Bengaluru 22°C
Ad

ಮುಸ್ಲಿಂ ಮಹಿಳೆಯರ ಕುರಿತಾದ ʼಹಮಾರೆ ದೋʼ ಸಿನಿಮಾ ಬಿಡುಗಡೆಗೆ ಅನುಮತಿ ನೀಡಿದ ಬಾಂಬೆ ಹೈಕೋರ್ಟ್‌

ಮುಸ್ಲಿಂ ಮಹಿಳೆಯರ ಮೇಲಿನ ದೌರ್ಜನ್ಯದ ಕುರಿತ ಕಥಾಹಂದರ ಹೊಂದಿರುವ, ಆದರೆ, ಬಿಡುಗಡೆಗೆ ಮುನ್ನವೇ ವಿವಾದಕ್ಕೆ ಕಾರಣವಾಗಿದ್ದ ಹಮಾರೆ ದೋ ಸಿನಿಮಾವನ್ನು ಬಿಡುಗಡೆಗೆ ಬಾಂಬೆ ಹೈಕೋರ್ಟ್‌ ಅನುಮತಿ ನೀಡಿದ್ದು, ಅದರಂತೆ  ಇಂದು ಸಿನಿಮಾ ಬಿಡುಗಡೆಯಾಗಿದೆ.

‌ಮುಂಬೈ: ಮುಸ್ಲಿಂ ಮಹಿಳೆಯರ ಮೇಲಿನ ದೌರ್ಜನ್ಯದ ಕುರಿತ ಕಥಾಹಂದರ ಹೊಂದಿರುವ, ಆದರೆ, ಬಿಡುಗಡೆಗೆ ಮುನ್ನವೇ ವಿವಾದಕ್ಕೆ ಕಾರಣವಾಗಿದ್ದ ಹಮಾರೆ ದೋ ಸಿನಿಮಾವನ್ನು ಬಿಡುಗಡೆಗೆ ಬಾಂಬೆ ಹೈಕೋರ್ಟ್‌ ಅನುಮತಿ ನೀಡಿದ್ದು, ಅದರಂತೆ  ಇಂದು ಸಿನಿಮಾ ಬಿಡುಗಡೆಯಾಗಿದೆ.

ಸಿನಿಮಾದಲ್ಲಿ ಒಂದಷ್ಟು ದೃಶ್ಯಗಳನ್ನು, ಸಂಭಾಷಣೆಯನ್ನು ತೆಗೆಯಬೇಕು. ಒಬ್ಬ ಮುಸ್ಲಿಂ ಸದಸ್ಯ ಸೇರಿ ಮೂವರು ಇರುವ ಒಂದು ಸಮಿತಿ ರಚಿಸಲಾಗುತ್ತದೆ. ಆ ಸಮಿತಿಯ ಅಭಿಪ್ರಾಯದ ನಂತರ ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ.

ಅಲ್ಲಿಯವರೆಗೆ ಸಿನಿಮಾವನ್ನು ಬಿಡುಗಡೆ ಮಾಡಬಹುದು ಎಂಬುದಾಗಿ ಬಾಂಬೆ ಹೈಕೋರ್ಟ್‌ ತಿಳಿಸಿತು. ಅದರಂತೆ, ಜೂನ್‌ 7ರಂದು ಸಿನಿಮಾ ಬಿಡುಗಡೆ ಮಾಡಲಾಗಿದೆ. ಕರ್ನಾಟಕದಲ್ಲಿ ಮಾತ್ರ ಸಿನಿಮಾ ಬಿಡುಗಡೆಯನ್ನು 15 ದಿನಗಳವರೆಗೆ ನಿಷೇಧಿಸಲಾಗಿದೆ. ಕೋಮು ಸೌಹಾರ್ದತೆಗೆ ಧಕ್ಕೆ ಬರುವ ಸಾಧ್ಯತೆ ಇರುವ ಕಾರಣ ನಿಷೇಧಿಸಲಾಗಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.

 

Ad
Ad
Nk Channel Final 21 09 2023
Ad