News Karnataka Kannada
Wednesday, May 08 2024
ಬಳ್ಳಾರಿ

ಮುಹೂರ್ತ ನೋಡಿ ಖಾತೆ ವಹಿಸಿಕೊಳ್ಳುವೆ: ಆನಂದ್ ಸಿಂಗ್‌

Anand Singh Minister
Photo Credit :

ವಿಜಯನಗರ: ಮುಹೂರ್ತ ನೋಡಿ ಖಾತೆ ಸ್ವೀಕರಿಸುತ್ತೇನೆ. ದೇವರ ಮುಹೂರ್ತ, ನನ್ನ ನಕ್ಷತ್ರ ನೋಡಿಕೊಂಡು ಖಾತೆ ವಹಿಸಿಕೊಳ್ಳುತ್ತೇನೆ ಎಂದು ಸಚಿವ ಆನಂದ್ ಸಿಂಗ್ ತಿಳಿಸಿದರು.

ರಾಜ್ಯದಲ್ಲಿ ದಿಟ್ಟ, ಸಮರ್ಥ ಅಧಿಕಾರಿಗಳಿದ್ದಾರೆ. ಅಲ್ಲಿಯವರೆಗೆ ಅವರು ಖಾತೆ ನೋಡುತ್ತಾರೆ. ನಾನು ಅಧಿಕಾರ ವಹಿಸಿಕೊಳ್ಳದಿದ್ದರೆ ಅಭಿವೃದ್ಧಿ ಕುಂಠಿತವಾಗುವುದಿಲ್ಲ. ಜನಪ್ರತಿನಿಧಿಗಳ ಮೇಲೆ ವ್ಯವಸ್ಥೆ ನಡೀತಾ ಇಲ್ಲ. ಶಾಸಕಾಂಗ, ಕಾರ್ಯಾಂಗ ಬಂಡಿ ಇದ್ದಂತೆ ಎಂದು ಹೇಳಿದರು.

‘ಸಚಿವ ಬಿ. ಶ್ರೀರಾಮುಲು ಅವರು ನನಗೆ ಫೋನ್‌ ಮಾಡಿದ್ದು ನಿಜ. ಆದರೆ, ಅವರ ಇಲಾಖೆ ಕುರಿತ ಸಭೆಗೆ ಆಹ್ವಾನಿಸಿದರೆ ಹೊರತು ಖಾತೆ ಬಗ್ಗೆ ಏನೂ ಮಾತನಾಡಿಲ್ಲ’ ಎಂದು ಸ್ಪಷ್ಟಪಡಿಸಿದರು.

ಆನಂದ್ ಸಿಂಗ್ ಅವರಿಗೆ ಪ್ರವಾಸೋದ್ಯಮ, ಪರಿಸರ ಮತ್ತು ಜೀವಿಶಾಸ್ತ್ರ ಖಾತೆ ಹಂಚಿಕೆ ಮಾಡಲಾಗಿದೆ. ಆದರೆ, ಇದುವರೆಗೆ ಅವರು ಖಾತೆ ವಹಿಸಿಕೊಂಡಿಲ್ಲ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
149

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು