News Karnataka Kannada
Sunday, May 05 2024
ದೆಹಲಿ

ನವದೆಹಲಿ: ಅವಧಿಗೂ ಮುನ್ನವೇ ಶಾಲೆಗಳಿಗೆ ಚಳಿಗಾಲದ ರಜೆ ಘೋಷಣೆ

New Delhi: Schools to remain closed ahead of schedule
Photo Credit : News Kannada

ನವದೆಹಲಿ: ದೆಹಲಿಯಲ್ಲಿ ಗಾಳಿಯ ಗುಣಮಟ್ಟ ಕನಿಷ್ಠ ಮಟ್ಟಕ್ಕೆ ಹೋಗಿದೆ. ಈ ಕಾರಣದಿಂದ ದೆಹಲಿ ಸರ್ಕಾರವು ಶಾಲೆಗಳಿಗೆ ನವೆಂಬರ್ 9 ರಿಂದ 18 ರವರೆಗೆ ರಜೆ ಘೋಷಿಸಿದೆ. ಪ್ರತಿ ವರ್ಷವೂ ಡಿಸೆಂಬರ್​ನಲ್ಲಿ ತುಂಬಾ ಚಳಿ ಇರುವ ಕಾರಣ ಒಂದು ವಾರಗಳ ಕಾಲ ಚಳಿಗಾಲದ ರಜೆ ನೀಡಲಾಗುತ್ತಿತ್ತು.

ಆದರೆ ಗಾಳಿಯ ಗುಣಮಟ್ಟ ತೀರಾ ಕಳಪೆಯಾಗಿರುವ ಕಾರಣ ನವೆಂಬರ್ 9-18 ರವರೆಗೆ ರಜೆ ಘೋಷಿಸಲಾಗಿದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ದ ಅಂಕಿಅಂಶಗಳ ಪ್ರಕಾರ ನಗರದ ಒಟ್ಟಾರೆ ವಾಯು ಗುಣಮಟ್ಟ ಸೂಚ್ಯಂಕವು (ಎಕ್ಯೂಐ) ಬೆಳಿಗ್ಗೆ 7 ಗಂಟೆಗೆ 421 ದಾಖಲಾಗಿದೆ.

ಆನಂದ್ ವಿಹಾರ್, ದ್ವಾರಕಾ, ಶಾದಿಪುರ್, ಮಂದಿರ ಮಾರ್ಗ, ಐಟಿಒ, ಆರ್‌ಕೆ ಪುರಂ, ಪಂಜಾಬಿ ಬಾಗ್, ಉತ್ತರ ಕ್ಯಾಂಪಸ್, ಮಥುರಾ ರಸ್ತೆ, ರೋಹಿಣಿ, ಪಟ್‌ಪರ್‌ಗಂಜ್, ಓಖ್ಲಾ, ಇಂಡಿಯಾ ಗೇಟ್, ಮುಂಡ್ಕಾ ಸೇರಿದಂತೆ ಹಲವಾರು ವಾಯು ನಿಗಾ ಕೇಂದ್ರಗಳು ಬೆಳಗ್ಗೆ 6 ಗಂಟೆಗೆ 400 ಕ್ಕಿಂತ ಹೆಚ್ಚಿನ ಎಕ್ಯೂಐ ದಾಖಲಿಸಿವೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು