ಮೂಡುಬಿದಿರೆ: ಹಿಂದಿಯ ಖ್ಯಾತ ಇಂಡಿಯನ್ ಐಡಲ್ ಶೋನ 12ನೇ ಸೀಸನ್ನ ಫೈನಾಲ್ ಹಂತಕ್ಕೆ ಮೂಡುಬಿದಿರೆಯ ಹುಡುಗ ನಿಹಾಲ್ ತಾವ್ರೋ ತಲುಪಿದ್ದಾರೆ.
ಫಿನಾಲೆಯಲ್ಲಿ ಐವರು ಸ್ಪರ್ಧಿಗಳಿದ್ದು, ವೋಟ್ ಮೂಲಕ ತನ್ನನ್ನು ಗೆಲ್ಲಿಸಿ ಎಂದು ನಿಹಾಲ್ ಸೋಶಿಯಲ್ ಮೀಡಿಯಾ ಪೋಸ್ಟ್ ಹಾಕಿದ್ದಾರೆ.
ನಿಹಾಲ್ ತಾವ್ರೊ ಹಾಡಿದ ಹಾಡುಗಳಿಗೆ ಅದ್ಭುತ ಪ್ರತಿಕ್ರಿಯೆ ಸಿಕ್ಕಿದೆ. ‘ಇಂಡಿಯನ್ ಐಡಲ್’ ಜಡ್ಜ್ ಆಗಿರುವ ನೇಹಾ ಕಕ್ಕಡ್, ವಿಶಾಲ್ ದದ್ಲಾನಿ, ಹಿಮೇಶ್ ರೇಶ್ಮಿಯಾ ಈಗಾಗಲೇ ನಿಹಾಲ್ ಗಾಯನಕ್ಕೆ ಎದ್ದು ನಿಂತು ಚಪ್ಪಾಳೆ ಹೊಡೆದಿದ್ದಾರೆ. ಸಂಗೀತ ಮಾಂತ್ರಿಕ ಎಆರ್ ರೆಹಮಾನ್ ಕೂಡ ನಿಹಾಲ್ ಗಾಯನ ಮೆಚ್ಚಿದ್ದಾರೆ.
ಕನ್ನಡದ ‘ಸರಿಗಮಪ’ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದರು. ಅದಲ್ಲದೆ ಕನ್ನಡದ ‘ಯಾರಿವಳು’, ‘ಜೊತೆ ಜೊತೆಯಲಿ’, ‘ಗಿಣಿರಾಮ’,’ನನ್ನರಸಿ ರಾಧೆ’ ಮುಂತಾದ ಧಾರಾವಾಹಿಗಳ ಶೀರ್ಷಿಕೆ ಗೀತೆ ಹಾಡಿದ್ದರು.