ದಕ್ಷಿಣದಿಂದ ಉತ್ತರದವರೆಗೆ ಚಿತ್ರರಂಗವನ್ನು ಆಳುತ್ತಿರುವ ಕೆಲವೇ ಕೆಲವು ನಾಯಕಿಯರಲ್ಲಿ ದೀಪಿಕಾ ಪಡುಕೋಣೆ ಒಬ್ಬರು. ಸ್ವಭಾವತಃ ಕನ್ನಡಿಗರಾದ ಈ ನಟಿ ಬಾಲಿವುಡ್ನಲ್ಲಿ ಮುಂಚೂಣಿ ನಟಿಯಾಗಿ ವಿಶೇಷ ಮನ್ನಣೆ ಗಳಿಸಿದ್ದಾರೆ.
ದೀಪಿಕಾ ಪಡುಕೋಣೆ ಅವರು ಹಲವು ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ. ಇಷ್ಟು ದಿನ ಬಾಲಿವುಡ್ನಲ್ಲಿ ಬ್ಯುಸಿ ಆಗಿದ್ದ ಅವರು, ‘ಪ್ರಾಜೆಕ್ಟ್ ಕೆ’ ಚಿತ್ರದ ಮೂಲಕ ದಕ್ಷಿಣ ಭಾರತಕ್ಕೆ ಮರಳುತ್ತಿದ್ದಾರೆ. ಅವರ ಲುಕ್ ಹೇಗಿರಲಿದೆ ಎಂಬುದನ್ನು ರಿವೀಲ್ ಮಾಡಲಾಗಿದೆ. ತಂಡ ಹೊಸ ಪೋಸ್ಟರ್ನ ರಿವೀಲ್ ಮಾಡಿದೆ.
ಪ್ರಭಾಸ್ ಹಾಗೂ ದೀಪಿಕಾ ಪಡುಕೋಣೆ ಇದೇ ಮೊದಲ ಬಾರಿಗೆ ಒಟ್ಟಾಗಿ ನಟಿಸಿದ್ದಾರೆ. ‘ಪ್ರಾಜೆಕ್ಟ್ ಕೆ’ ಸಿನಿಮಾ ಬಗ್ಗೆ ನಿರೀಕ್ಷೆ ಮೂಡಲು ಇದು ಕೂಡ ಕಾರಣ. ‘ಪ್ರಾಜೆಕ್ಟ್ ಕೆ’ ಎಂದರೇನು ಎಂದು ತಿಳಿದುಕೊಳ್ಳುವ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ. ಇದಕ್ಕೆ ಜುಲೈ 21ರಂದು ಉತ್ತರ ಸಿಗಲಿದೆ.
‘ಪ್ರಾಜೆಕ್ಟ್ ಕೆ’ ಸಿನಿಮಾ ಕೂಡ ದೊಡ್ಡ ಬಜೆಟ್ನಲ್ಲಿ ಸಿದ್ಧವಾಗುತ್ತಿದೆ. ಈ ಚಿತ್ರಕ್ಕೆ ನಾಗ್ ಅಶ್ವಿನ್ ನಿರ್ದೇಶನ ಮಾಡಿದ್ದಾರೆ. ದೀಪಿಕಾ, ಪ್ರಭಾಸ್ ಜೊತೆ ಅಮಿತಾಭ್ ಬಚ್ಚನ್ ಸೇರಿ ಅನೇಕರ ಪ್ರಮುಖ ಕಲಾವಿದರು ನಟಿಸಿದ್ದಾರೆ. ವೈಜಯಂತಿ ಮೂವಿಸ್ ಈ ಚಿತ್ರಕ್ಕೆ ಬಂಡವಾಳ ಹೂಡಿದೆ.
A hope comes to light, for a better tomorrow.
This is @DeepikaPadukone from #ProjectK.First Glimpse on July 20 (USA) & July 21 (INDIA).
To know #WhatisProjectK stay tuned and subscribe: https://t.co/AEDNZ3ni5Q#Prabhas @SrBachchan @ikamalhaasan @nagashwin7 @VyjayanthiFilms pic.twitter.com/XG4qUByEHv
— Vyjayanthi Movies (@VyjayanthiFilms) July 17, 2023