ಮುಂಬೈ: ಭೋಜ್ಪುರಿ ಚಿತ್ರರಂಗದ ಖ್ಯಾತ ನಟ ಬ್ರಿಜೇಶ್ ತ್ರಿಪಾಠಿ ಸೋಮವಾರ ಮುಂಜಾನೆ ತೀವ್ರ ಹೃದಯಾಘಾತದಿಂದ ನಿಧನರಾದರು. ಹಿರಿಯ ನಟ, ಭೋಜ್ಪುರಿ ಚಿತ್ರರಂಗದಲ್ಲಿ ಮಾತ್ರವಲ್ಲದೆ ಹಿಂದಿ ಚಲನಚಿತ್ರಗಳಲ್ಲಿಯೂ ನಟಿಸಿದ್ದರು. ಅವರು ಪ್ರಾದೇಶಿಕ ಚಲನಚಿತ್ರಗಳು ಸೇರಿದಂತೆ 250 ಚಿತ್ರಗಳಲ್ಲಿ ನಟಿಸಿದ್ದರು.
ಬ್ರಿಜೇಶ್ ತ್ರಿಪಾಠಿ ಡೆಂಗ್ಯೂ ನಿಂದ ಬಳಲುತ್ತಿದ್ದು, ಅವರನ್ನು ಮೀರತ್ ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಅವರ ಅವರ ಆರೋಗ್ಯ ಹದಗೆಟ್ಟಿದ್ದು, ಹಠಾತ್ ಹೃದಯಾಘಾತಕ್ಕೆ ಒಳಗಾದರು ಎಂದು ಮೂಲಗಳು ಹೇಳಿವೆ. ಭೋಜ್ಪುರಿ ಚಲನಚಿತ್ರ ‘ಓಂ’ ನ ಯಶಸ್ಸು ಅವರಿಗೆ ಜಾಗತಿಕ ಮನ್ನಣೆ ಒದಗಿಸಿತು.
ಭೋಜ್ಪುರಿ ಚಲನಚಿತ್ರೋದ್ಯಮದಲ್ಲಿ ಪ್ರಮುಖ ಹೆಸರುಗಳಾದ ಪವನ್ ಸಿಂಗ್, ದಿನೇಶ್ ಲಾಲ್ ಯಾದವ್ ಮತ್ತು ರವಿ ಕಿಶನ್ ಅವರೊಂದಿಗೆ ಕೆಲಸ ಮಾಡಿದರು.