News Karnataka Kannada
Tuesday, May 07 2024
ಅಡುಗೆ ಮನೆ

ನುಗ್ಗೆ ಸೊಪ್ಪು: ಪಲ್ಯಕ್ಕೂ ಸೈ, ರಸಂಗೂ ಸೈ

drumstick leaves: Curry and sai, rasangoo sai
Photo Credit : Facebook

ಭಾರತದಲ್ಲಿ ಹಣ್ಣು ತರಕಾರಿಗಳನ್ನು ಕೆಲವೊಂದು ಬಗೆಯ ಎಲೆಗಳನ್ನು ಕಾಂಡ ಗೆಡ್ಡೆ ಗೆಣಸುಗಳನ್ನು ಆಹಾರವನ್ನಾಗಿ ಬಳಸುವ ಪದ್ಧತಿಯನ್ನು ಕಾಣಬಹುದು. ಅಂತಹದೆ ವರ್ಗಕ್ಕೆ ನುಗ್ಗೆ ಸೊಪ್ಪುಗಳನ್ನು ಕೂಡ ಸೇರಿಸಬಹುದು.

ಮನೆ ಮಾತಾಗಿರುವ ನುಗ್ಗೆ ಸೊಪ್ಪು ಪಲ್ಯಕ್ಕು ಸೈ ರಸಂಗೂ ಸೈ. ಮನೆಮುಂದೆ ಸೊಂಪಾಗಿ ಬೆಳೆಯುವ ನುಗ್ಗೆ ಮರವನ್ನು ನೋಡದಿರಲಿ ಸಾಧ್ಯವಿಲ್ಲ. ಹಚ್ಚಾ ಹಸಿರಾಗಿ ಬೆಳೆದು ಹೂ ಬಿಟ್ಟು ಉದ್ದನೆಯ ದಂಟಿನಂತೆ ಬೆಳೆಯುವ ನುಗ್ಗೆಯನ್ನು ಎಲ್ಲರೂ ಸವಿಯುತ್ತಾರೆ. ಬಹುತೇಕ ಹೋಟೆಲ್ಗಳಲ್ಲಿ ನಾವು ನುಗ್ಗೆ ಕಾಯಿಯ ರಸಂಗಳನ್ನು ಸವಿಯುತ್ತೇವೆ. ನುಗ್ಗೆ ಪಲ್ಯಗಳನ್ನು ಸವಿಯುತ್ತಿರುತೇವೆ.

ಇಷ್ಟೆಲ್ಲಾ ಆದರೂ ಬಹಳ ವಿರಳವಾಗಿ ಮನೆಯಲ್ಲಿ ಮಾಡಿರಿರುವ ನುಗ್ಗೆ ಸೊಪ್ಪಿನ ಪಲ್ಯವನ್ನು ಸವಿಯಲು ಅವಕಾಶ ಸಿಕ್ಕರೆ ಯಾರು ಬಿಡುವುದಿಲ್ಲ. ಸಣ್ಣ ಸಣ್ಣ ಎಲೆಯನ್ನು ಆಯ್ದು ಪಲ್ಯ ಮಾಡಿ ಉಣ್ಣ ಬಡಿಸಿದರೆ ಮನೆ ಮಂದಿಯ ಮೊಗದಲ್ಲಿ ಮಂದಾಹಾಸ ಮೂಡುತ್ತದೆ.

ಅಧಿಕ ಪೌಷ್ಟಿಕಾಂಶವನ್ನು ಒಳಗೊಂಡಿರುವ ಸೊಪ್ಪು ಆರೋಗ್ಯಕ್ಕು ಸೈ ಅನಿಸಕೊಂಡಿದೆ. ಕೊಲೆಸ್ಟ್ರಾಲ್ ನ್ನು ನಿಯಂತ್ರಿಸುವಲ್ಲಿ, ಹೃದಯದ ಆರೋಗ್ಯವನ್ನು ಕಾಪಾಡುವಲ್ಲಿ ಸಾಕಷ್ಟು ಪರಿಣಾಮಕಾರಿ. ರಕ್ತದೊತ್ತಡವನ್ನು ನಿಯಂತ್ರಿಸಲು ಸಹಕಾರಿ. ದೇಹದ ತೂಕವನ್ನು ನಿಯಂತ್ರಿಸಲು ಸಹಾಯಕ.

ದಕ್ಷಿಣ ಕನ್ನಡ ಮತ್ತು ಮಲೆನಾಡಜನರು ಹೆಚ್ಚಾಗಿ ನುಗ್ಗೆ ಸೊಪ್ಪುನ್ನು ಪಲ್ಯ ಅಥವಾ ರಸಂ, ತೋವೆ ಗಳಾಗಿ ಬಳಸುತ್ತಾರೆ.ಇದರ ರುಚಿ ಸ್ವಲ್ಪ ಕಹಿ ಅನಿಸಿದರೆ ಕೆಲವರು ಬೆಲ್ಲವನ್ನು ಸೇರಿಸುತ್ತಾರೆ. ಇದಲ್ಲದೆ ನುಗ್ಗೆ ಸೊಪ್ಪು ಆಗಾರವಾದ ವಿಟಮಿನ್‌ಗಳನ್ನು ಒಳಗೊಂಡಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು