ಓರಿಯೋ ಮಿಲ್ಕ್ ಶೇಕ್ ಕೆಲವೇ ನಿಮಿಷಗಳಲ್ಲಿ ಸಿದ್ಧವಾಗು ಸುಲಭವಾದ ಶೇಕ್ ಆಗಿದೆ. ಈ ಬೇಸಿಗೆ ಕಾಲದಲ್ಲಿ ದೇಹವನ್ನ ಹಾಗೂ ಮನಸ್ಸನ್ನ ತಂಪಾಗಿಸುವ ಒರಿಯೋ ಮಿಲ್ಕ್ ಶೇಕ್ ಮಾಡುವ ವಿಧಾನ ಇಲ್ಲಿದೆ.
ಬೇಕಾಗುವ ಸಾಮಾಗ್ರಿಗಳು:
10 ಓರಿಯೋ ಬಿಸ್ಕೆಟ್
1/2 ಕಪ್ ಹಾಲು
1 ಕಪ್ ವೆನಿಲ್ಲಾ ಐಸ್ ಕ್ರೀಮ್ ಅಥವಾ ಚಾಕೊಲೇಟ್ ಐಸ್ ಕ್ರೀಮ್
ಮಾಡುವ ವಿಧಾನ:
ಬ್ಲೆಂಡರ್ ಅಥವಾ ಮಿಕ್ಸರ್ ಜಾರ್ ಗೆ 8 ಓರಿಯೋ ಕುಕೀಸ್ ಮತ್ತು 1/2 ಕಪ್ ಹಾಲನ್ನು ಸೇರಿಸಿ 1 ಕಪ್ ವೆನಿಲ್ಲಾ ಅಥವಾ ಚಾಕೊಲೇಟ್ ಐಸ್ ಕ್ರೀಮ್ ಸೇರಿಸಿ ಬ್ಲೆಂಡ್ ಮಾಡಿ ಸರ್ವಿಂಗ್ ಗ್ಲಾಸ್ ಗೆ ಹಾಕಿ ಅದರ ಮೇಲೆ ಓರಿಯೋ ಬಿಸ್ಕೆಟ್ ಗಳನ್ನು ಚಿಕ್ಕ ಚಿಕ್ಕ ತುಂಡುಗಳನ್ನಾಗಿ ಮಾಡಿ ಹಾಕಿ ಫ್ರಿಡ್ಜ್ ನಲ್ಲಿ ಅರ್ಧ ಗಂಟೆಗಳ ಕಾಲ ಇಟ್ಟರೆ ತಂಪು ತಂಪಾದ ಓರಿಯೋ ಮಿಲ್ಕ್ ಶೇಕ್ ಸವಿಯಲು ಸಿದ್ಧ. ಅಗತ್ಯವಿದ್ದರೆ ಒರಿಯೋ ಮಿಲ್ಕ್ ಶೇಕ್ ಮೇಲೆ ಒಂದು ಸ್ಕೂಪ್ ವೆನಿಲಾ ಅಥವಾ ಚಾಕಲೇಟ್ ಐಸ್ ಕ್ರೀಮ್ ಅನ್ನು ಬೇಕಾದರೂ ಸೇರಿಸಬಹುದು.