News Karnataka Kannada
Friday, May 03 2024
ಮನರಂಜನೆ

ಬಹುನಿರೀಕ್ಷಿತ “ಉರ್ವಿ” ಚಿತ್ರದ ಟೀಸರ್ ರಿಲೀಸ್

Photo Credit :

ಬಹುನಿರೀಕ್ಷಿತ

ಹೆಣ್ಣುಮಕ್ಕಳೇ ಪ್ರಧಾನ ಪಾತ್ರಗಳಾಗಿರುವ ಅದೆಷ್ಟೋ ಚಿತ್ರಗಳು ಕನ್ನಡ ಸೇರಿದಂತೆ ಇತರ ಭಾಷೆಗಳಲ್ಲೂ ತೆರೆ ಕಂಡಿದ್ದು, ಅದರಲ್ಲಿ ಕೆಲವು ಚಿತ್ರಗಳು ಯಶಸ್ವಿಯಾದರೆ, ಇನ್ನೂ ಕೆಲವು ಅಷ್ಟಕಷ್ಟೇ ಅನ್ನಬಹುದು. ಆದರೆ ಈ ಬಾರಿ ಸ್ಯಾಂಡಲ್ ವುಡ್ ನಲ್ಲಿ ಹೆಣ್ಣುಮಕ್ಕಳೇ ಪ್ರಧಾನವಾಗಿರುವ “ಉರ್ವಿ” ಎಂಬ ಚಲನಚಿತ್ರ ಈಗ ಎಲ್ಲಾ ಕನ್ನಡ ಚಿತ್ರ ರಸಿಕರ ಕೇಂದ್ರಬಿಂದುವಾಗಿದೆ. ಕಾರಣ ಇತ್ತೀಚಿಗಷ್ಟೇ ಬಿಡುಗಡೆಯಾಗಿರುವ ಚಿತ್ರದ ಟೀಸರ್.

ಈ ಚಿತ್ರದ ಟೀಸರ್ ಎಲ್ಲರಿಂದಲೂ ಪ್ರಶಂಸೆಗೆ ಪಾತ್ರವಾಗಿದ್ದು, ಚಿತ್ರದ ಬಗ್ಗೆ ಸಾಕಷ್ಟು ಭರವಸೆ ಮೂಡುವಂತೆ ಮಾಡಿದೆ. ಶಕ್ತಿ, ಯುಕ್ತಿ ಮತ್ತು ಭಕ್ತಿ ಈ ಮೂರು ಜೊತೆಯಾದಾಗ ಉಗಮವಾಗುವುದೇ ‘ಉರ್ವಿ’ ಎನ್ನುವುದು ಚಿತ್ರತಂಡದ ಮಾತು. ಉರ್ವಿ ತನ್ನ ವಿಭಿನ್ನ ಗೆಟಪ್ ಮತ್ತು ಪೋಸ್ಟರ್ ಮೂಲಕ ಗಾಂಧಿನಗರದಲ್ಲಿ ಈಗಾಗಲೇ ಸದ್ದು ಮಾಡುತ್ತಿದ್ದು, ಚಿತ್ರದಲ್ಲಿ ಸ್ಟಾರ್ ನಟಿಮಣಿಯರಾದ ಶ್ರುತಿ ಹರಿಹರನ್, ಶ್ರದ್ಧಾ ಶ್ರೀನಾಥ್, ಶ್ವೇತಾ ಪಂಡಿತ್, ಭವಾನಿ ಪ್ರಕಾಶ್ ಮತ್ತು ಜಾಹ್ನವಿ ಬಣ್ಣ ಹಚ್ಚಿದ್ದಾರೆ. ಜೊತೆಗೆ ಅಚ್ಯುತ್ ಕುಮಾರ್ ಅವರು ಪ್ರಮೂಖ ಪಾತ್ರವೊಂದರಲ್ಲಿ ಅಭಿನಯಿಸಿದ್ದಾರೆ.

ಅನೇಕ ಕಷ್ಟಗಳನ್ನು ಅನುಭವಿಸಿರುವ ಮೂರು ಜೀವಗಳು ಜೊತೆ ಸೇರಿ ದುಷ್ಟ ಸಮಾಜದ ದಮನಕ್ಕೆ ಹೋರಾಡೋ ಕಥೆಯೇ ‘ಉರ್ವಿ’. ಬಿಆರ್ ಪಿ ಭಟ್ ಅವರ ನಿರ್ಮಾಣದಲ್ಲಿ ತಯಾರಾಗುತ್ತಿರುವ ಉರ್ವಿಗೆ ಆನಂದ್ ಸುಂದರೇಶ ಛಾಯಾಗ್ರಹಣ, ಮನೋಜ್ ಜಾರ್ಜ್ ಸಂಗೀತ, ಡಿ.ಸತ್ಯಪ್ರಕಾಶ್ ಸಂಭಾಷಣೆ, ಸೂರ್ಯ ತೇಜ ಸಂಕಲನ ಮತ್ತು ಡಾ.ಕೆ.ರವಿವರ್ಮ ಅವರ ಸಾಹಸವಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು