News Karnataka Kannada
Monday, May 06 2024
ಕ್ರೈಮ್

ಮದರಸಾದಲ್ಲಿ ವಿದ್ಯಾರ್ಥಿಯ ಶಿರಚ್ಚೇದಿತ ಶವ ಪತ್ತೆ

assam beheaded body
Photo Credit : By Author

ಗುವಾಹಟಿ: ಅಸ್ಸಾಂನ ಕ್ಯಾಚಾರ್ ಜಿಲ್ಲೆಯ ಮದರಸಾವೊಂದರ ಹಾಸ್ಟೆಲ್ ಕೊಠಡಿಯಲ್ಲಿ 12 ವರ್ಷದ ವಿದ್ಯಾರ್ಥಿಯ ಶಿರಚ್ಛೇದಿತ ಶವ ಇಂದು ಮುಂಜಾನೆ ಪತ್ತೆಯಾಗಿದೆ.

ದಾರುಸ್ ಸಲಾಂ ಹಾಫಿಝಿಯಾ ಮದ್ರಸದಲ್ಲಿ ಘಟನೆ ನಡೆದಿದೆ. ವಿದ್ಯಾರ್ಥಿ ಊಟ ಮುಗಿಸಿ ತನ್ನ ಕೊಠಡಿಯಲ್ಲಿ ಮಲಗಲು ಹೋಗಿದ್ದ. ಆದಾಗ್ಯೂ, ಮರುದಿನ ಬೆಳಿಗ್ಗೆ ಅವರ ಕೊಳೆತ ದೇಹ ಪತ್ತೆಯಾಗಿದ್ದು, ಮೃತನನ್ನು ರಬಿಜುಲ್ ಹುಸೇನ್ ಎಂದು ಗುರುತಿಸಲಾಗಿದೆ.

ಪೊಲೀಸರ ಪ್ರಕಾರ, ಮದ್ರಸಾ ಬೋಧಕರೊಬ್ಬರು ಫಜ್ರ್ ಪ್ರಾರ್ಥನೆಗೆ ವಿದ್ಯಾರ್ಥಿಗಳನ್ನು ಕರೆಯಲು ಹಾಸ್ಟೆಲ್ ಕೋಣೆಗೆ ಪ್ರವೇಶಿಸಿದಾಗ ನೆಲದ ಮೇಲೆ ವಿದ್ಯಾರ್ಥಿಯ ಶಿರಚ್ಛೇದಿತ ಶವವನ್ನು ಕಂಡಿದ್ದರು.

ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದು ಅವರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಿದ್ದಾರೆ. ಇನ್ನು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಶಿಕ್ಷಕರು ಮತ್ತು 20 ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ ಎಂದಿದ್ದಾರೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು