News Karnataka Kannada
Saturday, May 04 2024
ಕ್ರೈಮ್

ಪಿಜಿಯಲ್ಲಿ ಸ್ಪೈ ಕ್ಯಾಮರಾ ಇಟ್ಟ ಖತರ್ನಾಕ್‌ ಜೋಡಿ

ತನಗೆ ಇಷ್ಟವಾದ ಅಡುಗೆ ಮಾಡಲಿಲ್ಲ  ಅನ್ನೋ ಕಾರಣಕ್ಕೆ ಲಿವ್ ಇನ್ ಪಾರ್ಟನರ್ ಆಗಿದ್ದ ಮಹಿಳೆಯನ್ನ ಬರ್ಬರವಾಗಿ ಹತ್ಯೆ ಮಾಡಿರೋ ಘಟನೆ ಹರಿಯಾಣದಲ್ಲಿ ನಡೆದಿದೆ.
Photo Credit : News Kannada

ಚಂಡೀಗಢ: ಇಲ್ಲಿನ ಸೆಕ್ಟರ್ 22ರಲ್ಲಿರುವ ಪೇಯಿಂಗ್ ಗೆಸ್ಟ್ (ಪಿಜಿ) ವಸತಿಗೃಹದ ಮಹಿಳಾ ವಾಶ್ ರೂಂನಲ್ಲಿ ಸ್ಪೈ ಕ್ಯಾಮೆರಾ ಅಳವಡಿಸಿದ್ದ ಯುವತಿ ಮತ್ತು ಆಕೆಯ ಗೆಳೆಯನನ್ನು ಬುಧವಾರ ಬಂಧಿಸಲಾಗಿದೆ.

ಆರೋಪಿ ಯುವತಿ ಇತರ ನಾಲ್ಕು ಯುವತಿಯರೊಂದಿಗೆ ಪಿಜಿಯಲ್ಲಿ ವಾಸಿಸುತ್ತಿದ್ದಳು. ತನ್ನ ಗೆಳೆಯನ ಕೋರಿಕೆಯ ಮೇರೆಗೆ, ಅವಳು ವಾಶ್ ರೂಂನಲ್ಲಿ ಸ್ಪೈ ಕ್ಯಾಮೆರಾ ಅಳವಡಿಸಿ ಯುವತಿಯರ ಖಾಸಗಿ ವೀಡಿಯೊಗಳನ್ನು ರೆಕಾರ್ಡ್ ಮಾಡಿದ್ದಾಳೆ. ಈ ಬಗ್ಗೆ ಅದೇ ಪಿಜಿಯಲ್ಲಿ ವಾಸವಿದ್ದ ಯುವತಿಯೊಬ್ಬರಿಗೆ ಅನುಮಾನ ಬಂದಿದ್ದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ನಂತರ ಆರೋಪಿಗಳಿಬ್ಬರನ್ನೂ ಬಂಧಿಸಿ ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಅಲ್ಲದೆ ಆರೋಪಿಗಳ ಫೋನ್‌ ಗಳನ್ನು ವಶಪಡಿಸಿಕೊಂಡು ಕೇಂದ್ರೀಯ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (ಸಿಎಫ್‌ಎಸ್‌ಎಲ್) ಕಳುಹಿಸಲಾಗಿದೆ.

ಪೊಲೀಸ್ ಉಪಾಧೀಕ್ಷಕ ಗುರುಮುಖ್ ಸಿಂಗ್ ಅವರು ಮಾಧ್ಯಮಗಳಿಗೆ ಈ ಬಗ್ಗೆ ಹೇಳಿಕೆ ನೀಡಿದ್ದು, “ಸುಮಾರು ಐದು ದಿನಗಳ ಹಿಂದೆ, ಯುವಕ, ಯುವತಿ ಚಂಡೀಗಢದಿಂದ ಸ್ಪೈ ಕ್ಯಾಮೆರಾವನ್ನು ಖರೀದಿಸಿ ವಾಶ್ ರೂಮ್‌ನಲ್ಲಿ ಅಳವಡಿಸಿದ್ದಾರೆ. ಅವರು ಸೆರೆಹಿಡಿದ ಫೋಟೋಗಳು ಮತ್ತು ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಅಪ್‌ಲೋಡ್ ಮಾಡಿದ್ದಾರೆಯೇ ಹಂಚಿಕೊಂಡಿದ್ದಾರೆಯೇ ಎಂಬ ಬಗ್ಗೆ ನಾವು ತನಿಖೆ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು