ಜೋಧ್ ಪುರ್: ರಸ್ತೆ ಅಪಘಾತದ ವಿಶ್ವದ ಖ್ಯಾತ ಕ್ವೀನ್ ಡ್ಯಾನ್ಸರ್ ಹರೀಶ್ ಸೇರಿ ಮೂವರು ಜನಪದ ಕಲಾವಿದರು ಸಾವನ್ನಪ್ಪಿದ ಘಟನೆ ರಾಜಸ್ಥಾನದಲ್ಲಿ ಭಾನುವಾರ ಬೆಳಿಗ್ಗೆ ನಡೆದಿದೆ.
ಈ ಅವಘಡ ರಾಜಸ್ಥಾನದ ಕಪಾರ್ದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಸ್ಪೆಷಲ್ ಯುಟಿಲಿಟಿ ವಾಹನ ನಿಯಂತ್ರಣ ತಪ್ಪಿ ಟ್ರಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಖ್ಯಾತ ಡ್ಯಾನ್ಸರ್ ಹರೀಶ್, ರವೀಂದ್ರ, ಭಿಖೆ ಖಾನ್ ಹಾಗೂ ಲತೀಫ್ ಖಾನ್ ಸಾವನ್ನಪ್ಪಿದ್ದಾರೆ.
ಇನ್ನೂ ಘಟನೆಯಲ್ಲಿ ಐವರು ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಹರೀಶ್ ಅವರು ತಮ್ಮ ಕಲಾವಿದರ ತಂಡದ ಜತೆ ಅಜ್ಮೇರ್ ಗೆ ಕಾರ್ಯಕ್ರಮ ನೀಡಲು ಪ್ರಯಾಣಿಸುತ್ತಿದ್ದ ವೇಳೆ ಅವಘಡ ಸಂಭವಿಸಿದೆ.