ಸಂಜೆ ಚಹಾದ ಜೊತೆ ಸವಿಯಲು ಬಿಸಿ ಬಿಸಿಯಾದ ಚಕ್ಕುಲಿ ಮಾಡುವ ವಿಧಾನ ಇಲ್ಲಿದೆ
ಬೇಕಾಗುವ ಪದಾರ್ಥಗಳು
ಬೆಳ್ತಿಗೆ ಅಕ್ಕಿ –ಒಂದು ಕೆಜಿ
ಉದ್ದಿನ ಬೇಳೆ –ಅರ್ಧ ಕೇಜಿ
ಜೀರಿಗೆ – ನಾಲ್ಕು ಚಮಚ
ಎಳ್ಳು – ನಾಲ್ಕು ಚಮಚ
ಬೆಣ್ಣೆ – ನಾಲ್ಕು ನಿಂಬೆಹಣ್ಣು ಗಾತ್ರದಷ್ಟು
ಕೊಬ್ಬರಿ ಎಣ್ಣೆ – ಕರಿಯಲು
ಉಪ್ಪು ರುಚಿಗೆ ತಕ್ಕಷ್ಟು
ಮಾಡುವ ವಿಧಾನ:
ಉದ್ದಿನ ಬೇಳೆಯನ್ನು ಕೆಂಪಗೆ ಹುರಿದಿ ಬೇಯಿಸಿ ಇಟ್ಟುಕೊಳ್ಳಬೇಕು. ಅಕ್ಕಿಯನ್ನು ಚನ್ನಾಗಿ ತೊಳೆದು ಬಿಸಿಲಿನಲ್ಲಿ ಒಣಗಿಸಿ ಅದನ್ನು ಹುಡಿ ಮಾಡಿಕೊಳ್ಳಬೇಕು( ಅಕ್ಕಿ ಹುಡಿ ಬಳಸಿದರೂ ಆಗುತ್ತದೆ). ಈ ಹುಡಿಗೆ ಉಪ್ಪು, ಜೀರಿಗೆ, ಎಳ್ಳು, ಬೆಣ್ಣೆ ಹಾಕಿ ಇಡ್ಲಿ ಹಿಟ್ಟಿನಷ್ಟು ಹದಕ್ಕೆ ಕಲಸಿ ಅದಕ್ಕೆ ಉದ್ದಿನ ಹಿಟ್ಟು ಹಾಕಿ ಚನ್ನಾಗಿ ಬೆರೆಸಿ ಅದನ್ನು ಚಕ್ಕುಲಿಯ ಅಚ್ಚಿನಲ್ಲಿ ಹಾಕಿ ಬಟರ್ ಪೇಪರ್ ಮೇಲೆ ೩ ಸುತ್ತು ದುಂಡಗೆ ಒತ್ತಬೇಕು. ಹೀಗೆ ಬೇಕಾದಷ್ಟು ಮಾಡಿಕೊಂಡು ಕಾದ ಎಣ್ಣೆಗೆ ಬಿಟ್ಟು ಚನ್ನಾಗಿ ಕಾದ ನಂತರ ಗಾಳಿ ಆಡದಂತೆ ಡಬ್ಬದಲ್ಲಿ ಹಾಕಿ ಇಟ್ಟರೆ ಸಂಜೆ ಚಹಾದ ಜೊತೆಗೆ ಸವಿಯಲು ತಯಾರಾಗುತ್ತದೆ.