ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ಅವರು ಹಲವು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಇಂದು (ಜುಲೈ 12) ಅವರ ಜನ್ಮದಿನದ ಪ್ರಯುಕ್ತ ಆ ಎಲ್ಲ ಸಿನಿಮಾಗಳಿಂದ ಅಪ್ಡೇಟ್ ಲಭ್ಯವಾಗಿದೆ. ಅದರಲ್ಲೂ ‘ಘೋಸ್ಟ್’ ಸಿನಿಮಾದಿಂದ ಬಿಡುಗಡೆ ಆಗಿರುವ ‘ಬಿಗ್ ಡ್ಯಾಡಿ’ ಟೀಸರ್ ಹೆಚ್ಚಿನ ಹವಾ ಸೃಷ್ಟಿ ಮಾಡಿದೆ. ಈ ಟೀಸರ್ಗಾಗಿ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು.
ಆ ನಿರೀಕ್ಷೆಗೆ ತಕ್ಕಂತೆಯೇ ನಿರ್ದೇಶಕ ಶ್ರೀನಿ ಅವರು ಈ ಟೀಸರ್ ಕಟ್ಟಿಕೊಟ್ಟಿದ್ದಾರೆ. ಹತ್ತಾರು ಗನ್ ಹಿಡಿದು ಬರುವ ಗುಂಪನ್ನು ಶಿವಣ್ಣ ಕಣ್ಣಿನಲ್ಲೇ ಹೆದರಿಸುತ್ತಾರೆ. ಆಗ ಅವರು ಹೇಳುವ ಡೈಲಾಗ್ ಕೂಡ ಖಡಕ್ ಆಗಿದೆ. ಸದ್ಯ ಯೂಟ್ಯೂಬ್ನಲ್ಲಿ ‘ಘೋಸ್ಟ್’ ಸಿನಿಮಾದ ‘ಬಿಗ್ ಡ್ಯಾಡಿ’ ಟೀಸರ್ ಧೂಳೆಬ್ಬಿಸುತ್ತಿದೆ. . ಈ ಚಿತ್ರದಲ್ಲಿ ಶಿವರಾಜ್ಕುಮಾರ್ ಅವರು ಗ್ಯಾಂಗ್ಸ್ಟರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.
‘ಸಂದೇಶ್ ಪ್ರೊಡಕ್ಷನ್ಸ್’ ಮೂಲಕ ಸಂದೇಶ್ ಎನ್. ಅವರು ಅದ್ದೂರಿ ಬಜೆಟ್ನಲ್ಲಿ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ದತ್ತಣ್ಣ, ಅನುಪಮ್ ಖೇರ್, ಸತ್ಯಪ್ರಕಾಶ್, ಪ್ರಶಾಂತ್ ನಾರಾಯಣನ್, ಅಭಿಜಿತ್, ಜಯರಾಂ ಮುಂತಾದ ಕಲಾವಿದರು ಈ ಸಿನಿಮಾದಲ್ಲಿದ್ದಾರೆ.