News Karnataka Kannada
Thursday, May 09 2024
ಮನರಂಜನೆ

‘ಸಂಘಿ’ ಶಬ್ದ ಕೆಟ್ಟದ್ದು ಎಂದು ಐಶ್ವರ್ಯ ಹೇಳಿಲ್ಲ: ಮಗಳ ಪರ ರಜನಿಕಾಂತ್ ಬ್ಯಾಟಿಂಗ್

"ನನ್ನ ಮಗಳು ಸಂಘಿ ಎನ್ನುವುದು ಕೆಟ್ಟ ಶಬ್ದ ಎಂದು ಎಂದಿಗೂ ಹೇಳಿಲ್ಲ. ನನ್ನ ತಂದೆಯನ್ನು ಏಕೆ ಬ್ರ್ಯಾಂಡ್ ಮಾಡುತ್ತೀರಿ ಎಂದಷ್ಟೇ ಕೇಳಿದ್ದಾರೆ" ಎಂದು ಸೂಪರ್​ ಸ್ಟಾರ್ ರಜನಿಕಾಂತ್ ಸ್ಪಷ್ಟನೆ ನೀಡಿದ್ದಾರೆ. ರಜನಿಕಾಂತ್ ಅವರು ತಮ್ಮ ಮುಂಬರುವ ಚಿತ್ರ ʻಲಾಲ್ ಸಲಾಮ್‌ʼ ಸಿನಿಮಾ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಮಗಳು ಐಶ್ವರ್ಯಾ ರಜನಿಕಾಂತ್ ಅವರ ಇತ್ತೀಚಿನ ಹೇಳಿಕೆಯ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.‌
Photo Credit : News Kannada

ಚೆನ್ನೈ: “ನನ್ನ ಮಗಳು ಸಂಘಿ ಎನ್ನುವುದು ಕೆಟ್ಟ ಶಬ್ದ ಎಂದು ಎಂದಿಗೂ ಹೇಳಿಲ್ಲ. ನನ್ನ ತಂದೆಯನ್ನು ಏಕೆ ಬ್ರ್ಯಾಂಡ್ ಮಾಡುತ್ತೀರಿ ಎಂದಷ್ಟೇ ಕೇಳಿದ್ದಾರೆ” ಎಂದು ಸೂಪರ್​ ಸ್ಟಾರ್ ರಜನಿಕಾಂತ್ ಸ್ಪಷ್ಟನೆ ನೀಡಿದ್ದಾರೆ. ರಜನಿಕಾಂತ್ ಅವರು ತಮ್ಮ ಮುಂಬರುವ ಚಿತ್ರ ʻಲಾಲ್ ಸಲಾಮ್‌ʼ ಸಿನಿಮಾ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಮಗಳು ಐಶ್ವರ್ಯಾ ರಜನಿಕಾಂತ್ ಅವರ ಇತ್ತೀಚಿನ ಹೇಳಿಕೆಯ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.‌

ಇಂದು, ಚೆನ್ನೈ ವಿಮಾನ ನಿಲ್ದಾಣದ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ರಜನಿಕಾಂತ್ ಅವರು, ಆಡಿಯೋ ಲಾಂಚ್‌ ವೇಳೆ ಮಾತನಾಡಿದ ಐಶ್ವರ್ಯಾ ಅವರ ಹೇಳಿಕೆಯನ್ನು ರಜಿನಿಕಾಂತ್‌ ಸಮರ್ಥಿಸಿಕೊಂಡಿದ್ದಾರೆ. ‘ನನ್ನ ಮಗಳು ʻಸಂಘಿʼ ಎನ್ನುವುದು ಕೆಟ್ಟ ಶಬ್ದ ಎಂದು ಎಂದಿಗೂ ಹೇಳಿಲ್ಲ. ನನ್ನ ತಂದೆಯನ್ನು ಏಕೆ ಬ್ರ್ಯಾಂಡ್ ಮಾಡುತ್ತೀರಿ ಎಂದಷ್ಟೇ ಕೇಳಿದ್ದಾರೆ ಎಂದಿದ್ದಾರೆ.

ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಐಶ್ವರ್ಯ, ನಾನು ಸಾಮಾನ್ಯವಾಗಿ ಸೋಷಿಯಲ್ ಮೀಡಿಯಾದಿಂದ ದೂರ ಇರುತ್ತೇನೆ. ಆದರೆ ನನ್ನ ತಂಡ ಹೊರಗಡೆ ಏನಾಗುತ್ತಿದೆ ಎಂದು ಅಪ್‌ಡೇಟ್‌ ಮಾಡುತ್ತಲೇ ಇರುತ್ತಾರೆ. ಕೆಲವು ಪೋಸ್ಟ್‌ಗಳನ್ನು ತೋರಿಸುತ್ತಲೇ ಇರುತ್ತಾರೆ. ಅವುಗಳನ್ನು ನೋಡಿ ನನಗೆ ಕೋಪ ಬರುತ್ತಿತ್ತು. ನಾವೂ ಮನುಷ್ಯರು. ಇತ್ತೀಚಿನ ದಿನಗಳಲ್ಲಿ, ಅನೇಕ ಜನರು ನನ್ನ ತಂದೆ ʻಸಂಘಿʼ ಎಂದು ಕರೆದಿದ್ದಾರೆ.

ಇನ್ನು ಅದರ ಅರ್ಥವೇನೆಂದು ನನಗೆ ತಿಳಿದಿರಲಿಲ್ಲ, ನಂತರ ನಾನು ʻಸಂಘಿʼ ಪದದ ಅರ್ಥ ತಿಳಿದಾಗ, ನಿರ್ದಿಷ್ಟ ರಾಜಕೀಯ ಪಕ್ಷವನ್ನು ಬೆಂಬಲಿಸುವ ಜನರನ್ನು ಸಂಘಿ ಎಂದು ಕರೆಯುತ್ತಾರೆ ಎಂದು ಹೇಳಿದರು. ಅಷ್ಟೇ ಅಲ್ಲದೇ ʻಸಂಘಿʼ ಆಗಿದ್ದರೆ ಲಾಲ್ ಸಲಾಂ ಅಂಥ ಸಿನಿಮಾ ಮಾಡುತ್ತಿರಲಿಲ್ಲ’ ಎಂದಿದ್ದರು. ಮಗಳ ಹೇಳಿಕೆ ಕೇಳಿ ರಜನಿಕಾಂತ್ ಅವರು ಕಣ್ಣೀರು ಹಾಕಿದ್ದರು. ಈ ವಿಡಿಯೋ ವೈರಲ್ ಆಗಿತ್ತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು