ಬಾಲಿವುಡ್ ನ ಖ್ಯಾತ ನಟ, ಗಾಯಕ ಹಿಮೇಶ್ ರೇಶಮಿಯಾ ಹಾಗೂ ಪತ್ನಿ ಕೋಮಲ್ ತಮ್ಮ 22 ವರ್ಷದ ದಾಂಪತ್ಯ ಜೀವನಕ್ಕೆ ಗುಡ್ ಬೈ ಹೇಳಲು ನಿರ್ಧರಿಸಿದ್ದಾರೆ.
ದಾಂಪತ್ಯ ಸಂಬಂಧದಲ್ಲಿ ಪರಸ್ಪರ ಗೌರವ ಮುಖ್ಯ. ಆ ಸಂಬಂಧಕ್ಕೆ ಗೌರವವನ್ನು ನೀಡಿ ನಾವಿಬ್ಬರೂ ವಿಚ್ಛೇದನಕ್ಕೆ ಬಾಂದ್ರಾ ಫ್ಯಾಮಿಲಿ ಕೋರ್ಟ್ ನಲ್ಲಿ ಡೈವೋರ್ಸ್ ಗಾಗಿ ಅರ್ಜಿ ಸಲ್ಲಿಸಿದ್ದೇವೆ. ನಮ್ಮ ನಿರ್ಧಾರವನ್ನು ಕುಟುಂಬದ ಸದಸ್ಯರೂ ಒಪ್ಪಿಕೊಳ್ಳಬೇಕು. ಈ ನಿರ್ಧಾರದಲ್ಲಿ ಯಾವುದೇ ಸಮಸ್ಯೆ ಇಲ್ಲ. ಡೈವೋರ್ಸ್ ಆದರೂ ಕೋಮಲ್ ನನ್ನ ಫ್ಯಾಮಿಲಿಯ ಭಾಗವಾಗಿರುತ್ತಾಳೆ. ಹಾಗೆಯೇ ನಾನು ಕೂಡಾ ಕೋಮಲ್ ಫ್ಯಾಮಿಲಿಯ ಭಾಗವಾಗಿರುತ್ತೇನೆ ಎಂದು ಹಿಮೇಶ್ ಹೇಳಿಕೊಂಡಿದ್ದಾರೆ.
ಹಿಮೇಶ್ಗೆ ಶಿವಂ ಎನ್ನುವ ಓರ್ವ ಮಗನಿದ್ದಾನೆ. ಹಲವು ತಿಂಗಳಿನಿಂದ ಹಿಮೇಶ್-ಕೋಮಲ್ ಜೊತೆಯಾಗಿ ವಾಸಿಸುತ್ತಿಲ್ಲ. ಈ ನಿಟ್ಟಿನಲ್ಲಿ ಇವರಿಬ್ಬರು ವಿಚ್ಛೇದನ ನೀಡಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.