News Karnataka Kannada
Sunday, May 19 2024
ಮನರಂಜನೆ

ಇಂಡಿಯನ್​ ಐಡಲ್ ಸಿಂಗಿಂಗ್​ ರಿಯಾಲಿಟಿ ಶೋ: ಪವನ್​ದೀಪ್​ ರಾಜನ್‌ಗೆ ಕಿರೀಟ

Photo Credit :

ಮುಂಬೈ: ಇಂಡಿಯನ್​ ಐಡಲ್ ಸಿಂಗಿಂಗ್​ ರಿಯಾಲಿಟಿ ಶೋ 12ನೇ ಸೀಸನ್​ ಅಂತ್ಯವಾಗಿದೆ. ಈ ಸೀಸನ್​ನ ವಿನ್ನರ್​ ಆಗಿ ಪವನ್​ದೀಪ್​ ರಾಜನ್ ಹೊರಹೊಮ್ಮಿದ್ದಾರೆ.

ಬರೋಬ್ಬರಿ 9 ತಿಂಗಳ ಕಾಲ ಪ್ರಸಾರವಾದ ಈ ರಿಯಾಲಿಟಿ ಶೋಗೆ ಆ.15ರಂದು ಫಿನಾಲೆ ನಡೆಯಿತು. ಆರು ಗಾಯಕರು ಫಿನಾಲೆ ಪ್ರವೇಶಿಸಿದ್ದರು. ಅಂತಿಮವಾಗಿ ಉತ್ತರಾಖಂಡ್​ ಮೂಲದ ಪವನ್​ದೀಪ್​ ರಾಜನ್​ ಅವರು ಜಯಶಾಲಿ ಆದರು.

ಅರುಣಿತಾ ಕಂಜಿಲಾಲ್ ಹಾಗೂ ಸಾಯಿಲಿ ಕಾಂಬಳೆ ಅವರು ಅನುಕ್ರಮವಾಗಿ ಮೊದಲ ಮತ್ತು ಎರಡನೇ ರನ್ನರ್​ ಅಪ್​ ಸ್ಥಾನ ಪಡೆದುಕೊಂಡರು. ಫೈನಲ್‌ನಲ್ಲಿ ಕರ್ನಾಟಕದ ಮೂಡುಬಿದಿರೆಯ ನಿಹಾಲ್‌ ತಾವ್ರೋ ಕೂಡ ಸ್ಪರ್ಧಿಯಾಗಿದ್ದರು.

ಇಂಡಿಯನ್​ ಐಡಲ್​ 12ರ ವಿನ್ನರ್​ ಪಟ್ಟ ಪಡೆದ ಪವನ್​ದೀಪ್​ ಅವರಿಗೆ ಆಕರ್ಷಕ ಟ್ರೋಫಿ ಜೊತೆಗೆ ಬಹುಮಾನವಾಗಿ 12 ಲಕ್ಷ ರೂ. ಮತ್ತು ಒಂದು ಕಾರು ನೀಡಲಾಗಿದೆ.

ಮೊದಲ ಮತ್ತು ಎರಡನೇ ರನ್ನರ್​ ಅಪ್ ಆದ ಅರುಣಿತಾ ಕಂಜಿಲಾಲ್ ಹಾಗೂ ಸಾಯಿಲಿ ಕಾಂಬಳೆ ಅವರಿಗೆ 5 ಲಕ್ಷ ರೂ. ಬಹುಮಾನ ನೀಡಲಾಯಿತು. ಕಿಯಾರಾ ಅಡ್ವಾಣಿ, ಸಿದ್ಧಾರ್ಥ್​ ಮಲ್ಹೋತ್ರಾ ಮುಂತಾದವರು ಫಿನಾಲೆಗೆ ಅತಿಥಿಗಳಾಗಿ ಆಗಮಿಸಿದ್ದರು. ಹಿಮೇಶ್​ ರೇಷಮ್ಮಿಯಾ, ಸೋನು ಕಕ್ಕರ್​, ವಿಶಾಲ್ ದದ್ಲಾನಿ, ಅನು ಮಲಿಕ್​ ಜಡ್ಜ್​ ಆಗಿದ್ದರು. ಆದಿತ್ಯ ನಾರಾಯಣ್​, ಭಾರತಿ ಸಿಂಗ್​, ಹರ್ಷಾ ಲಿಂಬಾಚಿಯಾ ಅವರು ಫಿನಾಲೆ ಸಂಚಿಕೆಯ ನಿರೂಪಣೆ ಮಾಡಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 5 / 5. Vote count: 1

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

149

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು