News Karnataka Kannada
Saturday, April 27 2024
ಮಧ್ಯ ಪ್ರದೇಶ

103ನೇ ವಯಸ್ಸಿನಲ್ಲಿ ಮದುವೆಯಾದ ಸ್ವಾತಂತ್ರ್ಯ ಹೋರಾಟಗಾರ

ಮಧ್ಯಪ್ರದೇಶದಲ್ಲಿ  ಸ್ವಾತಂತ್ರ್ಯ ಹೋರಾಟಗಾರರೊಬ್ಬರು  ತಮ್ಮ 103ನೇ ವಯಸ್ಸಿನಲ್ಲಿ ಮದುವೆಯಾಗುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ. 103 ವರ್ಷದ ಹಬೀಬ್‌ ನಜರ್‌  ಅವರು 49 ವರ್ಷದ ಫಿರೋಜ್‌ ಜಹಾನ್‌  ಎಂಬುವರನ್ನು ವರಿಸಿದ್ದಾರೆ.
Photo Credit : News Kannada

ಭೋಪಾಲ್‌: ಮಧ್ಯಪ್ರದೇಶದಲ್ಲಿ  ಸ್ವಾತಂತ್ರ್ಯ ಹೋರಾಟಗಾರರೊಬ್ಬರು  ತಮ್ಮ 103ನೇ ವಯಸ್ಸಿನಲ್ಲಿ ಮದುವೆಯಾಗುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ. 103 ವರ್ಷದ ಹಬೀಬ್‌ ನಜರ್‌  ಅವರು 49 ವರ್ಷದ ಫಿರೋಜ್‌ ಜಹಾನ್‌  ಎಂಬುವರನ್ನು ವರಿಸಿದ್ದಾರೆ.

ಇವರ ಮದುವೆಯ ಫೋಟೊಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ. ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದ ಹಬೀಬ್‌ ನಜರ್‌ ಅವರು ಸುತ್ತಮುತ್ತಲಿನ ಊರುಗಳಲ್ಲಿ ‘ಮಂಝಾಲೆ ಭಾಯಿ’ (ಸಹೋದರ) ಎಂದೇ ಖ್ಯಾತರಾಗಿದ್ದಾರೆ.

ಭೋಪಾಲ್‌ನ ಇತ್ವಾರ ನಿವಾಸಿಯಾದ ಹಬೀಬ್‌ ನಜರ್‌ ಅವರು ಫಿರೋಜ್‌ ಜಹಾನ್‌ ಅವರನ್ನು 2023ರಲ್ಲಿಯೇ ಮದುವೆಯಾಗಿದ್ದು, ಇವರ ಮದುವೆಯ ಫೋಟೊ ಹಾಗೂ ವಿಡಿಯೊಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಹಬೀಬ್‌ ನಜರ್‌ ಅವರು ಆಟೋದಲ್ಲಿ ಫಿರೋಜ್‌ ಜಹಾನ್‌ ಅವರನ್ನು ಕರೆದುಕೊಂಡು ಹೋಗುತ್ತಿದ್ದು, ಇದೇ ವೇಳೆ ಜನ ಅವರಿಗೆ ಶುಭಾಶಯ ತಿಳಿಸಿದ್ದಾರೆ. ಆಗ ಹಬೀಬ್‌ ನಜರ್‌ ಅವರು ನಸುನಕ್ಕು ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.

“ನನಗೆ ಈಗ 103 ವರ್ಷ ಹಾಗೂ ನನ್ನ ಹೆಂಡತಿಗೆ 50 ವರ್ಷ ವಯಸ್ಸು. ನಾನು ಕಳೆದ 2023ರಲ್ಲಿ ಮದುವೆಯಾಗಿದ್ದೇನೆ. 50 ವರ್ಷಗಳ ಹಿಂದೆ ನಾನು ಮೊದಲ ಬಾರಿಗೆ ಮದುವೆಯಾಗಿದ್ದೆ. ನನ್ನ ಮೊದಲ ಪತ್ನಿ ತೀರಿಕೊಂಡ ಬಳಿಕ ಲಖನೌನಲ್ಲಿ ಎರಡನೇ ಮದುವೆಯಾದೆ. ಒಂದೂವರೆ ವರ್ಷದ ಹಿಂದೆ ನನ್ನ ಎರಡನೇ ಪತ್ನಿಯೂ ತೀರಿಕೊಂಡಳು. ಇದರಿಂದಾಗಿ ನಾನು ಏಕಾಂತದಿಂದ ಕುಗ್ಗಿಹೋಗಿದ್ದೆ. ಈಗ ಮೂರನೇ ಮದುವೆಯಾಗಿದ್ದೇನೆ” ಎಂದು ಹಬೀಬ್‌ ನಜರ್‌ ಅವರು ಹೇಳಿದ್ದಾರೆ.

ಫಿರೋಜ್‌ ಜಹಾನ್‌ ಅವರ ಪತಿ ತೀರಿಕೊಂಡ ಕಾರಣ ಈಗ ಎರಡನೇ ಮದುವೆಯಾಗಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು