News Karnataka Kannada
Friday, May 10 2024
ಕ್ರೈಮ್

ಎಫ್‌ ಡಿಎ ಪರೀಕ್ಷೆಯಲ್ಲಿ ನಕಲು ಮಾಡಲು ಯತ್ನ: 9 ಜನರ ವಿರುದ್ಧ ಎಫ್​ಐ​ಆರ್​​​​

FIR against 9 people for attempting to copy in FDA test
Photo Credit : News Kannada

ಕಲಬುರಗಿ: ಎಫ್​​ಡಿಎ ಹುದ್ದೆಗಳಿಗೆ ನಡೆದ ಪರೀಕ್ಷೆ ವೇಳೆ ಬ್ಲೂಟೂತ್ ಬಳಸಿ ನಕಲು ಮಾಡಲು ಯತ್ನಿಸಿದ್ದ ಆರೋಪದ ಮೇಲೆ ಅಫಜಲಪುರ ಪೊಲೀಸ್​ ಠಾಣೆಯಲ್ಲಿ 9 ಜನರ ವಿರುದ್ಧ ಎಫ್​ಐಆರ್ ದಾಖಲಾಗಿದೆ. ಈ ಪ್ರಕರಣದಲ್ಲೂ ಪಿಎಸ್​ಐ ಅಕ್ರಮದ ಕಿಂಗ್​​​ಪಿನ್​ ಆರ್​​.ಡಿ.ಪಾಟೀಲ್ ಪ್ರಮುಖ ಆರೋಪಿಯಾಗಿದ್ದಾನೆ. ಶನಿವಾರ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಎಫ್​​​​ಡಿಎ ಪರೀಕ್ಷೆ ನಡೆಸಿತ್ತು.

ಕಲಬುರಗಿ ನಗರದ ಶ್ರೀ ಶರಣಬಸವೇಶ್ವರ ವಿಶ್ವವಿದ್ಯಾಲಯ ಪರೀಕ್ಷಾ ಕೇಂದ್ರದಲ್ಲಿ ನಡೆದ ಎಫಡಿಎ ಪರೀಕ್ಷೆಯಲ್ಲಿ ಅಭ್ಯರ್ಥಿಗಳಾದ ಬಾಬು ಚಾಂದ್ ಶೇಖ್, ಸಂತೋಷ ಯಾಳಗಿ, ಆಕಾಶ್ ಬ್ಲೂಟುತ್ ಡಿವೈಸ್ ಬಳಸಿ ನಕಲು ಮಾಡುತ್ತಿದ್ದರು. ಈ ವೇಳೆ ಪರೀಕ್ಷಾ ಕೊಠಡಿ ಮೇಲ್ವಿಚಾರಕ ಇವರನ್ನು ರೆಡ್​​​ ಹ್ಯಾಂಡ್​ ಆಗಿ ಹಿಡಿದು, ಪೊಲೀಸರಿಗೆ ಒಪ್ಪಿಸಿದ್ದರು. ಅಲ್ಲದೆ ಇವರಿಗೆ ಸಹಾಯ ಮಾಡಿದ್ದ ಹಾಗೂ ಬ್ಲೂಟುತ್ ಡಿವೈಸ್ ನೀಡಿದ್ದ ಆರ್​.ಡಿ ಪಾಟೀಲ್ ಸೇರಿದಂತೆ ಐವರ ಮೇಲೆ ಕೇಸ್ ದಾಖಲಾಗಿತ್ತು.

ಪಿಎಸ್​ಐ ಅಕ್ರಮದಲ್ಲಿ ಭಾಗಿಯಾಗಿ ಜೈಲು ಪಾಲಾಗಿ ಈಗಷ್ಟೆ ಹೊರಬಂದರೂ ತನ್ನ ಹಳೆ ಚಾಳಿ ಬಿಡದ ಆರ್​ಡಿ ಪಾಟೀಲ್, ಕೆಇಎ ಪರೀಕ್ಷೆಯಲ್ಲೂ ಗೋಲ್ ಮಾಲ್ ಮಾಡಲು ಮುಂದಾಗಿದ್ದನು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು