ಚಾಕೊಲೇಟ್ ಬನಾನಾ ಮಿಲ್ಕ್ ಶೇಕ್ ಸುಲಭವಾಗಿ ತಯಾರಿಸಬಹುದಾದ ಮಿಲ್ಕ್ ಶೇಕ್ ಆಗಿದ್ದು, ಇದನ್ನು ಬೆಳಗಿನ ಉಪಾಹಾರದಲ್ಲಿ ಸೇರಿಸಬಹುದಾಗಿದೆ. ತಯಾರಿಸಲು ತುಂಬಾ ಸುಲಭವಾಗಿರುವ ಈ ಮಿಲ್ಕ್ ಶೇಕ್ ಬೇಸಿಗೆ ಕಾಲದಲ್ಲಿ ದೇಹಕ್ಕೆ ತಂಪಾಗಿದ್ದು ಮಾಡುವ ವಿಧಾನ ಇಲ್ಲಿದೆ.
ಬೇಕಾಗುವ ಸಾಮಾಗ್ರಿಗಳು:
2/3 ಕಪ್ ಹಾಲು
1 ಬಾಳೆಹಣ್ಣು
1 ಟೇಬಲ್ ಚಮಚ ಚಾಕೊಲೇಟ್ ಸಿರಪ್
2-3 ಸ್ಕೂಪ್ಸ್ ಐಸ್ ಕ್ರೀಮ್ (ವೆನಿಲಾ)
ಮಾಡುವ ವಿಧಾನ:
ಬ್ಲೆಂಡರ್ ಜಾರ್ ನಲ್ಲಿ ಕತ್ತರಿಸಿದ ಬಾಳೆಹಣ್ಣನ್ನು, ಹಾಲು, ವೆನಿಲಾ ಐಸ್ ಕ್ರೀಮ್ ಹಾಗೂ ಚಾಕಲೇಟ್ ಸಿರಪ್ ಅನ್ನು ಸೇರಿಸಿ ನಯವಾಗಿ ರುಬ್ಬಿಕೊಳ್ಳಿ ಅಗತ್ಯವಿದ್ದರೆ ಐಸ್ ಕ್ಯೂಬ್ ಗಳನ್ನು ಸೇರಿಸಬಹುದು. ಈಗ ಸರ್ವಿಂಗ್ ಗ್ಲಾಸ್ ತೆಗೆದುಕೊಂಡು ಅದಕ್ಕೆ ಈ ಚಾಕಲೇಟ್ ಮಿಶ್ರಣವನ್ನ ಸೇರಿಸಿ ಅದರ ಮೇಲೆ ಐಸ್ ಕ್ರೀಮ್ ಸ್ಕೂಪ್ ಅನ್ನು ಇಟ್ಟು ಚಾಕಲೇಟ್ ಸಿರಪ್ ನಿಂದ ಅಲಂಕರಿಸಿದರೆ ರುಚಿ ರುಚಿಯಾದ ಚಾಕಲೇಟ್ ಬನಾನಾ ಮಿಲ್ಕ್ ಶೇಕ್ ಸವಿಯಲು ಸಿದ್ಧ