Bengaluru 22°C
Ad

ಎಕ್ಸಿಕ್ಯೂಟಿವ್ ಟ್ರೈನಿ ಹುದ್ದೆಗಳ ನೇಮಕಾತಿ- ಆಸಕ್ತರು ಬೇಗ ಅಪ್ಲೈ ಮಾಡಿ

ನಾರ್ತ್ ಈಸ್ಟರ್ನ್ ಎಲೆಕ್ಟ್ರಿಕ್ ಪವರ್ ಕಾರ್ಪೊರೇಷನ್ ಲಿಮಿಟೆಡ್ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

ನಾರ್ತ್ ಈಸ್ಟರ್ನ್ ಎಲೆಕ್ಟ್ರಿಕ್ ಪವರ್ ಕಾರ್ಪೊರೇಷನ್ ಲಿಮಿಟೆಡ್ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

ಒಟ್ಟು 24 ಎಕ್ಸಿಕ್ಯೂಟಿವ್ ಟ್ರೈನಿ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಜೂನ್ 28, 2024 ಅಂದರೆ ಇವತ್ತೇ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತರು ಆನ್​​ಲೈನ್ ಮೂಲಕ ಅಪ್ಲೈ ಮಾಡಬೇಕು. ಕೇಂದ್ರ ಸರ್ಕಾರದ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು.

ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಹುದ್ದೆಯ ಮಾಹಿತಿ:
ಎಕ್ಸಿಕ್ಯೂಟಿವ್ ಟ್ರೈನಿ (ಎಲೆಕ್ಟ್ರಿಕಲ್/ ಮೆಕ್ಯಾನಿಕಲ್​)-16
ಎಕ್ಸಿಕ್ಯೂಟಿವ್ ಟ್ರೈನಿ (ಫೈನಾನ್ಸ್)-6
ಎಕ್ಸಿಕ್ಯೂಟಿವ್ ಟ್ರೈನಿ (ಹ್ಯೂಮನ್ ರಿಸೋರ್ಸಸ್)- 2

ವಿದ್ಯಾರ್ಹತೆ:
ಎಕ್ಸಿಕ್ಯೂಟಿವ್ ಟ್ರೈನಿ (ಎಲೆಕ್ಟ್ರಿಕಲ್/ ಮೆಕ್ಯಾನಿಕಲ್​)- ಪದವಿ, ಬಿ.ಎಸ್ಸಿ
ಎಕ್ಸಿಕ್ಯೂಟಿವ್ ಟ್ರೈನಿ (ಫೈನಾನ್ಸ್)- ಸಿಎ, ಸಿಎಂಎ
ಎಕ್ಸಿಕ್ಯೂಟಿವ್ ಟ್ರೈನಿ (ಹ್ಯೂಮನ್ ರಿಸೋರ್ಸಸ್)- ಪದವಿ, ಸ್ನಾತಕೋತ್ತರ ಪದವಿ, ಎಂಬಿಎ

ವಯೋಮಿತಿ:
ನಾರ್ತ್ ಈಸ್ಟರ್ನ್ ಎಲೆಕ್ಟ್ರಿಕ್ ಪವರ್ ಕಾರ್ಪೊರೇಷನ್ ಲಿಮಿಟೆಡ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಮೇ 1, 2024ಕ್ಕೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 30 ವರ್ಷ ಮೀರಿರಬಾರದು.

ವಯೋಮಿತಿ:
SC/ST ಅಭ್ಯರ್ಥಿಗಳು- 5 ವರ್ಷ

ವೇತನ:
ಮಾಸಿಕ ₹ 50,000- 1,60,000

ಉದ್ಯೋಗದ ಸ್ಥಳ:
ಭಾರತದಲ್ಲಿ ಎಲ್ಲಿ ಬೇಕಾದರೂ

ಅರ್ಜಿ ಶುಲ್ಕ:
SC/ST/ESM/ಮಹಿಳೆ/PwBD ಅಭ್ಯರ್ಥಿಗಳು: Nil
ಸಾಮಾನ್ಯ/EWS/OBC ಅಭ್ಯರ್ಥಿಗಳು: ರೂ.560/-
ಪಾವತಿ ವಿಧಾನ: ಆನ್‌ಲೈನ್

ಆಯ್ಕೆ ಪ್ರಕ್ರಿಯೆ:
ಗೇಟ್-2024 ಅಂಕಗಳು
ಸಂದರ್ಶನ

ಅರ್ಜಿ ಹಾಕೋದು ಹೇಗೆ?
ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅಪ್ಲೈ ಮಾಡಬೇಕು ಎಂದು ನೋಟಿಫಿಕೇಶನ್​ನಲ್ಲಿ ತಿಳಿಸಲಾಗಿದೆ. ನೇರವಾಗಿ ಅಪ್ಲೈ ಮಾಡಲು ಲಿಂಕ್​ನ್ನು ಈ ಕೆಳಗೆ ನೀಡಲಾಗಿದೆ.

Ad
Ad
Nk Channel Final 21 09 2023
Ad