯ  ಆಹಾರ ಸೇವನೆಯನ್ನು ನಿಲ್ಲಿಸಬೇಕು. ಶುದ್ಧೀಕರಿಸಿದ ನೀರನ್ನು ಕುಡಿಯಬೇಕು. ಮನೆಯಲ್ಲಿ ನೀರನ್ನು ಕುದಿಸಿ ಆರಿಸಿ ಸೇವಿಸಬೇಕು. ಮನೆಗೆ ಸರಬರಾಜಾಗುವ ನೀರನ್ನು ನೇರವಾಗಿ ಸೇವಿಸುವುದನ್ನು ನಿಲ್ಲಿಸಬೇಕು. ಹೀಗೆ ಕೆಲವೊಂದು ಕ್ರಮಗಳನ್ನು ಕೈಗೊಂಡರೆ ಫ್ಲೋರೋಸಿಸ್ ಬರದಂತೆ ತಡೆಯಲು ಸಾಧ್ಯವಾಗುತ್ತದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು