News Karnataka Kannada
Sunday, May 05 2024
ಅಡುಗೆ ಮನೆ

ಸಸ್ಯಹಾರಿಗಳಿಗೆ ಇಲ್ಲಿದೆ ರುಚಿ ರುಚಿಯಾದ ಹಲಸಿನ ಹಣ್ಣಿನ ಶವರ್ಮ

Here's a delicious jackfruit showerma for vegetarians
Photo Credit : Pixabay

ಹಲಸಿನ ಹಣ್ಣು ಪೋಷಕಾಂಶಗಳಿಂದ ತುಂಬಿರುವ ಅದ್ಭುತ ಆಹಾರವಾಗಿದೆ. ಈ ಹಲಸಿನ ಹಣ್ಣಿನಲ್ಲಿ ಹಲವಾರು ವಿಧಾನವಾದ ಆಹಾರ ಪದಾರ್ಥಗಳನ್ನು ತಯಾರಿಸಬಹುದು. ಅದರಲ್ಲೂ ಮುಖ್ಯವಾಗಿ ಈಗಿನ ಕಾಲಕ್ಕೆ ತಕ್ಕಂತೆ ಶವರ್ಮಗಳನ್ನು ಕೂಡ ತಯಾರಿಸಬಹುದು.

ಬೇಕಾಗುವ ಸಾಮಾಗ್ರಿಗಳು:

1.5 ಟೀಸ್ಪೂನ್ ಆಲಿವ್ ಎಣ್ಣೆ

1 ಟೀಸ್ಪೂನ್ ಶುಂಠಿ ಪುಡಿ

1 ಟೀಸ್ಪೂನ್ ಬೆಳ್ಳುಳ್ಳಿ ಪುಡಿ

1 ಟೀಸ್ಪೂನ್ ಕೆಂಪು ಮೆಣಸಿನ ಪುಡಿ

1 ಟೀಸ್ಪೂನ್ ಜೀರಿಗೆ ಪುಡಿ

ಮೆಣಸಿನ ಚೂರುಗಳು ಮತ್ತು ಒರೆಗಾನೊ

ರ‍್ಯಾಪ್ ಅಥವಾ ಚಪಾತಿ

ವಿಗನ್ ತಾಹಿನಿ ಸಾಸ್

ಕತ್ತರಿಸಿದ ಟೊಮೆಟೊಗಳು, ಸೌತೆಕಾಯಿಗಳು, ಬೀಟ್ರೂಟ್, ಜಲಪೆನೊ ಉಪ್ಪಿನಕಾಯಿ ಮತ್ತು ಲೆಟಸ್.

ವಿಧಾನ:

ಮೊದಲಿಗೆ, ಒಂದು ಬಟ್ಟಲಿನಲ್ಲಿ ಹಲಸಿನ ಹಣ್ಣು ಸೇರಿಸಿ ಮತ್ತು ಅದರ ಮೇಲೆ 1 ಟೀಸ್ಪೂನ್ ಆಲಿವ್ ಎಣ್ಣೆ, ಶುಂಠಿ ಪುಡಿ, ಬೆಳ್ಳುಳ್ಳಿ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಕೆಂಪು ಮೆಣಸಿನ ಪುಡಿ, ಜೀರಿಗೆ ಪುಡಿ, ಚಿಲ್ಲಿ ಫ್ಲೇಕ್ಸ್ ಮಿಶ್ರಣ ಮತ್ತು ಒರೆಗಾನೊ (ಅದರಲ್ಲಿ ಸುಮಾರು 1 ಟೀಸ್ಪೂನ್) ಸೇರಿಸಿ. ಚೆನ್ನಾಗಿ ಮಿಶ್ರಣ ಮಾಡಿ ಮತ್ತು 2-3 ಗಂಟೆಗಳ ಕಾಲ ಮ್ಯಾರಿನೇಟ್ ಮಾಡಿ.

ನಂತರ, ನಾನ್-ಸ್ಟಿಕ್ ಬಾಣಲೆಯಲ್ಲಿ, ಅರ್ಧ ಟೀಸ್ಪೂನ್ ಆಲಿವ್ ಎಣ್ಣೆ ಬಿಸಿ ಮಾಡಿ ಅದಕ್ಕೆ ಹಲಸಿನ ಹಣ್ಣಿನ ಮಿಶ್ರಣವನ್ನು ಸೇರಿಸಿ  5 ರಿಂದ 6 ನಿಮಿಷಗಳ ಕಾಲ ಬೇಯಿಸಿ.

ರ‍್ಯಾಪ್ ಅಥವಾ ಚಪಾತಿ ಬಳಸಿ, ಸ್ವಲ್ಪ ತಾಹಿನಿ ಸಾಸ್ ಹರಡಿ, ಬೇಯಿಸಿದ ಹಲಸಿನ ಹಣ್ಣನ್ನು ಸೇರಿಸಿ, ಮತ್ತು ಕೆಲವು ಕತ್ತರಿಸಿದ ಟೊಮೆಟೊಗಳು, ಸೌತೆಕಾಯಿಗಳು, ಬೀಟ್ರೂಟ್ ಮತ್ತು ಜಲಪೆನೊ, ಲೆಟಸ್ ಅನ್ನು ಸೇರಿಸಿ ಮತ್ತು ಅದರ ಮೇಲೆ ಇನ್ನೂ ಸ್ವಲ್ಪ ತಾಹಿನಿ ಸಾಸ್ ಸೇರಿಸಿ.

ಬಾಣಲೆಯ ಮೇಲೆ ಒಂದು ಅಥವಾ ಎರಡು ನಿಮಿಷಗಳ ಕಾಲ ಗ್ರಿಲ್ ಮಾಡಿ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು