Bengaluru 22°C
Ad

ಏರ್ ವಿಂಗ್ ಎನ್‌ಸಿಸಿ ಸೇರಲು ಅರ್ಜಿ ಆಹ್ವಾನ : ಜುಲೈ 9 ಕೊನೆಯ ದಿನ

ನಂ. 2 ಕರ್ನಾಟಕ ಟೆಕ್ನಿಕಲ್ ಏರ್ ಸ್ಕ್ವಾಡ್ರನ್ ಎನ್.ಸಿ.ಸಿ ವತಿಯಿಂದ ಏರ್ ವಿಂಗ್ ಎನ್‌ಸಿಸಿ 2024-27 ನೇ ಬ್ಯಾಚ್‌ಗೆ ಜೂ. 22ರಿಂದ ನೋಂದಣಿ ಪ್ರಾರಂಭಗೊಂಡಿದ್ದು, ಜುಲೈ 9 ಅರ್ಜಿ ಸಲ್ಲಿಸಲು ಕಡೆಯ ದಿನವಾಗಿದೆ ಎಂದು ಕಮಾಂಡಿಂಗ್ ಅಧಿಕಾರಿ ಗ್ರೂಪ್ ಕ್ಯಾಪ್ಟನ್ ರಾಜೇಶ್ ಚಂದ್ರ ತಿಳಿಸಿದ್ದಾರೆ.

ಬೆಂಗಳೂರು: ನಂ. 2 ಕರ್ನಾಟಕ ಟೆಕ್ನಿಕಲ್ ಏರ್ ಸ್ಕ್ವಾಡ್ರನ್ ಎನ್.ಸಿ.ಸಿ ವತಿಯಿಂದ ಏರ್ ವಿಂಗ್ ಎನ್‌ಸಿಸಿ 2024-27 ನೇ ಬ್ಯಾಚ್‌ಗೆ ಜೂ. 22ರಿಂದ ನೋಂದಣಿ ಪ್ರಾರಂಭಗೊಂಡಿದ್ದು, ಜುಲೈ 9 ಅರ್ಜಿ ಸಲ್ಲಿಸಲು ಕಡೆಯ ದಿನವಾಗಿದೆ ಎಂದು ಕಮಾಂಡಿಂಗ್ ಅಧಿಕಾರಿ ಗ್ರೂಪ್ ಕ್ಯಾಪ್ಟನ್ ರಾಜೇಶ್ ಚಂದ್ರ ತಿಳಿಸಿದ್ದಾರೆ.

ಅಭ್ಯರ್ಥಿಗಳು ಪಿಯುಸಿ ಪ್ರಥಮ ಅಥವಾ ಪ್ರಥಮ ವರ್ಷದ ಪದವಿಯಲ್ಲಿ ಬೆಂಗಳೂರಿನ ಯಾವುದಾದರೂ ಮಾನ್ಯತೆ ಪಡೆದ ವಿದ್ಯಾಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರಬೇಕು. ಎನ್.ಸಿ.ಸಿ ಸೇರಬಯಸುವ ವಿದ್ಯಾರ್ಥಿಗಳು ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ಚಿತ್ರದಲ್ಲಿ ನೀಡಿರುವ ಕ್ಯೂ.ಆರ್. ಕೋಡ್ ಮೂಲಕ ನೋಂದಣಿ ಮಾಡಿಕೊಳ್ಳಬಹುದು ಎಂದು ಅವರು ತಿಳಿಸಿದ್ದಾರೆ.

ವಿಳಾಸ: ನಂ. 2 ಕರ್ನಾಟಕ ಟೆಕ್ನಿಕಲ್ ಏರ್ ಸ್ಕ್ವಾಡ್ರನ್ ಎನ್.ಸಿ.ಸಿ., ಯುವಿಸಿಇ ಕ್ಯಾಂಪಸ್, ಕೆ.ಆರ್. ಸರ್ಕಲ್ ಹತ್ತಿರ, ಬೆಂಗಳೂರು, ದೂರವಾಣಿ ಸಂಖ್ಯೆ 8788506566/9108939392 ಗೆ ಸಂಪರ್ಕಿಸಬಹುದಾಗಿದೆ.

 

 

Ad
Ad
Nk Channel Final 21 09 2023
Ad