ಮುಂಬೈ: ತನ್ನನ್ನು ತಂಪಾಗಿರಿಸಲು ತನ್ನ ತಲೆಯ ಮೇಲೆ ಸೌರಶಕ್ತಿ ಚಾಲಿತ ಫ್ಯಾನ್ ಅನ್ನು ಧರಿಸಿರುವ ವೃದ್ಧನ ವಿಡಿಯೋವನ್ನು ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಹಂಚಿಕೊಂಡಿದ್ದಾರೆ.
ಅಮಿತಾಭ್ ಅವರು ಟ್ವಿಟರ್ ಹಂಚಿಕೊಂಡಿರುವ ವಿಡಿಯೋದಲ್ಲಿ ಹೆಲ್ಮೆಟ್ ವೃದ್ಧರೊಬ್ಬರು ಧರಿಸಿದ್ದು, ಅದಕ್ಕೆ ಫ್ಯಾನ್ ಜೋಡಿಸಲಾಗಿದೆ. ಅಲ್ಲದೇ ಅದರ ಹಿಂಭಾಗದಲ್ಲಿ ಸೌರ ಫಲಕವನ್ನು ಅಳವಡಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅಮಿತಾಭ್ “ಭಾರತ ಆವಿಷ್ಕಾರದ ತಾಯಿ. ಭಾರತ್ ಮಾತಾ ಕಿ ಜೈ.”
ಅಮಿತಾಭ್ ತಮ್ಮ ಮುಂದಿನ ಚಿತ್ರ ಸೆಕ್ಷನ್ 84 ರಲ್ಲಿ ನಟಿಸಲಿದ್ದು, ಇದರಲ್ಲಿ ಡಯಾನಾ ಪೆಂಟಿ ನಟಿಸಲಿದ್ದಾರೆ. ಅಲ್ಲದೇ ಪ್ರಭಾಸ್, ಮತ್ತು ದೀಪಿಕಾ ಪಡುಕೋಣೆ ತಾರಾಗಣವಿದೆ.