ಬೇಸಿಗೆ ಕಾಲದಲ್ಲಿ ಆರೋಗ್ಯಕ್ಕೆ ಹಿತಕರವಾಗಿರುವಂತಹ ಪೀನಟ್ ಬಟರ್ ಮಿಲ್ಕ್ ಶೇಕ್ ಅತ್ಯಂತ ಸುಲಭವಾಗಿ ತಯಾರಿಸಬಹುದು. ಮಾಡುವ ವಿಧಾನ ಇಲ್ಲಿದೆ.
ಬೇಕಾಗುವ ಸಾಮಾಗ್ರಿಗಳು:
3 ಚಮಚ ಪೀನಟ್ ಬಟರ್
2 ಕಪ್ ಹಾಲು
2 ಕಪ್ ವೆನಿಲ್ಲಾ ಐಸ್ ಕ್ರೀಮ್
1 1/2 ಚಮಚ ಸಕ್ಕರೆ
6 ಐಸ್ ಕ್ಯೂಬ್ ಗಳು
ಮಾಡುವ ವಿಧಾನ:
ಹಾಲು, ಪೀನಟ್ ಬಟರ್, ಐಸ್ ಕ್ಯೂಬ್ ಮತ್ತು ಸಕ್ಕರೆಯನ್ನು ಬ್ಲೆಂಡರ್ ಜಾರ್ ನಲ್ಲಿ ಹಾಕಿ ನಯವಾಗುವವರೆಗೆ ಮಿಶ್ರಣ ಮಾಡಿ.
ವೆನಿಲ್ಲಾ ಐಸ್ ಕ್ರೀಮ್ ಸೇರಿಸಿ ಮತ್ತೊಮ್ಮೆ ನಯವಾಗಿ ತಿರುಗಿಸಿ ಅದನ್ನು ಸರ್ವಿಂಗ್ ಗ್ಲಾಸ್ ನಲ್ಲಿ ಹಾಕಿ ಸರ್ವ್ ಮಾಡಿ.