News Karnataka Kannada
Saturday, May 04 2024
ಮನರಂಜನೆ

ʼಸಿಂಗಂ ಎಗೇನ್‌ʼ ಸಿನಿಮಾದಲ್ಲಿನ ಅರ್ಜುನ್ ಪಾತ್ರದ ಫಸ್ಟ್‌ ಲುಕ್‌ ರಿಲೀಸ್‌

Arjun Kapoor
Photo Credit : News Kannada

ಮುಂಬೈ: ರೋಹಿತ್‌ ಶೆಟ್ಟಿ ನಿರ್ದೇಶನದ ಬಾಲಿವುಡ್‌ ನ ಬಹು ನಿರೀಕ್ಷಿತ ಮಲ್ಟಿಸ್ಟಾರ್ಸ್‌ ಸಿನಿಮಾಗಳಲ್ಲಿ ಒಂದಾಗಿರುವ ʼಸಿಂಗಂ ಎಗೇನ್‌ʼ ಸಿನಿಮಾದ ಮತ್ತೊಂದು ಪಾತ್ರದ ಫಸ್ಟ್‌ ಲುಕ್‌ ರಿಲೀಸ್‌ ಆಗಿದೆ. ʼಸಿಂಗಂ ಎಗೇನ್‌ʼ ರೋಹಿತ್ ಶೆಟ್ಟಿ ಅವರ ಕಾಪ್‌ ಯೂನಿವರ್ಸ್‌ ಸಿನಿಮ.  ಅವರ ಸಿಂಗಂ ಸರಣಿಯ ಸಿನಿಮಾಗಳು ಬಾಲಿವುಡ್‌ ಬಾಕ್ಸ್‌ ಆಫೀಸ್‌ ನಲ್ಲಿ ಸದ್ದು ಮಾಡಿವೆ. ʼಸಿಂಗಂ ಎಗೇನ್‌ʼ ನಲ್ಲಿ ದೊಡ್ಡ ಕಲಾವಿದರ ದಂಡೇ ಇರಲಿದೆ. ಈಗಾಗಲೇ ಸಿನಿಮಾ ಪ್ರಮುಖ ಪಾತ್ರಗಳ ಫಸ್ಟ್‌ ಲುಕ್‌ ನ್ನು ರಿವೀಲ್‌ ಮಾಡಲಾಗಿದೆ. ಇದೇ ವರ್ಷದ ಆಗಸ್ಟ್‌ 15 ರಂದು ಸಿನಿಮಾ ರಿಲೀಸ್‌ ಆಗಲಿದೆ.

ಲೇಡಿ ಸಿಂಗಂ ಅವತಾರದಲ್ಲಿ ದೀಪಿಕಾ ಪಡುಕೋಣೆ, ಬಾಜಿರಾವ್‌ ಸಿಂಗಂ ಆಗಿ ಅಜಯ್‌ ದೇವಗನ್‌, ಸಂಗಂ ಭಲೇರಾವ್‌ ಆಗಿ ರಣ್ವೀರ್ ಸಿಂಗ್ ‌, ಎಸಿಪಿ ಸತ್ಯ ಆಗಿ ಟೈಗರ್‌ ಶ್ರಾಫ್‌, ಕರೀನಾ ಕಪೂರ್‌ ಹಾಗೂ ಇತರೆ ಪ್ರಮುಖರು ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇದೀಗ ಸಿನಿಮಾದಲ್ಲಿ ವಿಲನ್‌ ರೋಲ್‌ ನಲ್ಲಿ ಕಾಣಿಸಿಕೊಳ್ಳಲಿರುವ ಪಾತ್ರದ ಫಸ್ಟ್‌ ಲುಕ್‌ ರಿಲೀಸ್‌ ಮಾಡಲಾಗಿದೆ. ಅರ್ಜುನ್‌ ಕಪೂರ್‌ ನೆಗೆಟಿವ್‌ ರೋಲ್‌ ನಲ್ಲಿ ʼಸಿಂಗಂ ಎಗೇನ್‌ʼ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ರಕ್ತಸಿಕ್ತ ಅವತಾರದಲ್ಲಿ ಅರ್ಜುನ್‌ ಕಾಣಿಸಿಕೊಂಡಿದ್ದಾರೆ. ಅವರ ಮುಂದೆ ರಣ್ವೀರ್‌ ಸಿಂಗ್‌ ನಿಂತಿದ್ದಾರೆ. ʼಮನುಷ್ಯ ತಪ್ಪು ಮಾಡುತ್ತಾನೆ. ಅವನಿಗೆ ಅದರ ಶಿಕ್ಷೆಯೂ ಸಿಗುತ್ತದೆ. ಆದರೆ ಈಗ ಬರುವವನು ಸೈತಾನ್”‌ ಎಂದು ರೋಹಿತ್‌ ಶೆಟ್ಟಿ ಅವರು ಫಸ್ಟ್‌ ಲುಕ್‌ ಪೋಸ್ಟರ್‌ ನ್ನು ರಿಲೀಸ್ ಮಾಡಿದ್ದಾರೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು