News Karnataka Kannada
Monday, April 29 2024
ಮನರಂಜನೆ

‘ಜವಾನ್‌’ ಚಿತ್ರದ ವಿಡಿಯೋ ಸೋರಿಕೆ: ಆರೋಪಿಗಳ ವಿರುದ್ಧ ಎಫ್​ಐಆರ್

'Jawan' video leak: FIR lodged against accused
Photo Credit : IANS

ಮುಂಬೈ: ಶಾರುಖ್‌ ಖಾನ್‌ ಅಭಿನಯದ ಬಹುನಿರೀಕ್ಷಿತ ಚಿತ್ರ ‘ಜವಾನ್‌’ ಬಿಡುಗಡೆಗೆ ಸಿದ್ಧವಿದೆ. ಆದರೆ ಇದೀಗ ಚಿತ್ರದ ಕೆಲವೊಂದು ತುಣುಕುಗಳು ಟ್ವಿಟರ್‌ನಲ್ಲಿ ಸೋರಿಕೆಯಾಗಿದ್ದು, ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗೌರಿ ಖಾನ್‌ ನಿರ್ಮಾಣ ಸಂಸ್ಥೆ ರೆಡ್‌ ಚಿಲ್ಲಿಸ್‌ ಎಂಟರ್‌ಟೈನ್‌ಮೆಂಟ್‌ ಈ ಪ್ರಕರಣ ವಿರುದ್ಧ ದೆಹಲಿ ಹೈಕೋರ್ಟ್‌ನಲ್ಲಿ ದೂರು ದಾಖಲಿಸಿತ್ತು. ಸೋರಿಕೆಯಾದ ವಿಡಿಯೋವನ್ನು ತೆಗೆದು ಹಾಕಲು ಟ್ವಿಟರ್‌ಗೆ ಕೋರ್ಟ್‌ ತಿಳಿಸಿದೆ.

‘ಜವಾನ್’ ಚಿತ್ರ ಇದೇ ಸೆಪ್ಟೆಂಬರ್‌ 7ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.

ನ್ಯಾಯಾಲಯದ ಆದೇಶದ ಬಳಿಕ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸಿನಿಮಾ ಚಿತ್ರೀಕರಣದ ವೇಳೆ ಸೆಟ್‌ಗಳಲ್ಲಿ ಮೊಬೈಲ್ ಬಳಸುವಂತಿರಲಿಲ್ಲ ಆದಾಗ್ಯೂ ವಿಡಿಯೋ ಸೋರಿಕೆ ಆಗಿವೆ ಎಂದು ಚಿತ್ರತಂಡ ಹೇಳಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು