ಇಂಫಾಲ: ಮಣಿಪುರ ಹಿಂಸಾಚಾರ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆಯುತ್ತಿದ್ದು, ಕಳೆದ 24 ಗಂಟೆಗಳಲ್ಲಿ 6 ಮಂದಿ ಮೃತಪಟ್ಟಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ತಂದೆ-ಮಗ ಸೇರಿದಂತೆ ಆರು ಮಂದಿ ಸಾವನ್ನಪ್ಪಿದ್ದಾರೆ. ಶನಿವಾರ ಮುಂಜಾನೆಯಿಂದ ಬಿಷ್ಣುಪುರ್-ಚುರಾಚಂದ್ಪುರ ಗಡಿ ಪ್ರದೇಶಗಳಲ್ಲಿ ಹಗಲಿಡೀ ನಡೆದ ದಾಳಿಗಳಲ್ಲಿ ಸುಮಾರು 16 ಜನರು ಗಾಯಗೊಂಡಿದ್ದಾರೆ.
ಹರಿಯಾಣದ ನುಹ್ನಲ್ಲಿ ಅಕ್ರಮವಾಗಿ ನಿರ್ಮಾಣ ಮಾಡಲಾದ ಮನೆಗಳನ್ನು ಧ್ವಂಸ ಕಾರ್ಯಾಚರಣೆಯು ಎರಡು ಸಮುದಾಯಗಳ ನಡುವಿನ ಧ್ವೇಷದ ಕಿಚ್ಚನ್ನು ಹೆಚ್ಚಿಸುತ್ತಿದೆ. ನುಹ್ ಜಿಲ್ಲಾಡಳಿತ ಸಹಾರಾ ಹೋಟೆಲ್ ಅನ್ನು ನೆಲಸಮಗೊಳಿಸಲು ಬುಲ್ಡೋಜರ್ಗಳನ್ನು ತಂದಿದ್ದು ಇದು ಡೆಮಾಲಿಶನ್ ಡ್ರೈವ್ನ ನಾಲ್ಕನೇ ದಿನವಾಗಿದೆ.
ಇನ್ನು ಇಂದು 15 ಮನೆಗಳಿಗೆ ಬೆಂಕಿ ಹಚ್ಚಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶನಿವಾರ ಸಂಜೆ ಲಾಂಗೋಲ್ ಗೇಮ್ಸ್ ಗ್ರಾಮದಲ್ಲಿ ಗುಂಪು ಘರ್ಷಣೆ ನಡೆದಿದ್ದರಿಂದ ಈ ಘಟನೆ ಸಂಭವಿಸಿದೆ ಎಂದು ಅವರು ಹೇಳಿದ್ದಾರೆ.
ಗುಂಪನ್ನು ಚದುರಿಸಲು ಮತ್ತು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಭದ್ರತಾ ಸಿಬ್ಬಂದಿ ಹಲವಾರು ಸುತ್ತಿನ ಅಶ್ರುವಾಯು ಪ್ರಯೋಗಿಸಿದ್ದಾರೆ ಎಂದು ಅವರು ಹೇಳಿದರು.