News Karnataka Kannada
Sunday, April 28 2024
ಮನರಂಜನೆ

ರಶ್ಮಿಕಾ ಮಂದಣ್ಣ ಡೀಪ್​ಫೇಕ್​ ವಿಡಿಯೋ: ಗೆಳತಿ ಪರ ನಿಂತ ದೇವರಕೊಂಡ

Rashmika Mandanna's deepfake video: Deverakonda comes out in support of his girlfriend
Photo Credit : News Kannada

ಮುಂಬೈ : ನಟಿ ರಶ್ಮಿಕಾ ಮಂದಣ್ಣಅವರ ಡೀಪ್​ಫೇಕ್​ ವಿಡಿಯೋ ಬಗ್ಗೆ ಎಲ್ಲೆಲ್ಲೂ ಚರ್ಚೆ ಆಗುತ್ತಿದ್ದು,  ಅವರ ನಕಲಿ ವೈರಲ್​ ವಿಡಿಯೋದ  ಕುರಿತು ಪ್ರಕಟ ಆಗಿರುವ ಸುದ್ದಿಯನ್ನು ವಿಜಯ್​ ದೇವರಕೊಂಡ  ಶೇರ್​ ಮಾಡಿಕೊಂಡು ತಮ್ಮ ಗೆಳತಿಯ ಪರವಾಗಿ ಅವರು ವಾದ ಮಾಡಿದ್ದಾರೆ.

ಟಾಲಿವುಡ್​ನ ಸೂಪರ್​ ಹಿಟ್​ ಜೋಡಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್​ ದೇವರಕೊಂಡ  ನಡುವೆ ಒಳ್ಳೆಯ ಬಾಂಧವ್ಯ ಇದೇ. ವೃತ್ತಿಜೀವನದಲ್ಲಿ ಒಬ್ಬರಿಗೊಬ್ಬರು ಬೆಂಬಲವಾಗಿ ನಿಂತಿದ್ದಾರೆ. ಈಗ ರಶ್ಮಿಕಾ ಮಂದಣ್ಣ ಅವರ ನಕಲಿ ವಿಡಿಯೋ ವೈರಲ್​ ಆಗಿದ್ದನ್ನು ವಿಜಯ್​ ದೇವರಕೊಂಡ ಖಂಡಿಸಿದ್ದಾರೆ.

‘ರಶ್ಮಿಕಾ ಮಂದಣ್ಣ ಫೇಕ್​ ವಿಡಿಯೋ ವೈರಲ್ ಆದ ಬಳಿಕ ಡೀಪ್​ಫೇಕರ್ಸ್​ ನಿಯಂತ್ರಣಕ್ಕೆ ಮುಂದಾದ ಪೊಲೀಸರು’ ಎಂದು ಪ್ರಕಟ ಆಗಿರುವ ಸುದ್ದಿಯನ್ನು ವಿಜಯ್​ ದೇವರಕೊಂಡ ಶೇರ್​ ಮಾಡಿಕೊಂಡಿದ್ದಾರೆ. ‘ಭವಿಷ್ಯಕ್ಕಾಗಿ ಇದು ತುಂಬಾ ಮುಖ್ಯವಾದ ಕ್ರಮ. ಈ ರೀತಿ ಯಾರಿಗೂ ಆಗಬಾರದು. ಸೈಬರ್​ ಕ್ರೈಮ್​ ತಡೆಯಲು ಸಮರ್ಥವಾದ ಮತ್ತು ಸುಲಭಕ್ಕೆ ಜನರ ಸಂಪರ್ಕಕ್ಕೆ ಸಿಗುವಂತಹ ಸೈಬರ್​ ಘಟಕ ಬೇಕು. ತಪ್ಪಿತಸ್ಥರಿಗೆ ಶಿಕ್ಷೆಯಾದರೆ ಜನರಿಗೆ ಹೆಚ್ಚು ರಕ್ಷಣೆ ಸಿಗುತ್ತದೆ’ ಎಂದು ವಿಜಯ್​ ದೇವರಕೊಂಡ ಬರೆದುಕೊಂಡಿದ್ದಾರೆ.

ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಬಾಲಿವುಡ್​ ನಟ ಇಶಾನ್​ ಕಟ್ಟರ್​ ಅವರು ಕೂಡ ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ‘ನಾನು ಇದನ್ನು ಖಂಡಿಸುತ್ತೇನೆ. ಡೀಪ್​ಫೇಕ್​ ಎಂಬುದು ಒಳ್ಳೆಯದಲ್ಲ. ಅನುಮತಿ ಇಲ್ಲದೇ ಒಬ್ಬರ ದೇಹ ಮತ್ತು ಮುಖವನ್ನು ಬಳಸುವುದು ಸರಿಯಲ್ಲ. ಅಂಥ ವಿಚಾರಗಳಿಗೆ ನನ್ನ ಬೆಂಬಲ ಇಲ್ಲ’ ಎಂದು ಇಶಾನ್​ ಕಟ್ಟರ್​ ಹೇಳಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು