News Karnataka Kannada
Thursday, May 09 2024
ಮನರಂಜನೆ

ನೂತನ ಅವತಾರದಲ್ಲಿ ‘ಒಂದು ನಾಣ್ಯ, ಎರಡು ಪ್ರೀತಿ’ ತೆರೆಗೆ

Photo Credit :

ನೂತನ ಅವತಾರದಲ್ಲಿ 'ಒಂದು ನಾಣ್ಯ, ಎರಡು ಪ್ರೀತಿ' ತೆರೆಗೆ

ಒಂದು ನಾಣ್ಯ, ಎರಡು ಪ್ರೀತಿ ಎನ್ನುವುದೊಂದು ಚಿತ್ರ ಕನ್ನಡದಲ್ಲಿ ಶುರುವಾಗಿದೆ. ಆ ಚಿತ್ರವೀಗ ‘ಟಾಸ್’ ಎನ್ನುವ ನೂತನ ಅವತಾರದಲ್ಲಿ ತೆರೆಗೆ ಅಪ್ಪಳಿಸೋಕೆ ರೆಡಿಯಾಗಿದೆ.

ರೊಮ್ಯಾಂಟಿಕ್ ಕಾಮಿಡಿ ಚಿತ್ರವಾಗಿರುವ ‘ಟಾಸ್’ ಮೂಲಕ ಅನೇಕ ಹೊಸ ಪ್ರತಿಭೆಗಳ ಪರಿಚಯವಾಗಲಿದೆ. ಅಪ್ಪುಚಿತ್ರವನ್ನು ನೋಡಿ ಮೆಚ್ಚಿಕೊಮಡಿರುವುದು ಚಿತ್ರತಂಡಕ್ಕೆ ಮತ್ತಷ್ಟು ಬಲ ಮತ್ತು ಆತ್ಮವಿಶ್ವಾಸ ತಂದಂತಾಗಿದೆ.

ಒಂದು ನಾಣ್ಯವನ್ನು ಮೇಲೆ ಚಿಮ್ಮಿಸಿದಾಗ ಅದು ಕೆಳಗೆ ಬರುವುದರೊಳಗೆ ಎರಡು ಕತೆಗಳನ್ನು ಈ ಚಿತ್ರದಲ್ಲಿ ಹೇಳಲಾಗಿದ್ಯಂತೆ. ಹಾಗಾಗಿ ಇದು ಎರಡು ಪ್ರೇಮಕತೆಗಳ ಸಂಗಮದಂತಹ ಚಿತ್ರ ಎನ್ನಲಾಗ್ತಿದೆ. ಟಾಸ್ ಎನ್ನುವ ಟೈಟಲ್ಗೆ ‘ಒಂದು ನಾಣ್ಯ, ಎರಡು ಪ್ರೀತಿ’ ಎನ್ನುವ ಟ್ಯಾಗ್ಲೈನ್  ಸೇರಿಸಲಾಗಿದೆ.

ದಯಾಳ್ ಪದ್ಮನಾಭನ್ ಈ ಚಿತ್ರದ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಬಹಳ ಸಮಯದ ನಂತರ ದಯಾಳ್ ನಿರ್ದೇಶಿಸಿದ ಚಿತ್ರವಿದು. ಸಂಪೂರ್ಣವಾಗಿ ರೆಡಿಯಾಗಿರುವ ಈ ಚಿತ್ರವನ್ನು ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ನೋಡಿದ್ದಾರೆ. ನೋಡೋದು ಮಾತ್ರವಲ್ಲ, ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು